ಮನೆ ಮನೆಗೆ ನಲ್ಲಿ ಯೋಜನೆಯಲ್ಲಿ ಶೇ 45 ರಷ್ಟು ಹಣ ಕೇಂದ್ರದ ಪಾಲಾಗಿದ್ದು, ಉಳಿದ ಹಣ ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಬಿಜೆಪಿಯವರು ಇದು ಸಂಪೂರ್ಣ ಕೇಂದ್ರದ ಪಾಲೆಂದು ಹೇಳುತ್ತಿರುವುದು ಹಾಸ್ಯಾಸ್ಪದ
ಚಿಂತಾಮಣಿ: ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನೇ ನೀಡಿ 10 ವರ್ಷ ಯುವಕರಿಗೆ, ರೈತರಿಗೆ, ಮಹಿಳೆಯರಿಗೆ, ಬಡವರಿಗೆ ಅನ್ಯಾಯ ಎಸಗಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲನ್ನು ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದ ನುಡಿದಂತೆ ನಡೆಯದ ಸರ್ಕಾರವೆಂದರೆ ಅದು ಮೋದಿ ಸರ್ಕಾರವೆಂದು ಉನ್ನತ ಶಿಕ್ಷಣ ಮತ್ತು ಉಸ್ತುವಾರಿ ಸಚಿವ ಡಾ.ಎಂ.ಸಿಸುಧಾಕರ್ ಲೇವಡಿ ಮಾಡಿದ್ದಾರೆ.
ತಾಲೂಕಿನ ಬಟ್ಲಹಳ್ಳಿ, ಮುರುಗಮಲ್ಲಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಪ್ರಚಾರ ಸಭೆಗಳಲ್ಲಿ ಮಾತನಾಡಿ ಕೇಂದ್ರದಲ್ಲಿ10 ವರ್ಷಗಳಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಮೋದಿ ಸರ್ಕಾರ ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ, ತೆರಿಗೆಯಲ್ಲಿ ಪಾಲಿನಲ್ಲಿ ವಂಚನೆ, ಹರ್ ಘರ್ ನಲ್ ಯೋಜನೆಯಲ್ಲಿ ಶೇ 55 ರಷ್ಟು ಹಣ ರಾಜ್ಯ ಸರ್ಕಾರ ನೀಡುತ್ತಿದೆ ಎಂದರು.
ಮತದಾರರನ್ನು ಸೆಳೆದ ಗ್ಯಾರಂಟಿ
ಈ ಯೋಜನೆಯಲ್ಲಿ ಶೇ 45 ರಷ್ಟು ಹಣ ಕೇಂದ್ರದ ಪಾಲಾಗಿದ್ದು ಆದರೆ ಬಿಜೆಪಿಯವರು ಇದು ಸಂಪೂರ್ಣ ಕೇಂದ್ರದ ಪಾಲೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಯಶ್ವಸಿಯಾಗಿ ಅನುಷ್ಠಾನಗೊಂಡಿದ್ದು ಅದರ ಫಲವು ರಾಜ್ಯದ ಬಹುತೇಕ ಜನತೆಗೆ ಸಿಗುತ್ತಿದೆ ಎಂದರು.
ಅಧಿಕಾರಕ್ಕೆ ಬಂದರೆ ಗ್ಯಾರಂಟಿ
ಅಭ್ಯರ್ಥಿ ಕೆ.ವಿ. ಗೌತಮ್ ಮಾತನಾಡಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದರೆ ಮಹಿಳೆಯರಿಗೆ ೧ ಲಕ್ಷ, ರೈತರ ಸಾಲಮನ್ನಾ, ೩೦ಲಕ್ಷ ಉದ್ಯೋಗ, ನರೇಗಾ ೪೦೦ ದಿನಕ್ಕೆ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಜಾರಿಗೊಳಿಸಬೇಕಾದರೆ ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬರಬೇಕೆಂದು, ಅಂಬೇಡ್ಕರ್‌ರಿಗೆ ಸಂವಿಧಾನ ರಚಿಸಲು ಅವಕಾಶ ಕೊಟ್ಟಿದ್ದು ಹಾಗೂ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಂಗ್ರೇಸ್ ಪಕ್ಷವಾಗಿದ್ದು ಈ ಹಿನ್ನಲೆಯಲ್ಲಿ ನನ್ನನ್ನು ಸೇರಿದಂತೆ ಕಾಂಗ್ರೇಸ್ ಅಭ್ಯರ್ಥಿಗಳನ್ನು ಮತದಾರರು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕೆಂದರು.
ಜೋಕರ್ ಕೃಷ್ಣಾರೆಡ್ಡಿ
ಮುರುಗಮಲ್ಲ ಗ್ರಾ.ಪಂ. ಅಧ್ಯಕ್ಷ ಹಾಜಿ ಅನ್ಸರ್‌ಖಾನ್ ಮಾತನಾಡಿ ಜೆಕೆ ಕೃಷ್ಣಾರೆಡ್ಡಿ ಹೆಸರು ಜೋಕರ್ ಕೃಷ್ಣಾರೆಡ್ಡಿಯೆಂದು ಇಡಬೇಕಾಗಿತ್ತೆಂದು ಜಾತ್ಯತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿ 2 ಬಾರಿ ಗೆಲುವನ್ನು ಪಡೆದು ಈಗ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೊರಟಿರುವುದು ಅಲ್ಪಸಂಖ್ಯಾತರ ಎಸಗುತ್ತಿರುವ ದ್ರೋಹವೆಂದರು.
ಈ ಸಂದರ್ಭದಲ್ಲಿ ಮುನಿಆಂಜಿನಪ್ಪ, ಕೇಶವರೆಡ್ಡಿ, ಅಡ್ಡಗಲ್ ಶ್ರೀಧರ್, ಸ್ಕೂಲ್ ಸುಬ್ಬಾರೆಡ್ಡಿ, ಮಾದಮಂಗಲ ಚಂದ್ರಪ್ಪ, ಶ್ರೀರಾಮರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ರ‍್ಯಯಗಾರಹಳ್ಳಿ ರವಿ, ಮುನಿರತ್ನಮ್ಮ, ಶಂಕರಪ್ಪ, ಶಂಕರ್, ಆರೀಫ್‌ಖಾನ್, ಪ್ಯಾರೇಜಾನ್, ಅಮೀರ್‌ಖಾನ್, ಶ್ರೀನಿವಾಸರೆಡ್ಡಿ, ಭಾರ್ಗವ್, ಕೃಷ್ಣಾರೆಡ್ಡಿ, ಉಪಸ್ಥಿತರಿದ್ದರು.