ರಾಮನಗರ: ರಾಜ್ಯದಲ್ಲಿ ಬರ ಆವರಿಸಿರುವುದರಿಂದ ಗ್ರಾಮೀಣರು ನಗರ ಪ್ರದೇಶಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಆ.15ರಿಂದ ಸೆಪ್ಟೆಂಬರ್ 15ರವರೆಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜಾಬ್ ಕಾರ್ಡ್ ಮೇಳವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಯೂ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಜಿಪಂ ಅಗತ್ಯ ಸಿದ್ಧತೆ ಕೈಗೊಂಡಿದೆ.
ಪ್ರಸ್ತುತ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳು ನಡೆಯದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಇದರಿಂದ ಅವರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇಂತಹವರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಾರ್ ಅಂಡ್ ಆಜೀವಿಕ ಮಿಷನ್(ಗ್ರಾಮೀಣ) ಯೋಜನೆಯಡಿ ಸ್ವಗ್ರಾಮದಲ್ಲೇ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಮೇಳದ ಉದ್ದೇಶ.
ಎಲ್ಲ ಕೂಲಿಕಾರರಿಗೆ ಅಕುಶಲ ಕೆಲಸ:ಜುಲೈ 1ರಿಂದ ಆರಂಭಗೊಂಡಿರುವ ವಿಜಿ ಜಿ ರಾಮ್ ಜಿ, ನೋಂದಾಯಿತ ಹಾಗೂ ಇ-ಕೆವೈಸಿ ಪೂರ್ಣಗೊಂಡಿರುವ ಎಲ್ಲಾ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ರಾಜ್ಯದಲ್ಲಿರುವ ಒಟ್ಟು 69.51 ಲಕ್ಷ ನೋಂದಾಯಿತ ಉದ್ಯೋಗ ಚೀಟಿಗಳಲ್ಲಿ ಕೇವಲ 36.87 ಲಕ್ಷ ಕುಟುಂಬಗಳು ಮಾತ್ರ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆ ಹೆಚ್ಚಿಸಲು ಹಾಗೂ ಪ್ರತಿದಿನ ಕನಿಷ್ಠ 5 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಮಾಹೆಯಲ್ಲಿ ಒಟ್ಟು 1.50 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಸಾಧಿಸಲು 2026ರ ಆ.15ರಿಂದ ಸೆ.15ರವರೆಗೆ ರಾಜ್ಯದ ಎಲ್ಲಾ ಗ್ರಾಪಂ ಮಟ್ಟದಲ್ಲಿ ''''''''ಜಾಬ್‌ಕಾರ್ಡ್ ಮೇಳ'''''''' ಆಯೋಜಿಸಲಾಗಿದೆ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಲಭ್ಯವಿರುವ ಅಕುಶಲ ಕೆಲಸ ಹಾಗೂ ವೈಯಕ್ತಿಕ ಸವಲತ್ತುಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ, ಗ್ರಾಮೀಣ ಭಾಗದ ದುರ್ಬಲವರ್ಗದವರ ಭಾಗವಹಿಸುವಿಕೆ ಹೆಚ್ಚಿಸುವುದು. ಪ್ರತಿದಿನ ಕನಿಷ್ಠ 5 ಲಕ್ಷ ಮಾನವ ದಿನಗಳಂತೆ ಮಾಹೆಗೆ 1.50 ಕೋಟಿ ಮಾನವ ದಿನಗಳ ಕೆಲಸವನ್ನು ಗ್ರಾಮೀಣರಿಗೆ ಒದಗಿಸುವ ಮೂಲಕ ಅವರ ಅರ್ಥಿಕ ಹಾಗೂ ಜೀವನೋಪಾಯ ಭದ್ರತೆ ಕಾಯ್ದುಕೊಳ್ಳುವುದಾಗಿದೆ.
ಕೋಟ್ ............
-ಅನ್ಮೋಲ್ ಜೈನ್ , ಸಿಇಒ, ಜಿಪಂ, ಬೆಂಗಳೂರು ದಕ್ಷಿಣ.
ಅಭಿಯಾನದಡಿ ಕೈಗೊಳ್ಳುವ ಕಾಮಗಾರಿಗಳು:
2. ಗ್ರಾಮೀಣ ಕುಟುಂಬಗಳ ಜೀವನೋಪಾಯದ ವೈಯಕ್ತಿಕ ಕಾಮಗಾರಿಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 05 ಫಲಾನುಭವಿಗಳಿಗೆ ಜಾನುವಾರು ಶೆಡ್ ನಿರ್ಮಿಸಿಕೊಳ್ಳಲು ಆದ್ಯತೆ ನೀಡುವುದು.
4. ವಿಬಿ- ಜಿ ರಾಮ್ ಜಿ ಯೋಜನೆಯಡಿ ಅನುಮತಿಸಿದ 318 ಕಾಮಗಾರಿಗಳನ್ನು ಅನುಷ್ಠಾನಿಸಲು ಅಗತ್ಯ ಕ್ರಮಕೈಗೊಳ್ಳುವುದು.
ಬಾಕ್ಸ್ ...............ತಾಲೂಕುನೋಂದಣಿ ಜಾಬ್‌ಕಾರ್ಡ್‌ಸಕ್ರಿಯ ಕಾರ್ಡ್‌ಗಳು
ಚನ್ನಪಟ್ಟಣ42,64725,727ಕನಕಪುರ53,59334,236
ಹಾರೋಹಳ್ಳಿ17,7578,757ಮಾಗಡಿ40,32319,742
ರಾಮನಗರ31,68514,422ಒಟ್ಟು1,86,0051,02,884
14ಕೆಆರ್ ಎಂಎನ್ 1,2.ಜೆಪಿಜಿ1.ಬೆಂ.ದಕ್ಷಿಣ ಜಿಲ್ಲಾ ಪಂಚಾಯಿತಿ
2.ಅನ್ಮೋಲ್ ಜೈನ್ , ಸಿಇಒ, ಜಿಪಂ, ಬೆಂ.ದಕ್ಷಿಣ