‘ಸಚಿವ ಡಾ.ಸುಧಾಕರ್‌ರಿಂದ ಧ್ವೇಷ ರಾಜಕಾರಣ’ : ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ - ಸಂಸದ ಡಾ ಕೆ ಸುಧಾಕರ್ ಆರೋಪ

KannadaprabhaNewsNetwork |  
Published : Aug 04, 2024, 01:24 AM ISTUpdated : Aug 04, 2024, 04:25 AM IST
ಜೆಕೆ | Kannada Prabha

ಸಾರಾಂಶ

ಸಚಿವ ಡಾ.ಎಂ.ಸಿ ಸುಧಾಕರ್ ದ್ವೇಷ ರಾಜಕಾರಣ ಮಾಡುತ್ತಾ ಒಬ್ಬರ ಮೇಲೆ ಐದಾರು ಕೇಸ್ ಹಾಕುತ್ತಿದ್ದಾರೆ. ಆದರೆ ಇಂತಹ ಗೊಡ್ಡು ಬೆದರಿಕೆಗಳನ್ನು ಹಾಕಿದರೆ ಯಾರು ಭಯಪಡುವುದಿಲ್ಲ, ಆದರೆ ಈಗಿನ ರಾಜಕೀಯ ಸ್ಥಿತಿ ನೋಡುತ್ತಿದ್ದರೆ ಹಾಲಿ ಸರ್ಕಾರ ಯಾವಾಗ ಬೀಳೋತ್ತೋ ಗೊತ್ತಿಲ್ಲ

 ಚಿಂತಾಮಣಿ :  ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದು, ಒಬ್ಬರ ಮೇಲೆ ಐದಾರು ಸುಳ್ಳು ಕೇಸ್‌ಗಳನ್ನು ದಾಖಲಿಸುವಂತೆ ಪೊಲೀಸರ ಮೇಲೆ ಸಚಿವ ಡಾ.ಎಂ.ಸಿ.ಸುಧಾಕರ್ ಒತ್ತಡ ಹೇರಿದ್ದಾರೆಂದು ಸಂಸದ ಡಾ ಕೆ ಸುಧಾಕರ್ ಆರೋಪಿಸಿದರು.

ನಗರ ಹೊರ ವಲಯದ ಜೆಕೆ ಭವನದಲ್ಲಿ ಶನಿವಾರ ಕೋಲಾರ ಸಂಸದ ಎಂ.ಮಲ್ಲೇಶ್‌ಬಾಬು ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್‌ರಿಗೆ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡಿ ಹಾಗೂ ಬಿಜೆಪಿ ಮುಖಂಡ ದೇವನಹಳ್ಳಿ ಜಿ.ಎನ್ ವೇಣುಗೋಪಾಲ್ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಪ್ರತಿಯೊಬ್ಬ ಕಾರ್ಯಕರ್ತನ ಸೋಲು

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ಡಾ.ಸುಧಾಕರ್, ಚಿಂತಾಮಣಿ ಕ್ಷೇತ್ರ ವಿಶೇಷವಾದದ್ದು ಜೊತೆಗೆ ಪುಣ್ಯ ಕ್ಷೇತ್ರವು ಹೌದು. ದಿವಂಗತ ಕೆ.ಎಂ.ಕೃಷ್ಣಾರೆಡ್ಡಿ ಸರಳ ಸಜ್ಜನಿಕೆ ವ್ಯಕ್ತಿ, ಅದೇ ರೀತಿ ಜೆಕೆ ಕೃಷ್ಣಾರೆಡ್ಡಿ ಸಹ ಸರಳ ಸಜ್ಜನಿಕೆಯ ವ್ಯಕ್ತಿ ಜನರ ನಡುವೆ ಸದಾ ಇರುತ್ತಿದ್ದರು. ಜೆಕೆ ಕೃಷ್ಣಾರೆಡ್ಡಿ ಸೋತ್ತಿದ್ದಾರೆಂದರೆ ಅದು ಪ್ರತಿಯೊಬ್ಬ ಕಾರ್ಯಕರ್ತನ ಸೋಲೆಂದರು.

ಸಚಿವ ಡಾ.ಎಂ.ಸಿ ಸುಧಾಕರ್ ದ್ವೇಷ ರಾಜಕಾರಣ ಮಾಡುತ್ತಾ ಒಬ್ಬರ ಮೇಲೆ ಐದಾರು ಕೇಸ್ ಹಾಕುತ್ತಿದ್ದಾರೆ. ಆದರೆ ಇಂತಹ ಗೊಡ್ಡು ಬೆದರಿಕೆಗಳನ್ನು ಹಾಕಿದರೆ ಯಾರು ಭಯಪಡುವುದಿಲ್ಲ, ಆದರೆ ಈಗಿನ ರಾಜಕೀಯ ಸ್ಥಿತಿ ನೋಡುತ್ತಿದ್ದರೆ ಹಾಲಿ ಸರ್ಕಾರ ಯಾವಾಗ ಬೀಳೋತ್ತೋ ಗೊತ್ತಿಲ್ಲ ಎಂದರು.

ಆಗಸದಲ್ಲಿ ತೆಲುತ್ತಿರುವ ಸಚಿವ

ಕೃಷ್ಣಾರೆಡ್ಡಿರವರು ಜನರ ಮಧ್ಯೆ ಇರುತ್ತಿದ್ದರು. ಅವರು ಸೋತ್ತಿದ್ದು ನೋವು ತಂದಿದೆ. ಆದರೆ ೧೪ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಹೆಚ್ಚಿನ ಮತಗಳು ಬಂದಿತ್ತಾದರೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬಹುಮತ ಬಂದಿದೆ. ನಾನು ಸಹಾ ಸಚಿವನಾಗಿ ಕೆಲಸ ಮಾಡಿ ನೆಲದ ಮೇಲೆ ನಡೆದಿದ್ದೇನೆಯೇ ಹೊರತು ಡಾ ಎಂ.ಸಿ.ಸುಧಾಕರ್‌ರಂತೆ ಆಕಾಶದಲ್ಲಿ ತೇಲಾಡುತ್ತಿಲ್ಲವೆಂದು ಕುಟುಕಿದರು.

ಶ್ರೀನಿವಾಸಪುರ ಶಾಸಕ ಹಾಗೂ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ೪೫ ವರ್ಷ ರಾಜಕೀಯ ಅನುಭವವಿದ್ದು 5 ಬಾರಿ ಶಾಸಕನಾಗಿದ್ದೇನೆ ಇಂದಿನ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು ಅಭಿವೃದ್ಧಿ ಶೂನ್ಯ, ಅನುದಾನ ಶೂನ್ಯ, ಭಾಗ್ಯಗಳನ್ನು ನೀಡುವ ಮೂಲಕ ಸರ್ಕಾರವು ರಾಜ್ಯವನ್ನು ದೇಶಗಳಾದ ಶ್ರೀಲಂಕಾ, ಪಾಕಿಸ್ತಾನ ದೇಶಗಳಂತೆ ರಾಜ್ಯವನ್ನು ಸರ್ವನಾಶ ಮಾಡುತ್ತಿದೆಯಷ್ಟೇಯೆಂದರು.

ಜಿಲ್ಲೆಗೆ ಕೃಷ್ಣಾ ನೀರಲು ಯತ್ನ

ಸಂಸದ ಎಂ. ಮಲ್ಲೇಶ್‌ಬಾಬು ಮಾತನಾಡಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಜನತೆಗೆ ಚಿರಋಣಿಯಾಗಿದ್ದು ಜಿಲ್ಲೆಗೆ ಕೃಷ್ಣಾ ನದಿ ನೀರನ್ನು ಶಾಶ್ವತವಾಗಿ ಹರಿಸುವ ಹೆಬ್ಬಯಕೆಯನ್ನು ಹೊಂದಿದ್ದೇನೆ, ಅವಳಿ ಜಿಲ್ಲೆಗೆ ಶಾಶ್ವತ ನೀರನ್ನು ತರುವ ನಿಟ್ಟಿನಲ್ಲಿ ಡಿಪಿಆರ್ ವ್ಯವಸ್ಥೆಯನ್ನು ತಯಾರಿಸಲಾಗುತ್ತಿದ್ದು ಜನವರಿ - ಫೆಬ್ರವರಿಯೊಳಗೆ ಡಿಪಿಆರ್ ಸಿದ್ಧಪಡಿಸಿ ಅದನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ನೇತೃತ್ವದಲ್ಲಿ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿ ಡಿಪಿಆರ್‌ನ್ನು ಸಲ್ಲಿಸಲಾಗುವುದೆಂದರು.

ರೈಲ್ವೆ ರಾಜ್ಯ ಸಚಿವ ಸೋಮಣ್ಣರವರಿಗೂ ಒಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಚಿಕ್ಕಬಳ್ಳಾಪುರ - ಕೋಲಾರ ಮಾರ್ಗವಾಗಿ ಸಂಚರಿಸುವ ೮ ಗಂಟೆ ರೈಲನ್ನು ಬಂಗಾರಪೇಟೆಯವರೆವಿಗೂ ವಿಸ್ತರಿಸಬೇಕು ಚೆನ್ನೈ ಮತ್ತು ತಿರುಪತಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ, ಕುಪ್ಪಂನಿಂದ - ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಸ್ತಾವನೆ ಹಾಗೂ ಹೊಸಕೋಟೆ - ಮದನಪಲ್ಲಿ ರಾಷ್ಟಿçÃಯ ಹೆದ್ದಾರಿಯನ್ನು ಉನ್ನತದರ್ಜೆ ಗೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅರುಣ್ ಬಾಬು, ದಿನ್ನಮಿಂದಹಳ್ಳಿ ಬೈರಾರೆಡ್ಡಿ, ಕೈವಾರ ಸುಬ್ಬಾರೆಡ್ಡಿ, ಗುಡೇಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ ಸಿ.ಎನ್.ವೆಂಕಟೇಶ್, ಪ್ರಕಾಶ್, ಪ್ರಭಾಕರ್, ಚಂದ್ರಾರೆಡ್ಡಿ, ಅಲ್ಲು, ನಂದನA ಶ್ರೀರಾಮರೆಡ್ಡಿ, ಕೊತ್ತೂರು ಬಾಬು, ಅಲ್ಲಭಕಾಷ್, ವಕೀಲ ಗೋಪಿ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕುರುಬೂರು ನಟರಾಜ್, ಜೆಸಿಬಿ ನಟರಾಜ್, ಶ್ರೀನಿವಾಸರೆಡ್ಡಿ, ವೀಣಾಕೃಷ್ಣಾರೆಡ್ಡಿ, ಮುರುಗಮಲ್ಲ ರಾಜಣ್ಣ ಪ್ರತಾಪ್, ಶಿವಾರೆಡ್ಡಿ, ಮಹೇಶ್ ಬೈ, ಸಿ.ಆರ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ