ವಿಜಯಪುರ: ಭಯೋತ್ಪಾದನಾ ಕೃತ್ಯಗಳಿಗೆ ಕರ್ನಾಟಕ ಸಂರಕ್ಷಿತ ತಾಣವಾದಂತಾಗಿದೆ. ಬ್ರ್ಯಾಂಡ್ ಬೆಂಗಳೂರು ಹೋಗಿ ಇದೀಗ ಬಾಂಬ್ ಬೆಂಗಳೂರು ಎಂಬಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ, ಭಯೋತ್ಪಾದಕರ ಪಾಲಿಗೆ ರಾಜ್ಯ ಪ್ರಯೋಗ ಶಾಲೆಯಾಗಿದೆ. ರಾಮೇಶ್ವರಂ ಹೊಟೇಲ್‌ನಲ್ಲಿ ಶುಕ್ರವಾರದ ದಿನವೇ ಉದ್ದೇಶಪೂರ್ವಕವಾಗಿ ಬ್ಲಾಸ್ಟ್ ಮಾಡಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣವಾದ ಕಾರಣ ಹೀಗೆ ಮಾಡಿದ್ದಾರೆ ಎಂದರು. ಸಿದ್ದರಾಮಯ್ಯ ಅವರಿಗೆ ಭಯೋತ್ಪಾದಕಾ ಚಟುವಟಿಕೆಗಳನ್ನು ನಿಯಂತ್ರಿಸಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ನಿಜ. ಆ ಕುರಿತ ವಿಡಿಯೋವನ್ನು ಎಫ್ಎಸ್‌ಎಲ್ ಪರೀಕ್ಷೆಗೆ ಒಳಪಡಿಸುವುದು ಬೇಡ. ಟೆಸ್ಟ್ ಅನವಶ್ಯಕ ಎಂದಿದ್ದೆ.
ಇದೀಗ ಘೋಷಣೆ ಕೂಗಿದ್ದು ನಿಜ ಎಂಬುದು ಎಫ್‌ಎಸ್ಎಲ್ ವರದಿಯಲ್ಲೂ ಸಾಬೀತಾಗಿದೆ ಎಂದು ಅವರು ಹೇಳಿದರು.