ವಲಯ ಅರಣ್ಯ ಇಲಾಖೆ ಕಚೇರಿ ಕಟ್ಟಡಕ್ಕೆ ಬೇಕಿದೆ ಚಿಕಿತ್ಸೆ

KannadaprabhaNewsNetwork |  
Published : Oct 06, 2026, 03:45 AM IST
ದೋಣ ಗುಡಿಗೆ ಗ್ರಾಮದಲ್ಲಿ ಸಿಟಿ ರವಿ ಅವರ ಅನುದಾನದಲ್ಲಿ ದಶಕಗಳ ಹಿಂದೆ ನಿರ್ಮಾಣವಾದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ. | Kannada Prabha

ಸಾರಾಂಶ

ಆಲ್ದೂರು ಇತ್ತೀಚಿನ ಕೆಲವು ವರ್ಷಗಳಿಂದ ಮಲೆನಾಡಿನಲ್ಲಿ ವನ್ಯಜೀವಿ- ಮಾನವ ಸಂಘರ್ಷ, ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದು ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅವುಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

41 ವರ್ಷಗಳ ಹಳೆಯ ಕಟ್ಟಡ, ಗೋಡೆಗಳು ಶಿಥಿಲ । ನೂತನ ಕಟ್ಟಡ ನಿರ್ಮಿಸಲು ಜನರ ಒತ್ತಾಯ ಜೋಸೆಫ್.ಎಂ. ಆಲ್ದೂರು

ಕನ್ನಡಪ್ರಭ ವಾರ್ತೆ ಆಲ್ದೂರು ಇತ್ತೀಚಿನ ಕೆಲವು ವರ್ಷಗಳಿಂದ ಮಲೆನಾಡಿನಲ್ಲಿ ವನ್ಯಜೀವಿ- ಮಾನವ ಸಂಘರ್ಷ, ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದು ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅವುಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಕಠಿಣ ಕೆಲಸ ನಿರ್ವಹಿಸುತ್ತಾ ಜೀವನ ಹಂಗು ತೊರೆದು ಕೆಲಸ ಮಾಡುವ ಅರಣ್ಯ ಸಿಬ್ಬಂದಿಯ ಕಚೇರಿಯೂ ಶಿಥಿಲಾವಸ್ಥೆಯಲ್ಲಿದ್ದು ಕಚೇರಿಯಲ್ಲಿರಲು ಆತಂಕ ಮೂಡಿಸುವಂತಿದೆ. ಆಲ್ದೂರಿನಲ್ಲಿ ವಲಯ ಅರಣ್ಯ ಇಲಾಖೆ ಕಚೇರಿ ಕಟ್ಟಡ ಮತ್ತು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಮಳೆಗಾಲದಲ್ಲಿ ಕಟ್ಟಡ ಗೋಡೆಗಳಲ್ಲಿ ಮಳೆಯ ನೀರು ಕಸಿಯುತ್ತಿದ್ದು, ಮೇಲ್ಚಾವಣಿ ಗಳಿಂದ ನೀರು ಸೋರುತ್ತಿರುವುದು ಈ ಕಟ್ಟಡದ ಅವ್ಯವಸ್ಥೆಗೆ ಹಿಡಿದ ಕನ್ನಡಿ

1985ರಲ್ಲಿ ನಿರ್ಮಾಣವಾದ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಕಟ್ಟಡ ನಾಲ್ಕು ದಶಕಗಳ ಕಂಡಿದೆ. ಆದರೆ ಅದರ ದುರಸ್ತಿ ಯಾಗದೆ ಇದ್ದ ಸ್ಥಿತಿಯಲ್ಲೆ ಕಾರ್ಯನಿರ್ವಹಿಸುವ ಸ್ಥಿತಿ ಸಿಬ್ಬಂದಿಯದಾಗಿದೆ.

-- ಬಾಕ್ಸ್--

ದುರಸ್ತಿಗೆ ಅನುದಾನ ಮೀಸಲುಆಲ್ದೂರು ವಲಯ ಅರಣ್ಯ ಕಚೇರಿಗೆ ಈ ಹಿಂದೆ ಭೇಟಿ ನೀಡಿದಾಗ ಕಚೇರಿ ಕಟ್ಟಡದ ಸ್ಥಿತಿಗತಿ ಪರಿಶೀಲಿಸಲಾಗಿದ್ದು, ದುರಸ್ತಿಗೆ ಅನುದಾನ ಮೀಸಲಿಡಲಾಗಿದೆ ಎಂದು ಚಿಕ್ಕಮಗಳೂರು ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ತಿಳಿಸಿದ್ದಾರೆ.

---ದೋಣ ಗುಡಿಗೆ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಅನುದಾನದಲ್ಲಿ ನಿರ್ಮಾಣವಾದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣವಾಗಿ ದಶಕಗಳು ಕಳೆದರೂ ನಿವೇಶನದ ತಕರಾರಿನ ಹಿನ್ನೆಲೆ ಕಾಲೇಜು ಪ್ರಾರಂಭವಾಗದೆ ಪಾಳು ಬಿದ್ದು ಹಾಳಾಗುತ್ತಿದೆ. ಸರ್ಕಾರದ ಹೊಸ ಯೋಜನೆ ಮೂಲಕ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನೂತನವಾಗಿ ಪ್ರಾರಂಭಿಸುವುದಕ್ಕಿಂತಲೂ ನಿರುಪಯುಕ್ತವಾಗಿರುವ ಪಾಲಿಟೆಕ್ನಿಕ್ ಕಟ್ಟಡವನ್ನು ಅರಣ್ಯ ಇಲಾಖೆ ಕಚೇರಿ ಕಟ್ಟಡದ ಬಳಕೆಗೆ ನೀಡಿದರೆ ಅನುಕೂಲವಾಗುತ್ತಿತ್ತು.

ಕೆ ಎಲ್, ರಾಜು, ಗ್ರಾಪಂ ಮಾಜಿ ಸದಸ್ಯ, ದೊಡ್ಡಮಾಗರವಳ್ಳಿ ---

ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡ ವ್ಯರ್ಥವಾಗುತ್ತಿದೆ. ವಲಯ ಅರಣ್ಯ ಅಧಿಕಾರಿಗಳ ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪಿ ಮಳೆ ನೀರು ಸೋರುತ್ತಿದ್ದು ಕಚೇರಿಯಲ್ಲಿರುವ ಸರ್ಕಾರಿ ಕಡತಗಳು ಮಳೆ ನೀರಿನಲ್ಲಿ ಒದ್ದೆಯಾದರೆ ನಶಿಸಿ ಹೋಗುತ್ತದೆ ಇದರ ಕುರಿತು ಇಲಾಖೆ ಹಾಗೂ ಕ್ಷೇತ್ರದ ಶಾಸಕಿ ನಯನಾ ಮೊಟ್ಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರೊಂದಿಗೆ ಸಮಾಲೋಚಿಸಿ ಅರಣ್ಯ ಇಲಾಖೆಗೆ ಕಚೇರಿ ಕಟ್ಟಡದ ಉಪಯೋಗಕ್ಕೆ ಒದಗಿಸಿದರೆ ಉತ್ತಮ

- ಪೂರ್ಣೇಶ್ ದೋಣಗುಡಿಗೆ, ಸ್ಥಳೀಯ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಜಾ ದಂಧೆ, ಪಾರ್ಕ್‌ ಅಕ್ರಮ ಮರೆಮಾಚಲು ಶೆಟ್ಟಿ ಯತ್ನ
ಪೌರಕಾರ್ಮಿಕರು ಸುರಕ್ಷತಾ ಸಾಧನ ಕಡ್ಡಾಯವಾಗಿ ಬಳಸಬೇಕು : ಬಸವರಾಜ್