ಕನ್ನಡಪ್ರಭ ವಾರ್ತೆ ಪಾಂಡವಪುರ
ಹೈನುಗಾರಿಕೆ ಉತ್ತೇಜನೆಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಯುವಜನತೆ ಅದನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ತಾಲೂಕಿನ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೈನುಗಾರಿಕೆಯನ್ನು ಹೈನೋದ್ಯಮವಾಗಿ ಬೆಳೆಸಬೇಕು. ಇದು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿದೆ ಎಂದರು.
ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಜತೆಗೆ ಷೇರುದಾರ ರೈತರು ಗುಂಪುವಿಮೆ ಮಾಡಿಸಬೇಕು. ಚಿನಕುರಳಿ ಡೇರಿ ಪ್ರತಿ ವರ್ಷದಂತೆಯೇ ಈ ಸಾಲಿನಲ್ಲೂ ಸಹ 16ಲಕ್ಷ ಲಾಭದಾಯಕವಾಗಿ ನಡೆಯುತ್ತಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲಾ ಷೇರುದಾರರು, ಆಡಳಿತ ಮಂಡಳಿಯ ನಿರ್ದೇಶಕರಿಗೆ ಅಭಿನಂಧನೆಸಲ್ಲಿಸುತ್ತೇನೆ ಎಂದರು.ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಮಾತನಾಡಿ, ಸಹಕಾರ ಸಂಘಗಳು ನಮ್ಮ ಮನೆಗಳು ಇದ್ದಂತೆ. ನಾವೆಲ್ಲರು ಜತೆಗೂಡಿ ಮನೆಯಂತಿರುವ ಸಹಕಾರ ಸಂಘಗಳು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು, ಚಿನಕುರಳಿ ಡೇರಿ ಮತ್ತು ಸೊಸೈಟಿ ಎರಡು ಸಹ ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಆರಂಭಗೊಂಡು ಲಾಭದಾಯಕವಾಗಿ ಬೆಳೆದಿವೆ. ಇದಕ್ಕೆ ಎಲ್ಲರ ಷೇರುದಾರ ರೈತರ ಪರಿಶ್ರಮವೇ ಕಾರಣ ಎಂದರು.
ಇದೇ ವೇಳೆ ಡೇರಿ ಅಧಿಕ ಹಾಲು ಪೂರೈಕೆ ಮಾಡಿದ ರೈತರಿಗೆ ಡೇರಿಯಿಂದ ಅಭಿನಂದಿಸಲಾಯಿತು. ಸಭೆಯಲ್ಲಿವಿ.ಎಸ್.ಎಸ್.ಎನ್.ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾಪಂ ಸದಸ್ಯ ಸಿ.ಎ.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಡಾ.ಸಂತೋಷ್, ಡಾ.ಪ್ರಕಾಶ್, ಮಾರ್ಗ ವಿಸ್ತರ್ಣಾಧಿಕಾರಿ ನಾಗೇಂದ್ರಕುಮಾರ್, ಡೇರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಆರ್.ವರದರಾಜು, ಸಿ.ಎಂ.ರಮೇಶ್, ಸಿ.ಎನ್.ಲೋಕೇಶ್, ಸಿ.ಎಸ್.ಕೆಂಪೇಗೌಡ, ಸಿ.ಎ.ಮಂಜುನಾಥ್, ಸಿ.ಬಿ.ನಾರಾಯಣಚಾರಿ, ಯೋಗೇಂದ್ರ, ವರಲಕ್ಷ್ಮೀ, ಯಶೋಧಮ್ಮ, ಹೇಮಾ, ಮಾಜಿ ಅಧ್ಯಕ್ಷ ವಾಸುದೇವ್, ಗಂಗಾಧರ್, ಕಾಳೇಗೌಡ, ಶಿಂಢಬೋಗನಹಳ್ಳಿ ನಾಗಣ್ಣ, ಕಾರ್ಯದರ್ಶಿ ಸಿ.ಕೆ.ಲೋಕೇಶ್, ಸಿ.ಆರ್.ಯೋಗೇಶ್, ಆನಂದ್, ಜಗದೀಶ್, ಆದರ್ಶ, ಸಂಜು ಹಾಜರಿದ್ದರು.