ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನ್ಯಾಯಾಲಯ ಹೇಳಿಲ್ಲ : ಸಚಿವ ಬೈರತಿ ಸುರೇಶ್

KannadaprabhaNewsNetwork |  
Published : Oct 03, 2024, 01:23 AM ISTUpdated : Oct 03, 2024, 04:57 AM IST
MUDA Case CM Siddaramaiah

ಸಾರಾಂಶ

ಮುಡಾ ವಿವಾದದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ನ್ಯಾಯಾಲಯ ಹೇಳಿಲ್ಲ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಪತ್ನಿ ಪಾರ್ವತಮ್ಮ ಅವರು ನಿವೇಶನಗಳನ್ನು ವಾಪಸ್ ನೀಡಿರುವುದಾಗಿ ತಿಳಿಸಿದ ಸಚಿವರು, ವಿರೋಧ ಪಕ್ಷಗಳು ಆಧಾರರಹಿತ ಆರೋಪ ಮಾಡುತ್ತಿವೆ ಎಂದು ದೂರಿದ್ದಾರೆ.

 ಕೋಲಾರ : ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ನ್ಯಾಯಾಲಯವು ಹೇಳಿಲ್ಲ. ಇದೆಲ್ಲ ವಿರೋಧ ಪಕ್ಷದವರು ಸೃಷ್ಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದವರಿಗೆ ಮಾತನಾಡ ಯಾವುದೇ ವಿಚಾರವಿಲ್ಲ. ಅವ್ಯವಹಾರ ನಡೆಯದಿದ್ದರು ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಬೇಸತ್ತು ನಿವೇಶನ ವಾಪಸ್‌

ಮುಡಾ ವಿಚಾರವು ನ್ಯಾಯಲಯಲ್ಲಿದು, ತೀರ್ಮಾನ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ, ಪತಿಯ ನೆಮ್ಮದಿ ಹಾಗೂ ಸಚ್ಚಾರಿತ್ರವೇ ಮುಖ್ಯವೆಂದು ಪಾರ್ವತಮ್ಮ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಈ ಮೊದಲೇ ನಿವೇಶನ ವಾಪಾಸ್ ನೀಡಲು ಯೋಚಿಸಿದ್ದೆ, ಆದರೆ ವಿರೋಧ ಪಕ್ಷಗಳ ಆರೋಪಗಳನ್ನು ಧೈರ್ಯವಾಗಿ ಎದುರಿಸಲು ಸಿದ್ದವಾಗಿದ್ದೆ. ಈಗಿನ ಬೆಳವಣಿಗೆ, ಕಿರುಕುಳದಿಂದ ಬೇಸತ್ತು ನಿವೇಶನ ವಾಪಸ್ ನೀಡಿರುವುದಾಗಿ ಪಾರ್ವತಮ್ಮ ಅವರೇ ಪತ್ರದಲ್ಲಿ ತಿಳಿಸಿದ್ದಾರೆ ಎಂದರು.

ತಮ್ಮ ಪತಿ ಸಿದ್ದರಾಮಯ್ಯನವರಿಗೆ ನನ್ನಿಂದಾಗಿ ಅಘಾತ, ನೋವಾಗಿದೆ, ಕಪ್ಪುಚುಕ್ಕೆಯಿಲ್ಲದ ರಾಜಕೀಯ ಜೀವನ ಅವರದ್ದಾಗಿದ್ದು, ನ್ಯಾಯಯುತವಾಗಿ ನನಗೆ ನಿವೇಶನಗಳು ಬಂದಿದ್ದರೂ ಸಹ ಇವುಗಳಿಂದಲೇ ಅವರಿಗೆ ವಿರೋಧ ಪಕ್ಷದವರು ನೋವುಂಟು ಮಾಡುತ್ತಿದ್ದಾರೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇವು ನನಗೆ ತೃಣಕ್ಕೆ ಸಮಾನವಾಗಿದ್ದು, ಪತಿಯವರ ನೆಮ್ಮದಿ, ಸಚ್ಚಾರಿತ್ರ ಮುಖ್ಯ ಎಂದು ಪತ್ರದಲ್ಲಿ ಹೇಳಿದ್ದಾರೆ ಎಂದರು.ಕಾನೂನಾತ್ಮಕ ಹೋರಾಟ

ಪ್ರಕರಣ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಹಿಟ್ ಅಂಡ್ ರನ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಡಾ ಪ್ರಕರಣಕ್ಕೂ ಹಿಟ್ ಅಂಡ್ ರನ್‌ಗೂ ಸಂಬಂಧವೇ ಇಲ್ಲ, ಇಡೀ ಪ್ರಕರಣವು ಸಿದ್ದರಾಮಯ್ಯರ ಪತ್ನಿಗೆ ಸಂಬಂಧಪಟ್ಟಿದ್ದು, ಅವರ ಹೆಸರಿನಲ್ಲಿ ನಿವೇಶನಗಳಿವೆ, ಅವರ ಸರ್ವ ಸ್ವತಂತ್ರರು ವಾಪಸ್‌ ನೀಡಿದ್ದಾರೆ.

 ಇಡೀ ಪ್ರಕರಣ2 ದಿನಗಳ ಹಿಂದಷ್ಟೇ ದಾಖಲಾಗಿದೆ. ಕಾನೂನಾತ್ಮಕ ಹೋರಾಟಗಳು ನಡೆಯುತ್ತವೆ ಎಂದು ಹೇಳಿದರು. ಸ್ಪಷ್ಟ ಬಹುಮತ ಇರುವ ಸರ್ಕಾರವನ್ನು ಉರುಳಿಸುವ ಕುರಿತು ಶಾಸಕ ಯತ್ನಾಳ್ ಅವರು ನೀಡಿರುವ ಹೇಳಿಕೆ ಬಗ್ಗೆ ತನಿಖೆಯಾಗಬೇಕು. ಇನ್ನು ರಾಜ್ಯ, ಜಿಲ್ಲೆಯಲ್ಲಿ ಯಾವ ಅಭಿವೃದ್ದಿ ಕಾರ್ಯನಿಂತಿದೆ, ಯಾವುದೇ ಸರ್ಕಾರ ಮಾಡಿದರುವ ಕೆಲಸಗಳು ನಮ್ಮ ಅವಧಿಯಲ್ಲಿ ನಮ್ಮ ಅವಧಿಯಲ್ಲಿ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳೂ ಉತ್ತಮವಾಗಿದೆ. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಪ್ರೋತ್ಸಾಹ ಹಣವು ದಸರಾ ಹಬ್ಬದೊಳಗೆ ಬಿಡುಗಡೆಯಾಗಲಿದೆ ಎಂದು ಹೇಳಿದರು.ರಾಗಿ ಬೆಳೆ ನಷ್ಟ ವರದಿಗೆ ಸೂಚ

ಕೋಲಾರ ಜಿಲ್ಲೆಯಲ್ಲಿ ಮಳೆಯಾಗಿಲ್ಲ, ಕೆಸಿವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ, ರಾಗಿ ಬೆಳೆ ನಷ್ಟದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಆ ಬಳಿಕ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.ಭಿನ್ನಮತ ಪರಿಹರಿಸಲು ಯತ್ನ

ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಕುಟುಂಬವೆಂದ ಮೇಲೆ ಅಣ್ಣ-ತಮ್ಮಂದಿರ ಜಗಳ ಇದ್ದೇ ಇರುತ್ತೆ, ನೂರಾರು ಜನರಿದ್ದಾಗ ಗಲಾಟೆಯಾಗಿದೆ, ಇದನ್ನು ಬಗೆಹರಿಸಲಾಗುವುದು, ಅಂದು ನಾನು ಕೊಡಗು ಜಿಲ್ಲೆಗೆ ತೆರಳಿದ್ದೆ, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಹೀಗಾಗಿ ಎರಡೂ ಗುಂಪುಗಳನ್ನು ಸೇರಿಸಿ ಮುಂದಿನ ದಿನಗಳಲ್ಲಿ ಒಗ್ಗೂಡಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪತ್ರಕರ್ತರು ಹೆದರದೆ ಕರ್ತವ್ಯ ನಿರ್ವಹಿಸಿ: ಬಸವರಾಜ ಹೊರಟ್ಟಿ
ಸಂವಿಧಾನದ ಕುರಿತು ಜಾಗೃತಿ ಮೂಡಿಸಿ: ಸತೀಶ್ ಜಾರಕಿಹೊಳಿ