ಲಕ್ಷ್ಮೇಶ್ವರ: ಯುವಕರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರ್ಯ ಮಾಡಬೇಕು ಎಂದು ಬಸಣ್ಣ ಬೆಂಡಿಗೇರಿ ಹೇಳಿದರು.
ಯುವಕರು ಮನೆತನ, ಸಮಾಜದಲ್ಲಿ ಆಗಲಿ ಜವಾಬ್ದಾರಿಯಿಂದ ವಿಮುಕ್ತರಾಗುತ್ತಾ ಹೋಗುತ್ತಿದ್ದಾರೆ, ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜತೆಗೆ,ಸಂಸ್ಕಾರ ಕಲಿಸುವುದು ಆಗತ್ಯವಾಗಿದೆ. ಸಣ್ಣವರಿದ್ದಾಗ ದುಡಿಯುವ ಮನಸ್ಸು, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವುದು, ಏನ್ನನಾದರೂ ಸಾಧಿಸುವ ಛಲ ಹೊಂದಬೇಕು. ಸಮಾಜದಲ್ಲಿ ಇರುವ ಹಿರಿಯರು ಮಕ್ಕಳಲ್ಲಿನ ತಪ್ಪುಗಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕು. ಅದೇ ರೀತಿ ಹಿರಿಯರು ಇಂತಹ ಸಂಘಟನೆ ಮಾಡಿ ಒಂದಾಗಿ ಹೋಗುವುದರಿಂದ ಸರ್ಕಾರದ ಸೌಲಭ್ಯ ಪಡೆಯಬಹುದು, ಪ್ರಯಾಗ ರಾಜಯಾತ್ರೆ ಶ್ರೇಷ್ಠ ಅನುಭವ ಅವಿಸ್ಮರಣೀಯ, ಮೊದಲು ಮನಸ್ಥಿತಿ ಸರಿಯಾಗಿ ಇದ್ದರೆ ಇಂತಹ ಯಾತ್ರೆ ಗಳಿಂದ ಪುಣ್ಯ ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಈ ವೇಳೆ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಉಪಾಧ್ಯಕ್ಷ ಚಂಬಣ್ಣ ಬಾಳಿ ಕಾಯಿ, ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ, ನಾಗರಾಜ ಹೇಮಗಿರಿಮಠ, ಎಸ್.ಪಿ. ಪಾಟೀಲ್, ಸಿ.ವಿ. ಕುಲಕರ್ಣಿ, ಡಾ. ಶಿವಾನಂದ ಹೂವಿನ, ಚಂದ್ರಶೇಖರ ಹೂಗಾರ, ಸಿ.ಎಸ್. ಕೋಟಿಮಠ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಅಳಗವಾಡಿ, ಎಸ್.ಕೆ.ಗಂಗಾಯಿ, ಗಂಗವ್ವ ಉಳ್ಳಾಗಡ್ಡಿ, ಅಕ್ಕಮಹಾದೇವಿ ಕಲ್ಲಪ್ಪನವರ ಸೇರಿದಂತೆ ಅನೇಕರು ಇದ್ದರು. ಈರಣ್ಣ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು.