ಜನಾದೇಶಕ್ಕೆ ಎಲ್ಲರೂ ತಲೆ ಬಾಗಬೇಕು

KannadaprabhaNewsNetwork |  
Published : Jun 06, 2024, 12:30 AM ISTUpdated : Jun 06, 2024, 12:31 AM IST
೫ಕೆಎಲ್‌ಆರ್-೫ಕೋಲಾರದ ತಮ್ಮ ಗೃಹ ಕಚೇರಿಯಲ್ಲಿ ಇಪ್ಕೋ ಸಂಸ್ಥೆಯಿಂದ ೯ ಮಂದಿ ರೋಗಿಗಳ ಚಿಕಿತ್ಸೆಗೆ ೧.೮೫ ಲಕ್ಷ ರೂ. ಚೆಕ್‌ಗಳನ್ನು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ವಿತರಿಸಿದರು. | Kannada Prabha

ಸಾರಾಂಶ

ದೇಶದ ಪಿತಾಮಹಾ ಮಹಾತ್ಮ ಗಾಂಧಿಯನ್ನೇ ಕೆಲವೊಮ್ಮೆ ಕಡೆಗಣಿಸುವುದನ್ನು ನಾವು ಕಂಡಿದ್ದೇವೆ, ಅದೇ ರೀತಿ ರಾಜಕಾರಣದಲ್ಲಿ ಏಳು ಬೀಳುಗಳ ಸಹಜವಾಗಿ ಪರಿಗಣಿಸಬೇಕೇ ಹೊರತು ಹತಾಶೆಗೊಂಡು ವಿನಃಕಾರಣ ಇತರರನ್ನು ದೂಷಿಸಬಾರದು

ಕನ್ನಡಪ್ರಭ ವಾರ್ತೆ ಕೋಲಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ಎಲ್ಲರೂ ತಲೆ ಬಾಗಬೇಕು, ಪ್ರಸ್ತುತ ಬಿಜೆಪಿ ಸತತವಾಗಿ ೩ನೇ ಬಾರಿ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವುದು ಸ್ವಾಗತಾರ್ಹವಾದರೂ ಆಡಳಿತದಲ್ಲಿ ಎಲ್ಲ ಧರ್ಮದವರನ್ನು ಸಮಾನತೆಯಿಂದ ಕಾಣಬೇಕು ಎಂದು ಮಾಜಿ ಶಾಸಕ ಹಾಗೂ ಇಪ್ಕೋ ನಿರ್ದೇಶಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.ನಗರದ ತಮ್ಮ ಗೃಹ ಕಚೇರಿಯಲ್ಲಿ ಇಪ್ಕೋ ಸಂಸ್ಥೆಯಿಂದ ೯ ಮಂದಿ ರೋಗಿಗಳ ಚಿಕಿತ್ಸೆಗೆ ೧.೮೫ ಲಕ್ಷ ರೂ. ಚೆಕ್‌ಗಳನ್ನು ವಿತರಿಸಿ ಮಾತನಾಡಿ,ನಮ್ಮ ದೇಶದ ಪಿತಾಮಹಾ ಮಹಾತ್ಮ ಗಾಂಧಿಯನ್ನೇ ಕೆಲವೊಮ್ಮೆ ಕಡೆಗಣಿಸುವುದನ್ನು ನಾವು ಕಂಡಿದ್ದೇವೆ, ಅದೇ ರೀತಿ ರಾಜಕಾರಣದಲ್ಲಿ ಏಳು ಬೀಳುಗಳ ಸಹಜವಾಗಿ ಪರಿಗಣಿಸಬೇಕೇ ಹೊರತು ಹತಾಶೆಗೊಂಡು ವಿನಃಕಾರಣ ಇತರರನ್ನು ದೂಷಿಸಬಾರದು ಎಂದರು.

ರಮೇಶ್‌ಕುಮಾರ್‌ ಹೇಳಿಕೆಗೆ ವಿಷಾದ

ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರ ಸೋಲಿಗೆ ನಾವೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರು ಒಕ್ಕಲಿಗ ಸಮುದಾಯದವರನ್ನು ಚುನಾವಣಾ ಪ್ರಚಾರದಲ್ಲಿ ನಿಂದಿಸಿರುವುದು ವಿಷಾದನೀಯ ಸಂಗತಿ. ಸತತವಾಗಿ ಎರಡು ಭಾರಿ ಗೆಲುವು ತಂದು ಕೊಟ್ಟಿದ್ದರೂ ತಾಳ್ಮೆ ಕಳೆದುಕೊಂಡು ಹತಾಶೆಯ ನುಡಿಗಳಾಡಿ ನಿಂದಿಸಿದ್ದು ಸಮುದಾಯದವರಿಗೆ ನೋವು ತಂದಿದೆ ಎಂದರು.

ಒಕ್ಕಲಿಗರನ್ನು ಕಂಡರೆ ರಮೇಶ್ ಕುಮಾರ್ ಆಗಲ್ಲ ಎಂಬ ಭಾವನೆಯಲ್ಲಿ ಮೊನ್ನೆ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಅವರಿಗೆ ಸೋಲಿಗೆ ಕಾರಣವಾಗಿರಬಹುದೇನು ನನಗೆ ಗೊತ್ತಿಲ್ಲ, ಅವರ ಸೋಲಿಗೂ ನನಗೂ ಸಂಬಂಧವೇ ಇಲ್ಲ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ನವರು ನನಗೆ ಪ್ರಚಾರಕ್ಕೆ ಕರೆಯಲಿಲ್ಲ ಹಾಗಾಗಿ ನಾನು ಅವರ ಜೊತೆ ಹೋಗಲಾಗದಿದ್ದರೂ ಸಹ ನನ್ನ ಸೂಚನೆ ಮೇರೆಗೆ ನಮ್ಮ ಬೆಂಬಲಿಗರು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದರು.

ಅವಕಾಶ ನೀಡುವ ಭರವಸೆ

ತಮಗೆ ಮುಂದೆ ಒಳ್ಳೆಯ ಅವಕಾಶ ನೀಡುವುದಾಗಿ ಸಿದ್ದರಾಮಯ್ಯನವರೇ ಪುನಃ ಭರವಸೆ ನೀಡಿದ್ದಾರೆ, ರಮೇಶ್ ಕುಮಾರ್‌ರಿಗೆ ವಿಧಾನ ಪರಿಷತ್‌ಗೆ ಆಗಲಿ, ರಾಜ್ಯ ಸಭೆಗೆ ಆಗಲಿ ಆಯ್ಕೆ ಮಾಡಿದರೆ ನನಗೂ ಸಂತೋಷವೇ ಎಂದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ