ರಾಜಸ್ಥಾನದಲ್ಲಿ 490 ನಾಮಪತ್ರ ಹಿಂಪಡೆತ: ಕಣದಲ್ಲಿ 1875 ಮಂದಿ

KannadaprabhaNewsNetwork | Updated : Nov 11 2023, 01:17 AM IST

ಸಾರಾಂಶ

ರಾಜಸ್ಥಾನದಲ್ಲಿ ನ.25 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 490 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಡೆದುಕೊಂಡಿದ್ದು, ಪ್ರಸ್ತುತ ಕಣದಲ್ಲಿ 1875 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಜೈಪುರ್‌: ರಾಜಸ್ಥಾನದಲ್ಲಿ ನ.25 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 490 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಡೆದುಕೊಂಡಿದ್ದು, ಪ್ರಸ್ತುತ ಕಣದಲ್ಲಿ 1875 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಮಾಜಿ ಸಚಿವ ರಾಜ್‌ಪಾಲ್‌ ಸಿಂಗ್‌ ನಾಮಪತ್ರ ಹಿಂಪಡೆದವರಲ್ಲಿ ಪ್ರಮುಖರಾಗಿದ್ದಾರೆ. ಕಣದಲ್ಲಿರುವವರ ಪೈಕಿ 183 ಜನರು ಮಹಿಳೆಯರಾಗಿದ್ದರೆ ಉಳಿದ 1,692 ಜನರು ಪುರುಷ ಅಭ್ಯರ್ಥಿಗಳಾಗಿದ್ದಾರೆ. ಒಟ್ಟಾರೆ ಸಲ್ಲಿಕೆಯಾಗಿದ್ದ 2,605 ನಾಮಪತ್ರಗಳ ಪೈಕಿ 240 ಜನರ ನಾಮಪತ್ರಗಳು ಪರಿಶೀಲನೆ ವೇಳೆ ತಿರಸ್ಕೃತಗೊಂಡಿವೆ. ಜೋತ್ವಾರಾ ಕ್ಷೇತ್ರದಲ್ಲಿ ಅತಿ ಹೆಚ್ಚು 18 ಅಭ್ಯರ್ಥಿಗಳಿದ್ದರೆ, ದೌಸಾದ ಲಾಲ್ಸೋಟ್ ಕ್ಷೇತ್ರದಲ್ಲಿ ಕೇವಲ ಮೂರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

Share this article