ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತೆ. ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ : ರಮೇಶ್ ಕುಮಾರ್

KannadaprabhaNewsNetwork |  
Published : Dec 16, 2024, 12:46 AM ISTUpdated : Dec 16, 2024, 04:03 AM IST
೧೫ಕೆಎಲ್‌ಆರ್-೭ಕೋಲಾರದ ರಂಗ ಮಂದಿರದಲ್ಲಿ ಮಾಜಿ ಜಿಪಂ ಅಧ್ಯಕ್ಷ ದಿ||ಜನ್ನಘಟ್ಟ ವೆಂಕಟಮುನಿಯಪ್ಪರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

 ಜೊತೆಯಲ್ಲಿ ಇದ್ದು ಬೀಳಿಸಿದವರು, ದೇವರಿಗೆ ನಮಸ್ಕಾರ ಮಾಡಕ್ಕೆ ಮಲಗಿದ್ದಾಗ ಕತ್ತಿ ಇಟ್ಟರು, ಇವರಿಗೆ ಎಲ್ಲರಿಗಿಂತಲೂ ಕೃತಜ್ಞತೆ ಅರ್ಪಿಸಿ ಭಗವಂತ ಕಾಪಾಡಪ್ಪ, ನಮ್ಮಂತ ದುಷ್ಟರನ್ನು ಅವರು ಮಂಥನ ಮಾಡ್ತಾ ಇರಲಿ   ದೇಶ ಚೆನ್ನಾಗಿರಲಿ ಎಂದು ಯಾರೋಬ್ಬರ ಹೆಸರು ಹೇಳದೆ ಸೋಲಿಗೆ ಕಾರಣರಾದವರನ್ನು  ಟೀಕಿಸಿದ್ದಾರೆ.

  ಕೋಲಾರ :  ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ ಹಾಗಾಗಿ ಮದುವೆ ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು, ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲೋ ಆಸೆ ಇದ್ದಿದ್ದರೆ ಬಿಳಿ ಶರ್ಟ್ ಹಾಕಿಕೊಂಡು ಕಾಣಿಸಬಹುದಿತ್ತು. ಆದರೆ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತೆ. ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹದಿಂದ ಎಂದು ಮಾಜಿ ಸ್ಫೀಕರ್ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿ.ಜನ್ನಘಟ್ಟ ವೆಂಕಟಮುನಿಯಪ್ಪರ ಪ್ರಥಮ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಅ‍ವರು ಮಾತನಾಡಿ, ಚುನಾವಣೆಯಲ್ಲಿ ಸೋಲು ಅಂದರೆ ಕಡಿಮೆ ಓಟ್ ತಗೊಂಡವರು, ಆದರೆ ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲ ಸರಿ ಇದೆ ಎಂದರು. ನಾನು ಯಾರೆಲ್ಲಾ ಮಹಾನುಭಾವರು ಕೃತಜ್ಞತೆಗಳು ಅರ್ಪಿಸಬೇಕು ಎಂಬುದು ತಿಳಿಸುತ್ತಿಲ್ಲ ಎಂದರು.

4ನೇ ಗುಂಪು ವಿಷ ಹಾಕಿತುಎರಡನೆಯದಾಗಿ ಯೋಗ್ಯತೆ ಇದ್ದವರು, ಇಲ್ಲದವರು ಅನಿಲ್ ಅಂತಹವರ ಕಾರ್ಯಕ್ರಮ ಮಾಡಿ ನನ್ನನ್ನು ಕರೆಸಿಕೊಂಡಿದ್ದೀರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಮೂರನೇಯದಾಗಿ ನನ್ನನ್ನೆ ಸರ್ವಸ್ವ ಅಂತ ನಂಬಿಕೊಂಡಿದ್ದೂ ನನ್ನನ್ನು ಬಿಟ್ಟರು ಅವರಿಗೂ ಕೋಟಿ ಕೋಟಿ ಕೃತಜ್ಞತೆಗಳು, ಇವರೆಲ್ಲಾ ಮುಖ್ಯ ಅಲ್ಲ ನಾಲ್ಕನೇ ಗುಂಪಿದೆ, ಅವರು ಊಟಕ್ಕೆ ಕರೆದು ವಿಷ ಹಾಕಿದರು. ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು ಎಂದರು.

ನನ್ನ ಜೊತೆಯಲ್ಲಿ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು, ದೇವರಿಗೆ ನಮಸ್ಕಾರ ಮಾಡಕ್ಕೆ ಮಲಗಿದ್ದಾಗ ಕತ್ತಿಗೆ ಕತ್ತಿ ಇಟ್ಟರು, ಇವರಿಗೆ ಎಲ್ಲರಿಗಿಂತಲೂ ಕೃತಜ್ಞತೆ ಅರ್ಪಿಸಿ ಭಗವಂತ ಇವರನ್ನ ಕಾಪಾಡಪ್ಪ, ನಮ್ಮಂತ ದುಷ್ಟರನ್ನು ಅವರು ಮಂಥನ ಮಾಡ್ತಾ ಇರಲಿ ಈ ದೇಶ ಚೆನ್ನಾಗಿರಲಿ ಎಂದು ಯಾರೋಬ್ಬರ ಹೆಸರು ಹೇಳದೆ ತಮ್ಮ ಸೋಲಿಗೆ ಕಾರಣರಾದವರನ್ನು ತಿವಿದರು. ಮುಖ ತೋರಿಸಲು ಬಂದೆಕಡೆ ಪಕ್ಷ ನನ್ನ ಮುಖ ನೋಡಲಿ ಎಂದು, ಮುಂದೆ ಇರ್ತೀನೊ ಇಲ್ಲೋ ಅನ್ನೋ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ, ಹೀಗೆ ನಿವೃತ್ತಿ ಹಂಚಿನಲ್ಲಿರುವ ರಮೇಶ್ ಕುಮಾರ್ ಬೇಸರದ ಭಾಷಣ ಮಾಡಿದರು.

ರಾಜಕಾರಣವು ಈಗ ಹಿಂದಿನಂತೆ ಇಲ್ಲ. ಚುನಾವಣೆಯ ಮೌಲ್ಯಗಳು, ಭಾಷೆ, ಪದ್ಧತಿಗಳು ಎಲ್ಲಾ ಬದಲಾವಣೆಯಾಗಿದೆ. ಈಗೇನಿದ್ದರೂ ಏನು ಕೊಡುತ್ತೀಯಾ ಏನೂ ತೆಗೆದು ಕೊಳ್ಳುತ್ತೀಯಾ ಎಂಬುವುದಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಥಳೀಯರು, ಸಾಮಾನ್ಯರು ಯಾರು ಸ್ಪರ್ಧಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

17ಕ್ಕೆ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ