ನಿರೀಕ್ಷೆಯಂತೆ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ಬಾಬು ಗೆಲುವು

KannadaprabhaNewsNetwork |  
Published : Jun 05, 2024, 12:31 AM ISTUpdated : Jun 05, 2024, 04:23 AM IST
೪ಕೆಎಲ್‌ಆರ್-೮ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಸಂಸದ ಎಸ್.ಮುನಿಸ್ವಾಮಿರನ್ನು ಕಾರ್ಯಕರ್ತರು ಭುಜದ ಮೇಲೆ ಎತ್ತಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ದೇಶದಲ್ಲಿ ಎನ್‌ಡಿಎ ೧೫೦ ಕ್ಷೇತ್ರಗಳಲ್ಲಿ ೫ ಸಾವಿರದಿಂದ ೬ ಸಾವಿರ ಮತಗಳ ಅಂತರದಲ್ಲಿ ಇದೆ. ಅದು ಪಕ್ಷದ ಗೆಲುವೇ ಆಗಿದೆ. ಏನೇ ಆಗಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂಬುದು ಸಂಸದ ಮುನಿಸ್ವಾಮಿ ಅಭಿಪ್ರಾಯ

 ಕೋಲಾರ ; ನಿರೀಕ್ಷಿಸಿದಂತೆ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್‌ಬಾಬು ಗೆಲುವು ಸಾಧಿಸಿದ್ದಾರೆ, ಕೆಜಿಎಫ್ ಮತ್ತು ಚಿಂತಾಮಣಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲೀಡ್ ಬರುತ್ತದೆ ಅಂದುಕೊಂಡಿದ್ದೆ. ಅದರಂತೆ ಕೆಜಿಎಫ್ ಕ್ಷೇತ್ರದಲ್ಲಿ ಮಾತ್ರ ಲೀಡ್ ಬಂದಿರುವ ಕಾರಣ ಗೆಲುವಿನ ಅಂತರ ಕಡಿಮೆಯಾಗಿದೆ, ಗೆಲುವಿಗೆ ಒಂದೊಂದು ಮತವು ಮುಖ್ಯ, ಅಂದುಕೊಂಡಂತೆ ಗೆದ್ದು ತೋರಿಸಿದ್ದೇವೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು. ನಗರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ೧೫೦ ಕ್ಷೇತ್ರಗಳಲ್ಲಿ ೫ ಸಾವಿರದಿಂದ ೬ ಸಾವಿರ ಮತಗಳ ಅಂತರದಲ್ಲಿ ಇದ್ದೇವೆ, ಅದು ನಮ್ಮ ಗೆಲುವೇ ಆಗಿದೆ. ಏನೇ ಆಗಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂದರು.

ದಕ್ಷಿಣದಲ್ಲಿ ಎನ್‌ಡಿಗೆ ಹೆಚ್ಚು ಸ್ಥಾನ

ದಕ್ಷಿಣ ಭಾರತದಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನಗಳು ಬಂದಿವೆ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡಲ್ಲಿ ಎನ್‌ಡಿಎಗೆ ಉತ್ತಮ ಫಲಿತಾಂಶ ಬಂದಿದೆ, ಕೆಲವೊಂದು ರಾಜ್ಯಗಳಲ್ಲಿ ಕಡಿಮೆ ಸ್ಥಾನಗಳು ಬಂದಿವೆ. ಅದಕ್ಕೆ ನಮ್ಮ ಅತಿನಿರೀಕ್ಷೆಯೇ ಕಾರಣವಾಗಿದೆ, ಇದರಿಂದ ಸ್ವಲ್ಪ ಹಿನ್ನಡೆಯಾಗಿದೆ. ಇಂಡಿಯಾ ಒಕ್ಕೂಟ ಎನ್‌ಡಿಎ ಅಧಿಕಾರಕ್ಕೆ ಬಾರದಂತೆ ತಡೆಯಲು ಕುತಂತ್ರಗಳನ್ನು ನಡೆಸಿದರೂ ಅದು ಫಲಿಸಲಿಲ್ಲ, ಮೋದಿಯವರು ೩ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದರು.

ಕರ್ನಾಟಕ ಸರ್ಕಾರದ ಹಣವನ್ನು ವರ್ಗಾವಣೆ ಮಾಡಿಕೊಂಡು ಅಲ್ಲಿಯ ಚುನಾವಣೆಗೆ ಬೆಂಬಲ ಸೂಚಿಸಿದರು, ಇದರಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಯಿತು, ಹಣ ಮತ್ತು ತೋಳ್ಬಲದಿಂದ ೬೦ ವರ್ಷದಿಂದ ದೇಶವನ್ನಾಳಿ ಕೂಡಿಟ್ಟ ಹಣ ಚೆಲ್ಲಿ ಇಂಡಿಯಾ ಒಕ್ಕೂಟ ಚುನಾವಣೆ ನಡೆಸಿತು ಎಂದು ಟೀಕಿಸಿದರು.

ಮಲ್ಲೇಶಬಾಬುಗೆ ಸಹಕಾರ ನೀಡಿಕೋಲಾರ ಲೋಕಸಭಾ ಕ್ಷೇತ್ರದ ಧರ್ಮ ಮತ್ತು ಅಧರ್ಮದ ಮಧ್ಯೆ ನಡೆದ ಚುನಾವಣೆಯಲ್ಲಿ ಸರ್ಕಾರ ಅವರದ್ದೇ ಇದ್ದುಕೊಂಡು ಸರ್ಕಾರ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಮತದಾರರನ್ನು ಓಲೈಸಿಕೊಂಡ ನಡುವೆಯೂ ನಮ್ಮ ಮೈತ್ರಿ ಎಂ. ಮಲ್ಲೇಶ್ ಬಾಬು ಗೆಲುವು ಸಾಧಿಸಿದ್ದಾರೆ, ಅದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಮತದಾರರ ಋಣದಲ್ಲಿ ನಾವಿದ್ದೇವೆ, ನನಗೆ ೫ ವರ್ಷ ಸಹಕಾರ ಕೊಟ್ಟ ರೀತಿಯಲ್ಲಿ ಎಂ. ಮಲ್ಲೇಶ್‌ಬಾಬುರಿಗೆ ಸಹಕಾರ ನೀಡಬೇಕು ಎಂದರು.ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ, ಮತದಾರರು ಕೊಟ್ಟ ತೀರ್ಪನ್ನು ಉಪಯೋಗಿಸಿಕೊಂಡು ಕಾಂಗ್ರೆಸ್ ದುರಾಡಳಿತವನ್ನು ಕಿತ್ತೊಗೆಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ
ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು