ರಬಕವಿ-ಬನಹಟ್ಟಿ: ದೇಶ ಸೇವೆ ಈಶ ಸೇವೆ ಎನ್ನುವುದು ಇದಕ್ಕೆ. ತೀವ್ರ ಅನಾರೋಗ್ಯದ ಮಧ್ಯೆಯೂ ಯುವಕನೋರ್ವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ. ರಬಕವಿಯ ಪಿಂಕ್ ಬೂತ್‌ನಲ್ಲಿ ಯುವಕನೋರ್ವ ತೀವ್ರ ಅಸ್ವಸ್ಥರಾಗಿದ್ದರೂ ಆಸ್ಪತ್ರೆಯಲ್ಲಿ ವೈದ್ಯರ ಅನುಮತಿ ಪಡೆದು ಆಸ್ಪತ್ರೆಯಿಂದಲೇ ನೇರವಾಗಿ ರಬಕವಿಯ ಮತಗಟ್ಟೆ ಸಂಖ್ಯೆ ೯೨ ಕ್ಕೆ ಆಗಮಿಸಿ ಮತದಾನ ಮಾಡಿ ಮರಳಿ ಆಸ್ಪತ್ರೆಗೆ ತೆರಳಿರುವ ಘಟನೆ ನಡೆಯಿತು.