ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲೆಡೆ ಕೊಳಚೆ ಆವರಿಸಿದೆ. ಗ್ರಾಮದಲ್ಲಿ ಬಹಿರ್ದೆಸೆ ತಪ್ಪಿಲ್ಲ. ಪ್ರತಿಯೊಂದು ಕಾರ್ಯಕ್ಕೂ ಲಂಚ ಕೊಡಬೇಕು. ಇಲ್ಲದಿದ್ದರೆ ಯಾವುದೇ ಕೆಲಸ ಮಾಡುವುದಿಲ್ಲ. ತೋಗುಣಸಿ ತಾಂಡಾದಲ್ಲಿ ಈ ಸ್ವತ್ತು ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಪಿಡಿಒ ಆರತಿ ಕ್ಷತ್ರಿ ವಿರುದ್ಧ ಹರಿಹಾಯ್ದರು. ಪಮಚಾಯಿತಿಯಲ್ಲಿ ಎಸ್ಸಿ, ಎಸ್ಟಿ, ಅನುದಾನ ಸಮರ್ಪಕ ಬಳಕೆ ಆಗದಿರುವುದು, ಗ್ರಾಮದಲ್ಲಿ ಸ್ವಚ್ಛತೆ, ಕುರಿಯುವ ನೀರು, ತೋಗುಣಸಿ ತಾಂಡಾಕ್ಕೆ ಈ ಸೊತ್ತು, ಗ್ರಾಮದಲ್ಲಿ ನೈರ್ಮಲಿಕರಣ ಹೀಗೆ ಗ್ರಾಮದಲ್ಲಿನ ಸಾಕಷ್ಟು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಅದರೊಂದಿಗೆ ಪಿಡಿಒ ಅವರು ಜನರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಪಿಡಿಒ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮೇಲಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಸಿದರು. ತಾಪಂ ಅಧಿಕಾರಿ ಸತೀಶ ಮಾಕೊಂಡ, ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ, ಪಿಡಿಒ ಆರತಿ ಕ್ಷತ್ರಿ, ವಿನಾಯಕ ಪತಂಗೆ, ಪ್ರಮೋದ ಗೌಡರ, ಹಾಗೂ ಗ್ರಾಮದ ಮುಖಂಡರಾದ ಯಲ್ಲಪ್ಪ ಬರಸಕೊಡ, ಎಸ್.ಎಂ.ಪಾಟೀಲ, ಶಿವಾನಂದ ವಾಲಿಕಾರ, ರಂಗಪ್ಪ ಜಾನಮಟ್ಟಿ, ಕೇಶಪ್ಪ ಲಮಾಣಿ, ಕುಮಾರ ಹಾದಿಮನಿ, ಮುತ್ತಪ್ಪ ಮಾದರ ಇನ್ನೂ ಅನೇಕರು ಇದ್ದರು.