;Resize=(412,232))
ಶಿವಮೊಗ್ಗ : ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರ ರಾಜೀನಾಮೆ ಕೊಟ್ಟಿದ್ದರೂ ನಮ್ಮ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾದಯಾತ್ರೆ ಘೋಷಣೆ ಮಾಡಿದ್ದೆವು. ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಸೆ.1ರಿಂದ ಘೋಷಣೆ ಮಾಡಿದ್ದೆವು. ನಾಗೇಂದ್ರ ರಾಜೀನಾಮೆ ವಿಷಯ ಅಷ್ಟೇ ಅಲ್ಲ, ಬರ, ಗೃಹಲಕ್ಷ್ಮೀ ಹಣ, ಉದ್ಯೋಗ ನೇಮಕಾತಿ ಬಗ್ಗೆಯೂ ಪಾದಯಾತ್ರೆ ಮಾಡುತ್ತೇವೆ ಎಂದರು.
ಬಿಜೆಪಿ ಜೆಡಿಎಸ್ ಸದನದ ಒಳಗೆ- ಹೊರಗೆ ಹೋರಾಟ ನಡೆಸಲಾಗಿತ್ತು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲಾಗಿತ್ತು. ಸಿಎಂ ಅಧಿವೇಶನ ಬಿಟ್ಟು ಪಲಾಯನ ಮಾಡಿದರು. ಸದನದಲ್ಲಿ ಬರದ ವಿಚಾರ ಚರ್ಚೆಯಾಗಬೇಕು ಎಂದು ಹೇಳಿದ್ದೆವು. ಬರ, ಕೆಪಿಎಸ್ಸಿ ಹಗರಣದ ಬಗ್ಗೆ ಚರ್ಚೆ ಆಗಬೇಕಿತ್ತು ಎಂದರು.
ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಹಣ ವರ್ಗಾವಣೆ ಬಗ್ಗೆ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆದಿದ್ದರು. ಅಂತೂ ಇಂತು ರಾಜೀನಾಮೆ ನೀಡಿದ್ದಾರೆ.
ನಾಗೇಂದ್ರ ನೋವಿನಲ್ಲಿ ಹಲವು ಸವಾಲು ಹಾಕಿದ್ದಾರೆ. ಅವರು ಮಾತನಾಡಬೇಕಿರೋದು ಚಂದ್ರಶೇಖರ್ ಕುಟುಂಬದ ಬಗ್ಗೆ. ಯಾವುದೇ ಪಿಎಫ್ ಹಣ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಕಾಂಗ್ರೆಸ್ ನಾಯಕರು, ಸಚಿವರು ಈ ಬಗ್ಗೆ ಮಾತನಾಡಲಿ ಎಂದು ಕುಟುಕಿದರು.