ಜಿಗಜಿಣಗಿಯವರಿಂದ ಸಾಧನೆ ಶೂನ್ಯ: ಆಲಗೂರ

KannadaprabhaNewsNetwork |  
Published : Mar 26, 2024, 01:19 AM ISTUpdated : Mar 26, 2024, 01:20 AM IST
ಕೊಲ್ಹಾರ ಪಟ್ಟಣದಲ್ಲಿ ನಡೆದ ಮತಯಾಚನೆ ಸಭೆಯಲ್ಲಿ ಅಭ್ಯರ್ಥಿ ರಾಜು ಆಲಗೂರ | Kannada Prabha

ಸಾರಾಂಶ

ವಿಜಯಪುರ: ಇದು ಬದಲಾವಣೆಯ ಕಾಲ ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ. ಇದು ವಾಸ್ತವ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಹೇಳಿದರು. ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಎರಡು ಸಲ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ.

ಕನ್ನಡಪ್ರಭ ವಾರ್ತೆ ವಿಜಯಪುರ

ಇದು ಬದಲಾವಣೆಯ ಕಾಲ ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ. ಇದು ವಾಸ್ತವ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಹೇಳಿದರು.

ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಎರಡು ಸಲ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ. ಜಿಲ್ಲೆಗಾಗಿ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳಿಲ್ಲ. ಇದು ಬದಲಾವಣೆ ಕಾಲವಾಗಿದ್ದು, ನನಗೆ ಅವಕಾಶ ನೀಡಿದರೆ ನನ್ನ ಅನುಭವ ಹಾಗೂ ಪ್ರಾಮಾಣಿಕ ಶ್ರಮದಿಂದ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಾತನಾಡಿ, ಮೂರು ಸಲ ಅಧಿಕಾರದಲ್ಲಿರುವ ಹಾಲಿ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗವಾಗಿಲ್ಲ. ಸದ್ಯದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು, ಅಭಿವೃದ್ಧಿ ಪರ ಚಿಂತಕರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ನಮಗೆಲ್ಲ ಅನಿವಾರ್ಯವಾಗಿದೆ. ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಸಾಮಾನ್ಯ ಜನರೂ ಜಿಗಜಿಣಗಿಯವರಿಂದ ಜಿಗುಪ್ಸೆ ಹೊಂದಿದ್ದಾರೆ ಎಂದು ಹೇಳಿದರು.

ಈ ವೇಳ‍ೆ ಮಲ್ಲು ದೇಸಾಯಿ, ಅಧ್ಯಕ್ಷ ಮುಸ್ಕಾನ್ ಶಿರಬೂರ, ರಫೀಕ್ ಪಕಾಲಿ, ಮುಖಂಡರಾದ ಬಿ. ಎಸ್. ಪತಂಗಿ, ಕಮಲವ್ವ ಮಾಕಾಳಿ, ಗಂಗಾಧರ ಸಂಬಣ್ಣಿ, ಉಸ್ಮಾನ್ ಪಟೇಲ, ದಸ್ತೀಗರಸಾಬ್ ಸೇರಿದಂತೆ ಸ್ಥಳೀಯರು, ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ