ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ನಡೆದ ನಾಪೋಕ್ಲು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ನಾಪೋಕ್ಲು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನ ಗಳಿಸಿದ್ದಾರೆ.ಕಬಡ್ಡಿ ಮತ್ತು ಖೋ-ಖೋ ಬಾಲಕರ ವಿಭಾಗ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಖೋ-ಖೋ ಪ್ರಥಮ ಮತ್ತು ಕಬಡ್ಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗ ಚೆಸ್ ಆಟದಲ್ಲಿ ಚಂದನ್, ಮಹೇಂದ್ರ ಹಾಗೂ ಗೌತಮ್, ಬಾಲಕಿಯರ ವಿಭಾಗದಲ್ಲಿ ಅಮೃತ ಮತ್ತು ಯಕ್ಷಿತ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಬಾಲಕರ ವಿಭಾಗದಲ್ಲಿ 200 ಮೀ. ಮನುಗೌಡ ದ್ವಿತೀಯ; 400ಮೀ. ವಚನ್ ಪ್ರಥಮ, ಚಂದನ್ ತೃತೀಯ ; 800ಮೀ. ಚೆಂಗಪ್ಪ ಪ್ರಥಮ, ದ್ವಿತೀಯ ಲಿತೇಶ್; 1500ಮೀ. ವಿಕಾಸ್ ವಿ. ಕೆ ಪ್ರಥಮ, ಕುಶಾಲ್ ದ್ವಿತೀಯ; 3000ಮೀ. ಶಶಿಕಾಂತ್ ತೃತೀಯ; ಗುಂಡು ಎಸೆತದಲ್ಲಿ ವಿನಾಯಕ್ ಎಂ.ಎ ದ್ವಿತೀಯ; ಭರ್ಜಿ ಎಸೆತದಲ್ಲಿ ಬಸವರಾಜ್ ತೃತೀಯ; ಉದ್ದ ಜಿಗಿತ ಮತ್ತು ಟ್ರಿಪಲ್ ಜಂಪ್ ಖುಶಿ ಕೆ ಎಂ ಪ್ರಥಮ; ಟ್ರಿಪಲ್ ಜಂಪ್ ಮನುಗೌಡ ದ್ವಿತೀಯ; 4×400 ರಿಲೇ ಪ್ರಥಮ, 4×100 ರಿಲೇ ಪ್ರಥಮ; ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ 200ಮೀ. ದ್ವಿತೀಯ ಯಶ್ಮಿತ ಬಿ.ಜಿ, 400ಮೀ ತೀರ್ಥ ಪ್ರಥಮ ಮತ್ತು ಕೀರ್ತನ ಎಸ್.ಎಚ್. ದ್ವಿತೀಯ; 800ಮೀ. ಪ್ರೀತಿಕ ಪ್ರಥಮ, ಯಕ್ಷಿ ಕೆ ಎಂ ದ್ವಿತೀಯ; 4×400 ರಿಲೇ ಪ್ರಥಮ, 4×100 ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ವಿಭಾಗದಲ್ಲಿ ಖೋ-ಖೋ ಪ್ರಥಮ ; ಉದ್ದ ಜಿಗಿತದಲ್ಲಿ ಜೋಶ್ವ ಪ್ರಥಮ ಸ್ಥಾನ ಪಡೆದಿದ್ದಾರೆ.ಬಾಲಕಿಯರ ವಿಭಾಗದಲ್ಲಿ ಖೋ - ಖೋ ದ್ವಿತೀಯ; ಗಾನವಿ 400ಮೀ. ಓಟ ಪ್ರಥಮ , ಲಾಂಗ್ ಜಂಪ್ ದ್ವಿತೀಯ; ರಚಿತ 600ಮೀ. ಓಟ ದ್ವಿತೀಯ, ಲಾಂಗ್ ಜಂಪ್ ತೃತೀಯ; ರಿಲೇ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅಂಬೇಡ್ಕರ್ ಶಾಲೆಯ ಪ್ರಾಂಶುಪಾಲ ನೀತಾ ಕೆ.ಡಿ. ಮಾರ್ಗದರ್ಶನ, ಶಿಕ್ಷಕ ವೃಂದದವರ ಪ್ರೋತ್ಸಾಹ ಹಾಗೂ ಶಾಲೆಯ ದೈಹಿಕ ಶಿಕ್ಷಕಿ ಶ್ಯಾಮಿಲಿ ತರಬೇತಿಯೊಂದಿಗೆ ಈ ಸಾಲಿನ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.