ಇಂದು ಬಿಜೆಪಿ ನಾಯಕರಿಂದ ಗಣತಿ ಪರಾಮರ್ಶೆ - ಸಾಧಕ-ಬಾಧಕ ಕುರಿತು ಚರ್ಚೆ: ಬಳಿಕ ಮುಂದಿನ ನಡೆ ತೀರ್ಮಾನ

Published : Apr 14, 2025, 07:28 AM IST
bjp flag

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ವಿವಾದಾತ್ಮಕ ಜಾತಿ ಜನಗಣತಿ ವರದಿ ಸಂಬಂಧಿಸಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಸೋಮವಾರ ಸಭೆ ನಡೆಸಲಿದ್ದಾರೆ.

 ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ವಿವಾದಾತ್ಮಕ ಜಾತಿ ಜನಗಣತಿ ವರದಿ ಸಂಬಂಧಿಸಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಸೋಮವಾರ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಕೇವಲ ವರದಿಯಲ್ಲಿ ಬಹಿರಂಗಗೊಂಡ ಅಂಶಗಳ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಜಾತಿ ಗಣತಿಯಲ್ಲಿ ಮುಸ್ಲಿಮರ ಸಂಖ್ಯೆಯನ್ನು 75 ಲಕ್ಷ, ಲಿಂಗಾಯತರ ಸಂಖ್ಯೆಯನ್ನು 66 ಲಕ್ಷ, ವೀರಶೈವರ ಸಂಖ್ಯೆಯನ್ನು 10 ಲಕ್ಷ, ಒಕ್ಕಲಿಗರ ಸಂಖ್ಯೆಯನ್ನು 61 ಲಕ್ಷ, ಪರಿಶಿಷ್ಟ ಜಾತಿಯನ್ನು 1 ಕೋಟಿ, ಪರಿಶಿಷ್ಟ ಪಂಗಡವನ್ನು 42 ಲಕ್ಷ, ಕುರುಬರನ್ನು 44 ಲಕ್ಷ ಎಂದೆಲ್ಲ ಮೂದಿಸಲಾಗಿದೆ. ಆದರೆ ಮುಸ್ಲಿಂ ಒಂದು ಧರ್ಮ ಆಗಿದ್ದರೂ ಅದನ್ನು ಹಿಂದೂ ಧರ್ಮದ ರೀತಿ ಬೇರೆ ಜಾತಿಯನ್ನಾಗಿ ಏಕೆ ವಿಭಜಿಸಿಲ್ಲ ಎಂಬುದು ಬಿಜೆಪಿ ಪ್ರಶ್ನೆಯಾಗಿದೆ. ಅಲ್ಲದೆ, ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಇದನ್ನು ಭಾನುವಾರವೇ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ