ಜನತಾ ದರ್ಶನ ಕಾರ್ಯಕ್ರಮ ಸ್ಥಳದ ಮುಂದೆ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಬರಲಿಲ್ಲ ಎಂದು ಆಕ್ರೋಶಗೊಂಡ ಬಿಜೆಪಿಗರು ಜನತಾ ದರ್ಶನ ಕಾರ್ಯಕ್ರಮ ನಡೆವ ಸ್ಥಳದ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಸೆಸ್ಕಾಂ ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರು ಅನುಮತಿ ಪಡೆದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದರು.
ವಿದ್ಯುತ್ ಸಮಸ್ಯೆ ಖಂಡಿಸಿ ಧರಣಿ । ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಬರಲಿಲ್ಲವೆಂದು ಆಕ್ರೋಶ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಬರಲಿಲ್ಲ ಎಂದು ಆಕ್ರೋಶಗೊಂಡ ಬಿಜೆಪಿಗರು ಜನತಾ ದರ್ಶನ ಕಾರ್ಯಕ್ರಮ ನಡೆವ ಸ್ಥಳದ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಸೆಸ್ಕಾಂ ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರು ಅನುಮತಿ ಪಡೆದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಸೆಸ್ಕಾಂ ಎಇಇ ತಹಸೀಲ್ದಾರ್‌ ಗೆ ಫೋನ್‌ ಮೂಲಕ ಸಂಪರ್ಕಿಸಿದಾಗ ತಹಸೀಲ್ದಾರ್‌ ಜನತಾ ದರ್ಶನದಲ್ಲಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ತಹಸೀಲ್ದಾರ್‌ ಬರದಿದ್ದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಮುಂದೆ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಟಿ.ರಮೇಶ್ ಬಾಬು ಪ್ರತಿಭಟನಾಕಾರರ ಮನವಿ ಆಲಿಸಲು ಬಂದಾಗ ದಿಕ್ಕಾರದ ಘೋಷಣೆಯ ಬಳಿಕ ವಾದ ವಿವಾದ ನಡೆದು ಜಿಲ್ಲಾಧಿಕಾರಿ ಕರೆಯಿಸಿ ಎಂದು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಆಗಮಿಸಿ ವಿದ್ಯುತ್‌ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಸಮಸ್ಯೆ ಪರಿಹಾರ ಸಂಬಂಧ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿರುವೆ ಎಂದರು. ಪೊಲೀಸರ ವೈಪಲ್ಯ? ಗುಂಡ್ಲುಪೇಟೆ: ಬಿಜೆಪಿ ಕಾರ್ಯಕರ್ತರು ವಿದ್ಯುತ್‌ ಸಮಸ್ಯೆ ಖಂಡಿಸಿ ಪಟ್ಟಣದ ಸೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಗೆ ಪೊಲೀಸರ ಅನುಮತಿ ಪಡೆದ ನಂತರ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಮುಂದೆ ಬಿಜೆಪಿಗರು ಪ್ರತಿಭಟಿಸಲು ಅವಕಾಶ ನೀಡಿದ ಪೊಲೀಸರ ಕ್ರಮದಿಂದಾಗಿ ಸ್ಥಳೀಯ ಶಾಸಕರಿಗೆ ದಿಕ್ಕಾರ ಕೂಗಲು ಅವಕಾಶ ಮಾಡಿ ಕೊಟ್ಟಿದ್ದು ಇಲ್ಲಿ ಪೊಲೀಸರ ವೈಪಲ್ಯ ಎದ್ದು ಕಾಣುತ್ತಿದೆ. ಬಾಕ್ಸ್ ಶಾಸಕ ಗಣೇಶ್‌ಗೆ ಜೈಕಾರ, ದಿಕ್ಕಾರ ಗುಂಡ್ಲುಪೇಟೆ: ಜನತಾ ದರ್ಶನ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾರಿನ ಸುತ್ತ ನಿಂತ ಕಾಂಗ್ರೆಸ್ಸಿಗರು ಜೈಕಾರ ಹಾಕಿದರೆ,ಪ್ರತಿಭಟನಾ ನಿರತ ಬಿಜೆಪಿಗರು ದಿಕ್ಕಾರ ಘೋಷಣೆ ಕೂಗಿದರು. ಈ ಸಮಯದಲ್ಲಿ ಬಿಜೆಪಿ ಎಂ.ಪ್ರಣಯ್‌ ಕಿವಿ ಕೇಳಿಸದ ಶಾಸಕನಿಗೆ ದಿಕ್ಕಾರ,ರೈತ ವಿರೋಧಿ ಶಾಸಕನಿಗೆ ದಿಕ್ಕಾರ,ಕಾಂಗ್ರೆಸ್‌ ಸರ್ಕಾರಕ್ಕೆ ದಿಕ್ಕಾರ,ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ದಿಕ್ಕಾರ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ದಿಕ್ಕಾರದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ,ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರು ಇದ್ದರು. ------------------- 13ಜಿಪಿಟಿ3 ಗುಂಡ್ಲುಪೇಟೆ ಡಾ.ಬಿ.ಆರ್.ಅಂಬೇಡ್ಕರ್‌ ಭವನದ ಮುಂದೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾರ್ಯಕರ್ತರ ಬೆಂಗಾವಲಿನಲ್ಲಿ ತೆರಳಿದರು. ---------------

Share this article