ಬಿಜೆಪಿಗೆ 3ನೇ ಅವಕಾಶ ನೀಡಬೇಡಿ: ಗೌತಮ್‌

KannadaprabhaNewsNetwork |  
Published : Apr 25, 2024, 01:04 AM ISTUpdated : Apr 25, 2024, 04:44 AM IST
೨೪ಕೆಎಲ್‌ಆರ್-೭ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿದರು. | Kannada Prabha

ಸಾರಾಂಶ

ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲಾಗುವುದು, ಜಿಲ್ಲೆಯನ್ನು ಗಾರ್ಮೆಂಟ್ಸ್ ಹಬ್, ಕೋಲಾರದಿಂದ ಬೆಂಗಳೂರಿಗೆ ಮೆಟ್ರೋ, 100 ಎಕರೆ ಜಮೀನಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವ ಭರವಸೆ

  ಕೋಲಾರ :  ಬಿಜೆಪಿ ವಚನಭ್ರಷ್ಟ ಪಕ್ಷ, ಸಾರ್ವಜನಿಕರಿಗೆ ಚುನಾವಣೆಗೆ ಮುನ್ನಾ ಸುಳ್ಳು ಆಶ್ವಾಸನೆಗಳನ್ನು ನೀಡಿ ಮತ ಪಡೆದು ಅಧಿಕಾರಕ್ಕೆ ಬಂದನಂತರ ವಂಚಿಸಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೦ ವರ್ಷದಿಂದ ದೇಶದಲ್ಲಿನ ಬಿಜೆಪಿ ಆಡಳಿತದ ವಿದ್ಯಾಮಾನವನ್ನು ನೀವು ಗಮನಿಸುತ್ತಾ ಬಂದಿದ್ದೀರಿ, ಕಾಂಗ್ರೇಸ್ ಪಕ್ಷದ ಮೇಲೆ ಗೊಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಮೂರನೇಯ ಬಾರಿ ವಂಚನೆಗೆ ಅವಕಾಶ ನೀಡದಂತೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ

ಪೆಟ್ರೋಲ್, ಡಿಸೇಲ್. ಅನಿಲ, ತೈಲೋತ್ಪನ್ನಗಳ ಬೆಲೆಯನ್ನು ಕಾಂಗ್ರೇಸ್ ಪಕ್ಷವು ಏರಿಕೆ ಮಾಡಿದೆ, ಅಗತ್ಯ ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದರೆ ಇಳಿಕೆ ಮಾಡುವುದಾಗಿ ಹೇಳಿ ೪೦೦ ರೂ ಇದ್ದ ಸಿಲಿಂಡರ್ ಬೆಲೆ ೧೨೦೦ ರೂ.ವರೆಗೆ ಅಂದರೆ ಮೂರು ಪಟ್ಟು ಏರಿಕೆ ಮಾಡಿ ಜನರನ್ನು ವಂಚಿಸಿದೆ, ಬಿಜೆಪಿ ಪಕ್ಷ ೧೦ ವರ್ಷದ ಸಾಧನೆಯಾಗಿದೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಕಾಂಗ್ರೆಸ್ ಪಕ್ಷ, ಜನಪರ ಆಡಳಿತ ನೀಡಲು ಸಾಧ್ಯ ಎಂದು ಪ್ರತಿಪಾದಿಸಿದರು.ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ೧೫೦೦ ಅಡಿ ಪಾತಳ ಸೇರಿದೆ, ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಗೆ ಆಸರೆಯಾಗಿ ಕಾಂಗ್ರೆಸ್ ಪಕ್ಷವು ನೀರಾವರಿ ಯೋಜನೆಗಳಾದ ಕೆ.ಸಿ.ವ್ಯಾಲಿ ಕೋಲಾರಕ್ಕೆ ಹೆಚ್.ಎನ್.ವ್ಯಾಲಿ ಚಿಕ್ಕಬಳ್ಳಾಪುರಕ್ಕೆ ನೀಡಿ ಅಂತರ್ಜಲ ಮಟ್ಟ ಸುಧಾರಣೆ ಮಾಡಿದ ಹಿನ್ನಲೆಯಲ್ಲಿ ಇಂದು ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವೆಂದು ಹೇಳಿದರು.ಜಿಲ್ಲೆಯ ಅಭಿವೃದ್ಧಿಗೆ ಯೋಜನೆ

ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲಾಗುವುದು, ಜಿಲ್ಲೆಯನ್ನು ಗಾರ್ಮೆಂಟ್ಸ್ ಹಬ್, ಕೋಲಾರದಿಂದ ಬೆಂಗಳೂರಿಗೆ ಮೆಟ್ರೋ, ೧೦೦ ಎಕರೆ ಜಮೀನಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ಬಿಜಿಎಂಎಲ್ ಬಳಿ ಇ.ಎಸ್.ಐ. ಆಸ್ಪತ್ರೆ, ಮೆಡಿಕಲ್ ಕಾಲೇಜ್, ಮಹಿಳೆಯರಿಗೆ ವಿಶೇಷ ಬ್ಯಾಂಕ್, ಪೊಲೀಸ್‌ಠಾಣೆ, ಮತ್ತಿತರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೇಸ್ ಪಕ್ಷದ ಸಂಯೋಜಕ ದಯಾನಂದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಶ್ರೀಕೃಷ್ಣ, ಪ್ರಸಾದ್ ಬಾಬು, ಅಕ್ರಂ, ವಕ್ಕಲೇರಿ ರಾಜಪ್ಪ, ಗಂಗಮ್ಮಪಾಳ್ಯ ರಾಮಯ್ಯ, ವಕ್ತಾರ ನಾರಾಯಣಸ್ವಾಮಿ, ಹನೀಫ್, ಕಾರ್ತಿಕ್, ಶ್ಯಾಮ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ