ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಸಾರ್ವಜನಿಕ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಾದೇಶ್ ಶುಭಕೋರಿದರು. | Kannada Prabha
Image Credit: KP
‘ನಮ್ಮಲ್ಲಿ ಬಣ ರಾಜಕೀಯ ಎಂಬುದು ಇಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿ, ನಾವೆಲ್ಲ ತೆರಳುತ್ತಿರುವ ವಿದೇಶ ಪ್ರವಾಸಕ್ಕೆ ಮಾಧ್ಯಮ ಹಾಗೂ ವಿಪಕ್ಷದವರು ಬೇರೆ ರೀತಿ ವ್ಯಾಖ್ಯಾನಿಸುವುದು ಬೇಡ. ನಮ್ಮದು ಕಾಂಗ್ರೆಸ್ ಬಣ, ನಾವೆಲ್ಲ ಹೈಕಮಾಂಡ್ ನಿಲುವಿಗೆ ಬದ್ಧ’ ಎಂದು ಶಾಸಕ ಎ. ಆರ್. ಕೖಷ್ಣಮೂರ್ತಿ ಹೇಳಿದರು.
ಮಾಧ್ಯಮಗಳಿಂದ ಪ್ರವಾಸಕ್ಕೆ ಅನ್ಯ ಅರ್ಥ: ಕೃಷ್ಣಮೂರ್ತಿ
---
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
‘ನಮ್ಮಲ್ಲಿ ಬಣ ರಾಜಕೀಯ ಎಂಬುದು ಇಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿ, ನಾವೆಲ್ಲ ತೆರಳುತ್ತಿರುವ ವಿದೇಶ ಪ್ರವಾಸಕ್ಕೆ ಮಾಧ್ಯಮ ಹಾಗೂ ವಿಪಕ್ಷದವರು ಬೇರೆ ರೀತಿ ವ್ಯಾಖ್ಯಾನಿಸುವುದು ಬೇಡ. ನಮ್ಮದು ಕಾಂಗ್ರೆಸ್ ಬಣ, ನಾವೆಲ್ಲ ಹೈಕಮಾಂಡ್ ನಿಲುವಿಗೆ ಬದ್ಧ’ ಎಂದು ಶಾಸಕ ಎ. ಆರ್. ಕೖಷ್ಣಮೂರ್ತಿ ಹೇಳಿದರು.ವಿದೇಶ ಪ್ರವಾಸಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಮ್ಮಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಎಂಬುದಿಲ್ಲ. ನಾವೆಲ್ಲ ಹೈಕಮಾಂಡ್ ಬಣ, ನಾವೆಲ್ಲ ಕಾಂಗ್ರೆಸ್‌ನಲ್ಲೇ ಇದ್ದೇವೆ. ನಾವೆಲ್ಲ ವೈಯುಕ್ತಿಕವಾಗಿ ಪ್ರವಾಸ ಹೊರಟಿದ್ದೇವೆ. ನಮ್ಮ ವಿದೇಶ ಪ್ರವಾಸವನ್ನು ಬೇರೆ ರೀತಿ ವ್ಯಾಖ್ಯಾನಿಸುವುದು ಬೇಡ. ಇದ್ನು ವಿಪಕ್ಷದವರು ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದರು. ---18ಕೆಜಿಎಲ್ 81
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.