‘ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಇಲ್ಲ’ : ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯರ ಮೇಲೆ ಸಂಪೂರ್ಣ ವಿಶ್ವಾಸ

KannadaprabhaNewsNetwork |  
Published : Aug 05, 2024, 12:33 AM ISTUpdated : Aug 05, 2024, 05:00 AM IST
Siddaramaiah

ಸಾರಾಂಶ

ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆ. ಅವರು ಉತ್ತಮ ಆಡಳಿತಗಾರರು ಅನುಭವಿಗಳು ರಾಜ್ಯದಲ್ಲಿ ಹಲವಾರು ಬಾರಿ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯರ ಮೇಲೆ ಸಂಪೂರ್ಣ ವಿಶ್ವಾಸವಿದೆ

 ಕೋಲಾರ :  ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜ್ಯಪಾಲರು ನೋಟಿಸ್ ನೀಡಿದ ಮಾತ್ರಕ್ಕೆ ಏನು ಆಗುವುದಿಲ್ಲ. ನೋಟಿಸ್‌ಗೆ ತಕ್ಕ ಉತ್ತರ ನೀಡುವಂತ ಸಾರ್ಮರ್ಥ್ಯ ಸಿದ್ದರಾಮಯ್ಯರಿಗೆ ಇದೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಗಮನಕ್ಕೆ ಬಾರದಂತೆ ಸರ್ಕಾರದಲ್ಲಿ ಆಚಾತುರ್ಯದಿಂದ ಹಗರಣಗಳು ನಡೆಯುವುದು ಸಹಜ. ಈ ಹಿಂದೆಯೂ ಇಂತಹ ಹಲವು ಹಗರಣಗಳು ನಡೆದಿದ್ದು, ಅವುಗಳನ್ನು ತನಿಖೆಗೆ ಒಪ್ಪಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯರಿಂದ ಯಾವುದೇ ಹಗರಣಗಳು ನಡೆದಿಲ್ಲ ಎಂದು ಮಾಜಿ ಸಚಿವರು ಸಮರ್ಥಿಸಿದರು.

ಸಿದ್ದರಾಮಯ್ಯ ಮುಂದುವರಿಕೆ

ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆ. ಅವರು ಉತ್ತಮ ಆಡಳಿತಗಾರರು ಅನುಭವಿಗಳು ರಾಜ್ಯದಲ್ಲಿ ಹಲವಾರು ಬಾರಿ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯರ ಮೇಲೆ ಸಂಪೂರ್ಣ ವಿಶ್ವಾಸವಿದೆ. ೧೩೬ ಸ್ಥಾನಗಳ ಸ್ಪಷ್ಟ ಬಹುಮತ ಇರುವುದರಿಂದ ಸರ್ಕಾರವು ಸ್ಥಿರವಾಗಿದ್ದು ಯಾವುದೇ ಬದಲಾವಣೆಗಳು ಆಗುವುದಿಲ್ಲ. ಬದಲಾವಣೆ ಎಂಬುವುದು ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದವರು ನೀಡುತ್ತಿರುವ ಹುಸಿ ಹೇಳಿಕೆಗಳಾಗಿದೆ ಎಂದು ಹೇಳಿದರು.ಅರ್ಥವಿಲ್ಲದ ಪಾದಯಾತ್ರೆ

ಬಿಜೆಪಿ ಮತ್ತು ಜೆ.ಡಿ.ಎಸ್ ಮೈತ್ರಿ ಪಕ್ಷವು ಪಾದಯಾತ್ರೆ ಮಾಡುತ್ತಿರುವುದು ಅರ್ಥವಿಲ್ಲದ್ದಾಗಿದೆ. ಮುಡಾದಲ್ಲಿನ ಆರೋಪವು ಸತ್ಯಕ್ಕೆ ದೂರವಾಗಿದೆ, ಸತ್ಯಾಂಶಗಳನ್ನು ತಿರುಚಲಾಗಿದೆ ಅದನ್ನು ಮುಖ್ಯ ಮಂತ್ರಿಗಳೇ ಮಾಧ್ಯಮದ ಮೂಲಕ ನೇರವಾಗಿ ಎಲ್ಲವನ್ನು ವಿವರಿಸಿದ್ದರು. ಆದರೂ ಸಹ ಪಾದಯಾತ್ರೆ ಮೂಲಕ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೇ ಎಂದು ವ್ಯಂಗವಾಡಿದರು. ಕೋಲಾರ ಕ್ಷೇತ್ರದಲ್ಲಿ ನನ್ನ ಆಡಳಿತದ ಅವಧಿಯಲ್ಲಿ ಹಲವಾರು ಕಾಮಗಾರಿಗಳಿಗೆ ಮಂಜೂರಾತಿ ಆಗಿತ್ತು, ಈಗಿನ ಶಾಸಕರು ಅವುಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತಂದಿದ್ದಾರೆ ಹಾಗಾಗಿ ಇದು ಎಲ್ಲ ಸಹಜವಾದ ಪ್ರಕ್ರಿಯೆಗಳು ಆಗಿರುತ್ತದೆ ಹೇಳುವುದಕ್ಕೂ ಮಾಡುವುದಕ್ಕೂ ಹಲವು ವ್ಯತ್ಯಾಗಳಿರುತ್ತದೆ ಎಂದು ಸ್ಪಷ್ಟಪಡಿಸಿದರು.ಯರಗೋಳ್‌ ನೀರು ಪೂರೈಕೆ

ಯರಗೋಳ್ ಯೋಜನೆಯಲ್ಲಿ ಕೋಲಾರ ನಗರಕ್ಕೆ ಸಂಪೂರ್ಣವಾಗಿ ನೀರು ಪೂರೈಕೆ ಮಾಡದೆ ಇರುವುದರ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ನೋಡಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು. ನಗರದ ೩೫ ವಾರ್ಡ್‌ಗಳಿಗೂ ಯರಗೋಳ್ ನೀರನ್ನು ಪೂರೈಕೆ ಮಾಡ ಬೇಕಾಗಿರುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ, ಪೈಪುಗಳ ಕಾಮಗಾರಿಯಲ್ಲಿ ಕಳಪೆಯಾಗಿರುವುದನ್ನು ಕೂಡಲೇ ದುರಸ್ತಿಗೆ ಕ್ರಮಕೈಗೊಂಡು ನೀರು ಪೂರೈಕೆಗೆ ಆಧ್ಯತೆ ನೀಡುವಂತಾಗಬೇಕೆಂದು ಕಿವಿಮಾತು ತಿಳಿಸಿದರು. ಹುದ್ದೆಗಾಗಿ ಲಾಭಿ ಮಾಡುವುದಿಲ್ಲ

ಕಾಂಗ್ರೇಸ್ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ತಮಗೆ ಸ್ಥಾನ ನೀಡುವ ಆಶ್ವಾಸನೆ ನೀಡಿದ್ದು ನಿಜ. ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿದಿದೆ. ಸಿಎಂಗೆ ಹಲವು ಒತ್ತಡದಲ್ಲಿ ವಿಳಂಬವಾಗಿರಬಹುದು, ಹಠಕ್ಕೆ ಬಿದ್ದು ಒತ್ತಾಯಿಸಲು ಲಾಭಿ ಮಾಡುವ ರಾಜಕಾರಣ ನನಗೆ ತಿಳಿದಿಲ್ಲ ಹೆಚ್ಚಿನ ಒತ್ತಡ ಹೇರಲು ನನ್ನ ಅಂತರಾತ್ಮ ಒಪ್ಪುವುದಿಲ್ಲ. ನನಗೂ ಸ್ವಾಭಿಮಾನ ಎಂಬುವುದು ಇದೆ ಎಂದು ತಿಳಿಸಿದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ