ಎನ್‌ಡಿಎ 400 ಗುರಿ ಮುಟ್ಟಲು ಶ್ರಮಿಸಬೇಕು : ಗೀತಾ ವಿವೇಕ ರೆಡ್ಡಿ

KannadaprabhaNewsNetwork |  
Published : Apr 25, 2024, 01:01 AM ISTUpdated : Apr 25, 2024, 04:46 AM IST
ಶಿರ್ಷಿಕೆ-೨೪ಕೆ.ಎಂ.ಎಲ್.ಅರ್.೧-ಮಾಲೂರಿನ ಆರ್,ಜಿ,ರೆರ್ಸಾಟ್ ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಕ್ಷದ ಬೂತ ಅಧ್ಯಕ್ಷರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿದರು.ಪಕ್ಷದ ಉಸ್ತುವಾರಿ ಗೀತಾವಿವೇಕ್ ರೆಡ್ಡಿ,ಜೆ.ಡಿ.ಎಸ್.ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಇದ್ದರು. | Kannada Prabha

ಸಾರಾಂಶ

ಪ್ರಧಾನಿ ಮೋದಿ ಅವರ ಹೆಸರ ಎಲ್ಲರಿಗೂ ಗೊತ್ತಿದೆ. ಆದರೆ ಅವುಗಳು ಮತವಾಗಿ ಬದಲಾಗಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಮುಖ್ಯ. ಇಲ್ಲಿ ಜೆಡಿಎಸ್- ಬಿಜೆಪಿ ಅಭ್ಯರ್ಥಿ ಮಲ್ಲೇಶ್‌ಬಾಬು ಅ‍ವರನ್ನು ಗೆಲ್ಲಿಸಲು ಶ್ರಮಿಸಬೇಕು.

 ಮಾಲೂರು:  ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತರಾಗಿದ್ದರೂ ಅವರ ಆಶಯದಂತೆ 400 ಸ್ಥಾನಗಳಿಸಬೇಕಾದರೆ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಬಹಳ ಮುಖ್ಯ. ಇನ್ನೆರಡು ದಿನ ಹಗಲು ರಾತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹಾಗೂ ಉಸ್ತುವಾರಿ ಗೀತಾ ವಿವೇಕ ರೆಡ್ಡಿ ಹೇಳಿದರು.

 ಅವರು ಇಲ್ಲಿನ ಆರ್.ಜೆ.ರೆರ್ಸಾಟ್ ನಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ಮೋದಿ ಅವರ ಹೆಸರ ಎಲ್ಲರಿಗೂ ಗೊತ್ತಿದೆ. ಆದರೆ ಅವುಗಳು ಮತವಾಗಿ ಬದಲಾಗಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಮುಖ್ಯ. ಇಲ್ಲಿ ಜೆಡಿಎಸ್- ಬಿಜೆಪಿ ಅಭ್ಯರ್ಥಿ ಮಲ್ಲೇಶ್‌ಬಾಬು ಅ‍ವರನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು.

ಎನ್‌ಡಿಎಗೆ ಉತ್ತಮ ವಾತಾವರಣಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದ್ದು, ಮೋದಿ ಅಲೆ ಬಿರುಗಾಳಿಯಾಗಿ ಬೀಸುತ್ತಿದೆ. ಮೈತ್ರಿ ಆದ ಮೇಲೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಆದರೆ ಇದರಿಂದ ಮೈಮರೆಯಬಾರದು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲಲು ಇದು ಒಂದು ಕಾರಣವಾಗಿತ್ತು ಎಂಬುದನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಕ.ಜಿ.ಇ.ರಾಮೇಗೌಡ, ಮಾಗೇರಿ ನಾರಾಯಣಸ್ವಾಮಿ,ಚಂದ್ರಶೇಖರ್ ಗೌಡ,ಅಪ್ಪಿ ರಾಜು,ಬಿ.ಕೆ.ನಾರಾಯಣಸ್ವಾಮಿ,ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಪಂಚೆ ನಂಜುಂಡಪ್ಪ, ಬೆಳ್ಳಾವಿ ಸೋಮಣ್ಣ, ವೇಣು ಗೋಪಾಲ್. ಟಿ.ರಾಮಚಂದ್ರ, ಬಾಬು, ತೇಜಸ್‌, ಪಿ.ವೆಂಕಟೇಶ್ ಕುಮಾರ್ ಇದ್ದರು,

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ: ಡಿ.ಕೆ.ಶಿವಕುಮಾರ್
ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್