ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದಿಂದ ಮಾತ್ರ ಎಲ್ಲಾ ವರ್ಗಗಳ ಜನರ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಧರ್ಮಪತ್ನಿ ಡಾ.ಪ್ರೀತಿ ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ನಗರದ ವಾರ್ಡ್ ಗಳಲ್ಲಿ ತಮ್ಮ ಪತಿ ಡಾ.ಕೆ ಸುಧಾಕರ್ ಪರವಾಗಿ ಮನೆ ಮನೆ ಪ್ರಚಾರ ಕೈಗೊಂಡು ಮತಯಾಚನೆ ನಡೆಸಿ ಮತದಾರರೊಂದಿಗೆ ಮಾತನಾಡಿ, ಕೇದ್ರದ ಯೋಜನೆಗಳ ಮಾಹಿತಿ ನೀಡಿದರು.ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳಿಗೆ ಮಾರ್ಗದರ್ಶನ ಮಾಡಿ ಜನರ ಜೀವ ಉಳಿಸಿದ್ದರು. ರಾಜ್ಯದಲ್ಲಿ ಆರೋಗ್ಯ ಮಂತ್ರಿಗಳಾಗಿದ್ದ ಡಾ. ಕೆ. ಸುಧಾಕರ್ ಪತಿಸ್ಥಿಯನ್ನು ಚನ್ನಾಗಿ ನಿಭಾಯಿಸಿ ಬಡವರ ಪ್ರಾಣ ಉಳಿಸಿದರು. ದೇಶ ರಕ್ಷಣೆಯನ್ನು ಮಾಡಲು ನರೇಂದ್ರ ಮೋದಿಯವರಿಗೆ ಮಾತ್ರ ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಬಡವರ ಪರವಾಗಿ ಚಿಂತಿಸುತ್ತಾರೆ. ಮಹಿಳೆಯರ ಆರೋಗ್ಯ ರಕ್ಷಣೆಗಾಗಿ 10 ಕೋಟಿಗೂ ಅಧಿಕ ಅಡುಗೆ ಅನಿಲ ಸಂಪರ್ಕಗಳನ್ನು ಉಜ್ವಲಾ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ನೀಡಿದ್ದಾರೆ. ಜಲಜೀವನ್ ಮಿಷನ್‌ನಡಿ ಮನೆಮನೆಗೆ ಕೊಳಾಯಿ ಸಂಪರ್ಕ ನೀಡಿ ನೀರು ನೀಡಿದ್ದಾರೆ. ಕಿಸಾನ್ ಸಮ್ಮಾನ್‌ನಡಿ ಕೇಂದ್ರ ಸರ್ಕಾರ ರೈತರಿಗೆ ಹಣ ನೀಡಿದ್ದಾರೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ನೀಡುತ್ತಿದ್ದ ರಾಜ್ಯದ ಪಾಲನ್ನು ಈಗಿನ ರಾಜ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಟೀಕಿಸಿದರು. ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಯ ಹರಿಕಾರ ಹಾಗೂ ಬಯಲು ಸೀಮೆಯ ಬರಡು ಜಿಲ್ಲೆಯ ಕೆರಗಳಿಗೆ ನೀರು ಹರಿಸಿದ ಆಧುನಿಕ ಭಗೀರಥರಾಗಿದ್ದು, ಜಿಲ್ಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ನುಡಿದಂತೆ ನಡೆದವರಾಗಿದ್ದಾರೆ ಎಂದರು.ಉತ್ತಮ ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಡಾ. ಕೆ. ಸುಧಾಕರ್ ರವರಿಗೆ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ತಿಳಿಸಿದರು.
ಈ ವೇಳೆ ಮಾಜಿ ನಗರಸಭಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯೆ ಪದ್ಮಮ್ಮ ,ಬಿಜೆಪಿ ಮುಖಂಡೆ ಪ್ರೇಮಲೀಲಾ, ಸ್ವಾತಿ,ಅಶ್ವಿನಿ, ಮತ್ತಿತರರು ಇದ್ದರು