ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 2 ರಲ್ಲಿ ಬಿಜೆಪಿ ಶಾಸಕರಿದ್ದಾರೆ. 1.86 ಲಕ್ಷ ಮತಗಳ ಅಂತರದಿಂದ ಕಳೆದ ಸಲ ಗೆಲುವು ಸಾಧಿಸಿದ್ದೆವು. ಬಾಗೇಪಲ್ಲಿ, ದೇವನಹಳ್ಳಿಯಲ್ಲಿ ಹೆಚ್ಚಿನ ಮತ ಬಂದಿರುವುದರಿಂದ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಯವರ ಬೆಂಬಲ ಇರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ದೇವನಹಳ್ಳಿಯಲ್ಲಿ ಸಮಾವೇಶನ್ನು ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ಅದೇರೀತಿ ನೆಲಮಂಗಲದಲ್ಲಿಯೂ ಪ್ರಾರಂಭವಾಗಲಿದೆ ಎಂದರು.ದೇವಾಲಯದ ಹುಂಡಿಯೂ ಸರ್ಕಾರಕ್ಕೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳಿಗೆ 2 ಸಾವಿರ ರು.ಗಳನ್ನು ನೀಡಿ ಮದ್ಯಪಾನದ ಬೆಲೆ ಹೆಚ್ಚು ಮಾಡಿದ್ದಾರೆ. ಈ ರೀತಿಯ ಚುನಾವಣೆ ಗಿಮಿಕ್ ಬಹಳದಿನ ನಡೆಯಲ್ಲ. 56 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗೆ ಮೀಸಲಿಟ್ಟಿದ್ದಾರೆ. ಹಳೆಯದೂ ಸೇರಿದರೆ 1ಲಕ್ಷ ಕೋಟಿ ಸಾಲವಾಗಿದೆ. ಇನ್ನು ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ದೇವಸ್ಥಾನಗಳಲ್ಲಿ ಬರುವ ಆದಾಯದಲ್ಲಿ ಶೇ. 5 ರಿಂದ 10 ರಷ್ಟು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಇದು ದೌರ್ಭಾಗ್ಯದ ಸಂಗತಿ ಎಂದರು.ಗೌರಿಬಿದನೂರು ಬಾಗೇಪಲ್ಲಿಯಲ್ಲಿ ನೀರಿಲ್ಲ, ಕೈಗಾರಿಕೆಗಳಿಲ್ಲ, ರಸ್ತೆ ಅಭಿವೃದ್ಧಿಯಿಲ್ಲ ಯಾವುದೇ ಕಾರ್ಯಕ್ರಮಯಾಗುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದರೆ ಬರಗಾಲ ಬರುವುದು. ಕುಡಿಯುವ ನೀರಿನ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ. ಬೋರ್ ವೆಲ್ ಗಳು ಒಣಗುತ್ತಿದೆ ಎಂದರು.ಮೋದಿ ಮತ್ತೆ ಪ್ರಧಾನಿಯಾಗಬೇಕುಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು. ಹಾಗಾಗಿ ಇಲ್ಲಿಯೂ ಬಿಜೆಬಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿರುವುದರಿಂದ ನಾವು ಕಾರ್ಯಕರ್ತರು, ಮುಖಂಡರು, ಹಗಲಿರುಳು ಶ್ರಮಿಸಿ ಸಂಸದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.ಪತ್ರಿಕಾಗೋಷ್ಟಿಯಲ್ಲಿ ರವಿನಾರಾಯಣರೆಡ್ಡಿ, ಕಟ್ಟಾಸುಬ್ರಮಣ್ಯ ನಾಯ್ಡು, ಡಾ.ಶಶಿಧರ್, ಹೆಚ್.ಎಸ್.ಮುರಳೀಧರ್ ರಮೇಶ್‌ರಾವ್, ವೇಣುಮಾಧವ್, ಜಯಣ್ಣ, ಮಾರ್ಕೆಟ್ ಮೋಹನ್,ಮತ್ತಿತರರು ಇದ್ದರು.