ಸ್ವಂತ ಮನೆ ಇದ್ದವರಿಗೆ ಬಿಪಿಎಲ್ ರದ್ದು: ಕೈ ವಿರುದ್ಧ ಸೋಮಣ್ಣ ಗರಂ

Published : Sep 28, 2025, 10:34 AM IST
Ration Card

ಸಾರಾಂಶ

ಸ್ವಂತ ಮನೆ ಇದ್ದವರಿಗೆ ಬಿಪಿಎಲ್ ಕಾರ್ಡ್‌ ಬದಲು ಎಪಿಎಲ್ ಕಾರ್ಡ್ ನೀಡುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

  ಮೈಸೂರು : ಸ್ವಂತ ಮನೆ ಇದ್ದವರಿಗೆ ಬಿಪಿಎಲ್ ಕಾರ್ಡ್‌ ಬದಲು ಎಪಿಎಲ್ ಕಾರ್ಡ್ ನೀಡುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೂ ನೀವೆಲ್ಲಾ ಕತ್ತೆ ಕಾಯುತ್ತಿದ್ರಾ? ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷ ಪಿಡಿಎಸ್ ಮುಂದುವರಿಸುತ್ತೇನೆ ಅಂದಿದ್ದಾರೆ. ಬಡವರಿಗಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನೆ ಇರುವವರಿಗೆ ಅದು, ಇಲ್ಲದವರಿಗೆ ಇದು ಅಂತ ಯಾವುದನ್ನೂ ಹೇಳಿಲ್ಲ. ನಮ್ಮ‌ ನಿಬಂಧನೆ ಈಗಾಗಲೇ ಕೊಟ್ಟಿದ್ದೇವೆ. ಈ ಕಾಂಗ್ರೆಸ್‌ನವರು ಚಂದ್ರಲೋಕ ಇಂದ್ರಲೋಕ ತರುತ್ತೀವಿ ಅಂದಿದ್ದರು. ಯಾವುದೂ ಆಗಿಲ್ಲ. ಅದಕ್ಕಾಗಿ ಕಾರ್ಡ್‌ ರದ್ದು ಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ ಸಚಿವ ಮುನಿಯಪ್ಪಗೆ ಏನೂ ಗೊತ್ತಿಲ್ಲ. ಏನು ಇಲ್ಲದೆ ಬರೀ ಬೆತ್ತಲೆ ಆಗಿದ್ದೀರಾ? ಕೇಂದ್ರದ ಮೇಲೆ ಅದನ್ನು ಹಾಕಬೇಡಿ. ನಿಮ್ಮ ಪಾಪದ ಕೃತ್ಯಕ್ಕೆ ನೀವೇ ಹೊಣೆ, ಕೇಂದ್ರ ಸರ್ಕಾರವಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

PREV
Read more Articles on

Recommended Stories

ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ : ಗೀತಾ ಶಿವರಾಜ್‌ ಕುಮಾರ್‌ ಘೋಷಣೆ
ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದೇ ವಿಶ್ವಕರ್ಮ ಸಮುದಾಯ : ಬಿ.ವೈ. ವಿಜಯೇಂದ್ರ