- ಬೆಳಗಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ । ತಾಪಂ ಇಒ ಪ್ರಕಾಶ್, ಪಿಡಿಒಗಳು ಭಾಗಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ದುರ್ವಿಗೆರೆ, ತಾವರೆಕೆರೆ, ನೆಲ್ಲಿಹಂಕಲು, ವಡ್ನಾಳ್ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಅವರು ಬೆಳಗಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಹಿನ್ನೆಲೆ ಗುರುವಾರ ಗ್ರಾ.ಪಂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಬೆಳಗ್ಗೆ 7.30ಕ್ಕೆ ಚನ್ನಗಿರಿಗೆ ಬಂದ ಜಿಪಂ ಸಿಇಒ ಅವರು ಚನ್ನಗಿರಿ ತಾಪಂ ಇಒ ಪ್ರಕಾಶ್ ಜೊತೆಗೂಡಿ ದುರ್ವಿಗೆರೆ ಗ್ರಾ.ಪಂ.ಗೆ ಆಗಮಿಸಿದರು. ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಆಹಾರ ಪದಾರ್ಥಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಕೇಂದ್ರಕ್ಕೆ ಬಣ್ಣ ಬಳಿಸಿ ಮಕ್ಕಳಿಗೆ ಆಕರ್ಷಕವಾಗುವಂತಹ, ಕಲಿಕೆಗೆ ಪೂರಕವಾದ ಗೋಡೆ ಬರಹಗಳನ್ನು ಬರೆಸಲು ಕಾರ್ಯಕರ್ತೆಗೆ ತಿಳಿಸಿದರು. ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕೆಲಸವನ್ನು ಪರಿಶೀಲಿಸಿದರು. ಅಪೂರ್ಣ ಕಾಮಗಾರಿ ಶೀಘ್ರ ಮುಗಿಸಲು ಕ್ರಮಕ್ಕಾಗಿ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒಗೆ ಸೂಚನೆ ನೀಡಿದರು.
ನೆಲ್ಲಿಹಂಕಲು ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಕೇಂದ್ರದ ಮಕ್ಕಗಳೊಂದಿಗೆ ಅಧಿಕಾರಿಗಳು ಸಂವಾದ ನಡೆಸಿದರು. ಗ್ರಾಮದ ಗ್ರಾ.ಪಂ. ಹೊಸ ಕಟ್ಟಡದ ನಿರ್ಮಾಣದ ಕಾಮಗಾರಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಮೂಲ ಸೌಲಭ್ಯಗಳು ಹಾಗೂ ಔಷಧಿಗಳ ಸಂಗ್ರಹ ಮತ್ತು ಅವುಗಳ ನಿರ್ವಹಣೆ ಕುರಿತಂತೆ ಪರಿಶೀಲಿಸಿದರು.
ವಡ್ನಾಳ್ ಗ್ರಾ.ಪಂ.ಗೆ ಭೇಟಿ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯ ಪದ್ಧತಿ ಪರಿಶೀಲಿಸಿದರು. ಆಗ ಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡಿದರು. ಗ್ರಾಮದಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಕೆಲಸದ ಬಗ್ಗೆ ಪರಿಶೀಲಿಸಿ ಬೇಗನೆ ಪೂರ್ಣಗೊಳಿಸಲು ಗ್ರಾಪಂ ಪಿಡಿಒ ಅವರಿಗೆ ಸೂಚನೆ ನೀಡಿದರು.ಭೇಟಿ ಸಂದರ್ಭ ತಾಪಂ ಇಒ ಪ್ರಕಾಶ್, ಆಯಾ ಗ್ರಾಪಂಗಳ ಪಿಡಿಒಗಳು ಹಾಜರಿದ್ದು ಜಿಪಂ ಸಿಇಒ ಅವರಿಗೆ ಅಗತ್ಯ ಮಾಹಿತಿ ನೀಡಿದರು.
- - --5ಕೆಸಿಎನ್ಜಿ2: ಚನ್ನಗಿರಿ ತಾಲೂಕಿನ ನೆಲ್ಲಿಹಂಕಲು ಗ್ರಾಮದ ಸಮುದಾಯ ಶೌಚಾಲಯ ಸ್ವಚ್ಛತೆ ಬಗ್ಗೆ ಜಿ.ಪಂ. ಮುಖ್ಯ ಸಿಒಇ ಪರಿಶೀಲನೆ ನಡೆಸಿದರು.
-5ಕೆಸಿಎನ್‌ಜಿ3: ಅಂಗನವಾಡಿ ಮಕ್ಕಳೊಂದಿಗೆ ಜಿಪಂ ಸಿಇಒ ಸಂವಾದ ನಡೆಸಿದರು.