ಗರಿಗೆದರಿದ ಜಿಪಂ, ತಾಪಂ ರಾಜಕೀಯ

KannadaprabhaNewsNetwork |  
Published : Oct 16, 2026, 02:45 AM IST
ಕಕಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ದೇವರಹಿಪ್ಪರಗಿ ತಾಲೂಕಿನಲ್ಲಿ 3 ಜಿಲ್ಲಾ ಪಂಚಾಯಿತಿ ಹಾಗೂ 09 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಮುಂಬರುವ ತಾಪಂ, ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಹಾಗೂ ಚುನಾವಣಾ ಆಕಾಂಕ್ಷಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ದೇವರಹಿಪ್ಪರಗಿ ತಾಲೂಕಿನಲ್ಲಿ 3 ಜಿಲ್ಲಾ ಪಂಚಾಯಿತಿ ಹಾಗೂ 09 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಮುಂಬರುವ ತಾಪಂ, ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಹಾಗೂ ಚುನಾವಣಾ ಆಕಾಂಕ್ಷಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಆದರೆ, ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಯಾವ ಕ್ಷೇತ್ರದಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ದೊರೆಯಲಿದೆ? ಎಂಬ ಚರ್ಚೆ ಹಾಗೂ ಲೆಕ್ಕಾಚಾರಗಳು ನಡೆಯುತ್ತಿವೆ. ತುಂಬಾ ಆಸೆ ಇಟ್ಟುಕೊಂಡವರಿಗೆ ಮೀಸಲಾತಿ ಹೊಡೆತ ನೀಡಿದರೆ, ಕೆಲವರಿಗೆ ಈ ಮೀಸಲು ಅನಿರೀಕ್ಷಿತವಾಗಿ ಲಾಭ ತಂದುಕೊಟ್ಟಿದೆ.

ಹಲವು ಆಕಾಂಕ್ಷಿಗಳಲ್ಲಿ ತಾಪಂ, ಜಿಪಂ ಭರವಸೆ ಮೂಡಿಸಿದೆ. ಆದರೂ ಲೆಕ್ಕಾಚಾರದಲ್ಲಿ ತೊಡಗುತ್ತಿದ್ದಾರೆ ಆಕಾಂಕ್ಷಿಗಳು. ಇದಕ್ಕೂ ಮೊದಲು ಸ್ಥಳೀಯ ಮುಖಂಡರು, ಪಕ್ಷದ ಹಿರಿಯರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅಖಾಡವನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೀಸಲಾತಿಯಿಂದ ಬದಲಾದ ರಾಜಕೀಯ ಲೆಕ್ಕಾಚಾರ ತಾಪಂ ಮತ್ತು ಜಿಪಂ ಚುನಾವಣೆಗಳು ಗ್ರಾಮೀಣ ಮಟ್ಟದಲ್ಲಿ ರಾಜಕೀಯವಾಗಿ ಮಹತ್ವ ಪಡೆದಿವೆ. ಕಾರಣ ಮುಂಬರಲಿರುವ ವಿಧಾನಸಭೆಗೆ ಇಲ್ಲಿ ಗೆಲ್ಲುವವರೇ ಆಸರೆಯಾಗುತ್ತಾರೆ ಎಂಬ ದೂರದ ಆಲೋಚನೆ ಕೂಡ ಇಲ್ಲಿ ಕೈ ಹಿಡಿಯಬಹುದು.

ಮೀಸಲಾತಿ ಹೊಂದಿಕೆಯಾಗದ ಕ್ಷೇತ್ರಗಳಲ್ಲಿನ ಇತರರು ಪರ್ಯಾಯ ಕ್ಷೇತ್ರಗಳತ್ತ ಮುಖ ಮಾಡುತ್ತಿರುವುದು ಕೂಡ ಕೇಳಿಬರುತ್ತಿದೆ. ಮೀಸಲಾತಿಯು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಪಕ್ಷಗಳ ಮುಖಂಡರು ಕೂಡ ಕ್ಷೇತ್ರವಾರು ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು:

ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಪಕ್ಷದ ಸಂಘಟನೆಯಲ್ಲಿ ತೊಡಗಿರುವವರು, ಸ್ಥಳೀಯವಾಗಿ ಜನಸಂಪರ್ಕ ಹೊಂದಿರುವವರು ಹಾಗೂ ಹಿಂದಿನ ಚುನಾವಣೆಗಳಲ್ಲಿ ಸಕ್ರಿಯರಾಗಿದ್ದವರು ತಮ್ಮ ತಮ್ಮ ಪ್ರಯತ್ನಗಳನ್ನು ತೆರೆಮರೆಯಲ್ಲಿ ಆರಂಭಿಸಿದ್ದಾರೆ. ಗ್ರಾಮಗಳಲ್ಲಿನ ಪ್ರಮುಖರನ್ನು ಭೇಟಿ ಮಾಡುವುದು, ಕಾರ್ಯಕರ್ತರೊಂದಿಗೆ ಚರ್ಚಿಸುವುದು ಹಾಗೂ ಪಕ್ಷದ ನಾಯಕರ ಗಮನ ಸೆಳೆಯುವುದು ಆಕಾಂಕ್ಷಿಗಳ ಮುಂದಿನ ಕಾರ್ಯತಂತ್ರವಾಗಿದೆ.

ಮೀಸಲಾತಿ ಬದಲಾವಣೆ ಆಗುತ್ತಾ?:

ತಾಪಂ, ಜಿಪಂ ಕ್ಷೇತ್ರಗಳ ಮೀಸಲಾತಿಗೆ ಅಕ್ಷೇಪಣೆ ಸಲ್ಲಿಸಲು ಅ.19ರ ಸಂಜೆ 5ಗಂಟೆಯವರೆಗೆ ಅವಕಾಶವಿದೆ. ಆಕ್ಷೇಪಣೆ ಪರಿಶೀಲನೆ ಬಳಿಕ ಕ್ಷೇತ್ರವಾರು ಮೀಸಲಾತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಂತಿಮ ಮೀಸಲಾತಿ ಪ್ರಕಟವಾಗುವವರೆಗೆ ಆಕಾಂಕ್ಷಿಗಳ ಲೆಕ್ಕಾಚಾರ ಮುಂದುವರಿಯಲಿದೆ. ಕೋರವಾರ ಜಿಪಂ ಮೀಸಲಾತಿ ಕಳೆದ ಬಾರಿ ಬಂದ ಮೀಸಲಾತಿ ಬಂದಿದೆ ಎನ್ನುವುದು ಹಲವಾರ ವಾದ. ಆಕ್ಷೇಪಣೆಯ ನಂತರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಿದೆ.

ಮೀಸಲಾತಿ ಪ್ರಕಟವಾದ ನಂತರ ಗ್ರಾಮೀಣ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿದ್ದಂತೂ ಸತ್ಯ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ, ಪಕ್ಷಗಳ ಕಾರ್ಯತಂತ್ರ ಹಾಗೂ ಸ್ಥಳೀಯ ರಾಜಕೀಯ ಸಮೀಕರಣಗಳ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಚುನಾವಣಾ ದಿನಾಂಕ ಮತ್ತು ಪಕ್ಷಗಳ ಅಭ್ಯರ್ಥಿಗಳ ಘೋಷಣೆಯ ಬಳಿಕ ರಾಜಕೀಯ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆಅಭ್ಯರ್ಥಿಗಳ ಆಯ್ಕೆ ಕುತೂಹಲ ಉಂಟಾಗಿದೆ.

-------------

ಬಾಕ್ಸ್‌....

ಜಿಲ್ಲಾ ಪಂಚಾಯತಿ 3 ಕ್ಷೇತ್ರಗಳ ವಿವರ

1. ಮುಳಸಾವಳಗಿ (ಸಾಮಾನ್ಯ). 2.ಕೋರವಾರ (ಅನುಸೂಚಿತ ಜಾತಿ ಮಹಿಳೆ). 3. ಹುಣಶ್ಯಾಳ (ಸಾಮಾನ್ಯ ಮಹಿಳೆ)

----------

ತಾಲೂಕು ಪಂಚಾಯಿತಿ 14 ಕ್ಷೇತ್ರಗಳ ವಿವರ

1. ಚಿಕ್ಕರೂಗಿ - (ಅನುಸೂಚಿತ ಪಂಗಡ ಮಹಿಳೆ)

2. ಮುಳಸಾವಳಗಿ - (ಹಿಂದುಳಿದ ವರ್ಗ "ಅ "ಮಹಿಳೆ)

3. ಯಾಳವಾರ - (ಸಾಮಾನ್ಯ ಮಹಿಳೆ)

4. ಮಣೂರ- (ಅನುಸೂಚಿತ ಜಾತಿ ಮಹಿಳೆ)

5. ಜಾಲವಾದ - (ಸಾಮಾನ್ಯ)

6. ಕೋರವಾರ - (ಸಾಮಾನ್ಯ)

7. ಹುಣಶ್ಯಾಳ- (ಸಾಮಾನ್ಯ ಮಹಿಳೆ)

8. ಕೊಂಡಗೂಳಿ - (ಸಾಮಾನ್ಯ)

9. ಯಲಗೋಡ - (ಅನುಸೂಚಿತ ಜಾತಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರಶೈವ–ಲಿಂಗಾಯತ ವಿಭಜನೆ ರಾಜಕೀಯ ಷಡ್ಯಂತ್ರ
ಉ.ಕ ಜನರನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ