ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅವರು ವಿಶ್ವ ರೈತ ದಿನಾಚರಣೆ ಅಂಗವಾಗಿ ತಾಲೂಕಿನ ವಿ.ಸಿ. ಹೊಸೂರು ಗ್ರಾಮದ ಯುವ ರೈತ ಯೋಗೀಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಇಂದು ಯುವಕರು ಸರ್ಕಾರಿ ಕೆಲಸದ ಬೆನ್ನು ಹತ್ತಿದ್ದು ಎಲ್ಲರಿಗೂ ಉದ್ಯೋಗ ದೊರಕದೆ ಪರಿತಪಿಸುತ್ತಿದ್ದಾರೆ. ಆದರೆ ತಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ಅಂದರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ದುಡಿದು ಶ್ರಮಪಟ್ಟು ಕೃಷಿ ಮಾಡಿದರೆ ಯಶಸ್ಸು ಗಟ್ಟಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಸ್ವಾವಲಂಬಿಯಾಗಿ ನೆಮ್ಮದಿಯ ಬದುಕನ್ನು ನಡೆಸಬಹುದೆಂದರು. ಸರ್ಕಾರ ದೇಶದ ಬೆನ್ನೆಲುಬು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು. ಅವರ ಆದಾಯ ದ್ವಿಗುಣ ಗೊಂಡು ನಿಗದಿತ ಆದಾಯ ಬರುವಂತಾದರೆ ರೈತ ದಿನಾಚರಣೆಗೆ ಆರ್ಥ ಬರುತ್ತದೆ ಎಂದರು.ವಿ.ಸಿ. ಹೊಸೂರಿನ ಯುವ ರೈತ ನಾಗೇಶ್ ಇಂಜಿನಿಯರ್ ಆಗಿ ಲಕ್ಷಾಂತರ ಸಂಬಳ ಬರುತ್ತಿದ್ದು, ವಿದೇಶಿ ನೆಲದಲ್ಲಿ ಇದ್ದರು. ಆದರೆ ಆವೃತ್ತಿಯನ್ನು ತೊರೆದು ಇಂದು ಸ್ವಗ್ರಾಮಕ್ಕೆ ಆಗಮಿಸಿ ಕೃಷಿಯನ್ನು ಅವಲಂಬಿಸಿ ಸಾವಯವ ಕೃಷಿ ಅವಲಂಬಿಸುವ ಮೂಲಕ ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಯುವಕರಿಗೆ ರೈತರಿಗೆ ಮಾದರಿಯಾಗಿದ್ದಾರೆ. ಇಂಥವರಿಗೆ ರೈತ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ರೈತ ಯೋಗೀಶ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಇರುವ ನೆಮ್ಮದಿ ಲಕ್ಷ ಲಕ್ಷ ಸಂಬಳ ಬರುವ ಕೆಲಸದಲ್ಲಿ ಸಿಗುವುದಿಲ್ಲ. ಯೋಜನಾ ಬದ್ಧವಾಗಿ ವ್ಯವಸಾಯ ಮಾಡಿದರೆ ಕೃಷಿ ಲಾಭದಾಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಸೋಮೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರಸ್ವಾಮಿ, ಮುಖಂಡರಾದ ರವಿ ಹಾಜರಿದ್ದರು.---------
24ಸಿಎಚ್ಎನ್13ವಿಶ್ವ ರೈತ ದಿನಾಚರಣೆ ಅಂಗವಾಗಿ ಚಾಮರಾಜನಗರ ತಾಲೂಕಿನ ವಿ ಸಿ ಹೊಸೂರು ಗ್ರಾಮದ ಯುವ ರೈತ ಯೋಗೀಶ್ ಅವರನ್ನು ಸನ್ಮಾನಿಸಲಾಯಿತು.