1 ರಾಷ್ಟ್ರ1 ಚುನಾವಣೆ ಅಂದ್ರೆ ಕಾಂಗ್ರೆಸ್‌ಗೆ ಭಯ: ಜೋಶಿ

Published : Jun 15, 2025, 11:33 AM IST
Prahlad Joshi

ಸಾರಾಂಶ

ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ನರೇಂದ್ರ ಮೋದಿ, ಬಿಜೆಪಿ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಕಾಂಗ್ರೆಸ್‌ನವರಿಗೆ ಇದೆ.

 ಕಲಬುರಗಿ : ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ನರೇಂದ್ರ ಮೋದಿ, ಬಿಜೆಪಿ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಕಾಂಗ್ರೆಸ್‌ನವರಿಗೆ ಇದೆ. ಅದಕ್ಕಾಗಿಯೇ ಅವರು ಈ ನೀತಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರ ಸಂಕಿರಣದಲ್ಲಿ ಮಾತನಾಡಿ, ಬ್ರಿಟೀಷರು ಬರುವ ಮುನ್ನವೇ ಭಾರತ ಒಂದು ದೇಶವಾಗಿತ್ತು. ಹಾಗಾಗಿಯೇ ಕಾಶಿಗೆ ಹೋದವರು ರಾಮೇಶ್ವರಕ್ಕೆ ಹೋಗಬೇಕು ಎನ್ನುವ ಅಲಿಖಿತ ನಿಯಮವಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಎಂದ ತಕ್ಷಣ ಸದ್ಯ ಭಾರತದಲ್ಲಿ ಕೆಲವರಿಗೆ ತಲೆ ಕೆಡುತ್ತಿದೆ. ವಿಪಕ್ಷಗಳು ವಿರೋಧ ಮಾಡಿದ್ದ ಒನ್ ನೇಷನ್ ಒನ್ ರೇಷನ್ ಕಾರ್ಡ್‌, ಒನ್ ನೇಷನ್ ಒನ್ ರ್‍ಯಾಂಕ್‌, ಒನ್ ನೇಷನ್ ಒನ್ ಗ್ರಿಡ್ ಜಾರಿಯಾಗಿವೆ. ಮುಂದೆ ಒನ್ ನೇಷನ್ ಒನ್ ಲೀಡರ್ ಮಾಡಿ ಬಿಡ್ತಾರೆ ಅಂತ ಕಾಂಗ್ರೆಸ್‌ಗೆ ಭಯವಿದೆ. ಇದು ನಿಮಗೂ ಅನ್ವಯವಾಗಲ್ವಾ ಅಂತ ಕೇಳಿದರೆ ನಮ್ಮಲ್ಲಿ ಲೀಡರ್ ಇಲ್ಲ ಅಂತಿದ್ದಾರೆ. ಅವರಿಗೆ ನಾಯಕರನ್ನೂ ನಾವೇ ಕೊಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಯಾರೂ ಒನ್ ನೇಷನ್ ಒನ್ ಎಲೆಕ್ಷನ್‌ಗೆ ಗಾಬರಿಯಾಗುವ ಅಗತ್ಯವಿಲ್ಲ. ಭಾರತ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದು, 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಒನ್ ಎಲೆಕ್ಷನ್ ನೀತಿಯಿಂದ ದೇಶದ ಆರ್ಥಿಕತೆಗೆ ನಾಲ್ಕುವರೆ ಲಕ್ಷ ಕೋಟಿ ರು. ಉಳಿತಾಯ ಆಗಲಿದ್ದು, ದೇಶದ ಜಿಡಿಪಿಯಲ್ಲಿ 1.5% ಹೆಚ್ಚಳ ಆಗುತ್ತದೆ ಎಂದರು.

PREV
Read more Articles on

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ