ರಾಜ್ಯದಲ್ಲಿ ಮತ ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ಅಭಿಯಾನ-ಈಗ ಎಸ್‌ಎಸ್‌ಆರ್‌

Published : Nov 17, 2026, 06:51 AM IST
election commission

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗವು (ಇಸಿಐ) ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್ಆರ್‌) ನಡೆಸಲು ಅಧಿಕೃತ ವೇಳಾ ಪಟ್ಟಿ ಪ್ರಕಟಿಸಿದೆ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗವು (ಇಸಿಐ) ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್ಆರ್‌) ನಡೆಸಲು ಅಧಿಕೃತ ವೇಳಾ ಪಟ್ಟಿ ಪ್ರಕಟಿಸಿದೆ. ಬರುವ 2027ರ ಜ.1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಈ ಪರಿಷ್ಕರಣೆ ನಡೆಯಲಿದೆ.

ಈ ವೇಳಾಪಟ್ಟಿ ಪ್ರಕಾರ 2026ರ ನ.23ರೊಳಗೆ ಮತಗಟ್ಟೆಗಳ ಮರು ಹೊಂದಾಣಿಕೆ, ಡಿ.1ರಂದು ಸಂಯೋಜಿತ ಕರಡು ಮತದಾರರ ಪಟ್ಟಿಗಳ ಪ್ರಕಟಣೆ, ಡಿ.1ರಿಂದ ಡಿ.31ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ, ಜ.14ರೊಳಗೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಜ.20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಇತ್ತೀಚೆಗೆ ಮುಗಿದ ಎಸ್ಐಆರ್‌ ವೇಳೆ ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋದ ಅರ್ಹ ಮತದಾರರನ್ನು ಈ ಎಸ್‌ಎಸ್ಆರ್‌ ಪ್ರಕ್ರಿಯೆಯಲ್ಲಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. ಈ ಎಸ್‌ಎಸ್ಆರ್‌ನಲ್ಲಿ ಡಿ.1ರಿಂದ 31 ರ ನಡುವೆ ನಾಗರಿಕರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರ್ಮ್‌ 6, ಹೆಸರು ತೆಗೆದು ಹಾಕಲು ಫಾರ್ಮ್‌ 7, ವಿವರಗಳನ್ನು ತಿದ್ದುಪಡಿ ಮಾಡಲು ಫಾರ್ಮ್‌ 8 ಅರ್ಜಿ ಸಲ್ಲಿಸಬಹುದಾಗಿದೆ.

ಅಂತೆಯೆ 2027 ಜ.1ಕ್ಕೆ 18 ವರ್ಷ ತುಂಬುವವರು ಮಾತ್ರವಲ್ಲದೇ, ಏ.1, ಜು.1 ಮತ್ತು ಅ.1ಕ್ಕೆ 18 ವರ್ಷ ತುಂಬುವ ಯುವಜನರು ಮುಂಗಡವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಯಾಯ ತ್ರೈಮಾಸಿಕದಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ ಪೂರಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ.

ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಹೀಗಾಗಿ ಸಾರ್ವಜನಿಕರು ಈ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು https://www.ceo.karnataka.gov.in ವೆಬ್‌ಸೈಟ್‌ನಲ್ಲಿ ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವಾದರೆ, ಫಾರ್ಮ್‌ 6 ಭರ್ತಿ ಮಾಡಿ ನಿಗದಿತ ದಾಖಲೆ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು.

- SIR ವೇಳೆ ಮತ ಹಕ್ಕು ಕಳೆದೊಂಡವರು ಹೆಸರು ಸೇರಿಸಲು ಈಗ ಅವಕಾಶ

- ಮತಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡ್ಕೊಳ್ಳಿ, ಇಲ್ಲದಿದ್ದರೆ ಈಗ ಸೇರಿಸಿ

- ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿದ್ದ ಕೇಂದ್ರ ಚುನಾವಣಾ ಆಯೋಗ

- ಪ್ರಕ್ರಿಯೆ ಮುಗಿಸಿ ಅಂತಿಮಪಟ್ಟಿ ಪ್ರಕಟಗೊಂಡಾಗ ಸುಮಾರು 1 ಕೋಟಿ ಮತದಾರರು ಹೆಸರುಗಳು ಡಿಲೀಟ್‌

- ಅರ್ಹ ಮತದಾರರು ತಮ್ಮ ಹೆಸರನ್ನು ಮತಪಟ್ಟಿಗೆ ಸೇರಿಸಲು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್ಆರ್‌)

- ಫಾರ್ಮ್‌ 6 ತುಂಬಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದರೆ ಹೊಸದಾಗಿ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ

- ಮತ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು www.ceo.karnataka.gov.in ನೋಡಿ ತಿಳಿದುಕೊಳ್ಳಬಹುದು

18 ತುಂಬಿದವರ ಹೆಸರು ಸೇರ್ಪಡೆಗೂ ಅವಕಾಶ

2027 ಜ.1ಕ್ಕೆ 18 ವರ್ಷ ತುಂಬುವವರು ಮಾತ್ರವಲ್ಲದೇ, ಏ.1, ಜು.1 ಮತ್ತು ಅ.1ಕ್ಕೆ 18 ವರ್ಷ ತುಂಬುವ ಯುವಜನರು ಮುಂಗಡವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಯಾಯ ತ್ರೈಮಾಸಿಕದಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ ಪೂರಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಇಂದಿನಿಂದ ಕಾಮನ್‌ವೆಲ್ತ್‌ ಸಂಸದೆಯರ ಸಭೆ ಆರಂಭ-ಲೋಕಸಭೆ ಸ್ಪೀಕರ್‌ ಬಿರ್ಲಾ ಚಾಲನೆ
ನಿಗಮ ಮಂಡಳಿ ನಿರ್ದೇಶಕ, ಸದಸ್ಯರ ಕೈಬಿಡಲು ಸೂಚನೆ- 2 ವರ್ಷ ಅಧಿಕಾರ ಪೂರೈಸಿದವರ ತೆರವು