* ಮೋದಿ ಭಜನೆ ಬಗ್ಗೆ ಪ್ರಿಯಾಂಕ್‌ ಖರ್ಗೆ-ಬಿಜೆಪಿ ಭಾರಿ ಜಟಾಪಟಿ

KannadaprabhaNewsNetwork |  
Published : Sep 27, 2026, 03:00 AM IST
ಮೋದಿ | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಸಿದ್ಧಾಂತವಾದಿ ದೀನ್‌ ದಯಾಳ್‌ ಉಪಾಧ್ಯಾಯ ಅವರ 110ನೇ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜನೆಯಾಗಿದ್ದ ಭಜನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಭಜನೆ ಮಾಡಿದ್ದಕ್ಕೆ ಆಕ್ಷೇಪಿಸಿರುವ ಕಾಂಗ್ರೆಸ್‌ ನಾಯಕ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್‌ ಖರ್ಗೆ, ಭಜನೆಗೆ ಸಮಯ ನೀಡುವ ಮೋದಿ, ಚುನಾವಣಾ ಆಯೋಗದ ಸುತ್ತ ಎದ್ದಿರುವ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

- 13 ವರ್ಷದಿಂದ ಪ್ರಶ್ನೆಗಳಿಂದ ಪಿಎಂ ಎಸ್ಕೇಪ್‌ । ಸಂಭ್ರಮಗಳಿಗೆ ಹಾಜರ್‌, ಹೊಣೆಗಾರಿಕೆಗೆ ಚಕ್ಕರ್‌

- ಭಜನೆಗೆ ಸಮಯವಿದೆ, ಚು.ಆಯೋಗದ ಬಗ್ಗೆ ಉತ್ತರಿಸಲು ಸಮಯ ಇಲ್ಲ: ಪ್ರಿಯಾಂಕ್‌ ಕುಟುಕು

- ಭಾರತೀಯ ಪರಂಪರೆಗೆ ಕಾಂಗ್ರೆಸ್‌ ಅವಮಾನ: ಬಿಜೆಪಿ ಕಿಡಿ

ನವದೆಹಲಿ: ಆರ್‌ಎಸ್‌ಎಸ್‌ ಸಿದ್ಧಾಂತವಾದಿ ದೀನ್‌ ದಯಾಳ್‌ ಉಪಾಧ್ಯಾಯ ಅವರ 110ನೇ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜನೆಯಾಗಿದ್ದ ಭಜನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಭಜನೆ ಮಾಡಿದ್ದಕ್ಕೆ ಆಕ್ಷೇಪಿಸಿರುವ ಕಾಂಗ್ರೆಸ್‌ ನಾಯಕ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್‌ ಖರ್ಗೆ, ಭಜನೆಗೆ ಸಮಯ ನೀಡುವ ಮೋದಿ, ಚುನಾವಣಾ ಆಯೋಗದ ಸುತ್ತ ಎದ್ದಿರುವ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ‘ಕಾಂಗ್ರೆಸ್‌ ಭಾರತೀಯ ಪರಂಪರೆಯನ್ನು ಅವಮಾನಿಸುತ್ತಿದೆ’ ಎಂದು ಕಿಡಿ ಕಾರಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಎದುರಿಗಿರುವ ಉದ್ಯಾನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು, ಯುವಕರ ಜತೆ ಕುಳಿತು ಭಜನೆ ಮಾಡಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ಮೋದಿಗೆ ಇಂಥ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಲು ಸಮಯವಿದೆ. ಆದರೆ ಚುನಾವಣಾ ಆಯೋಗದ ಮೂಲಕ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕುರಿತಾದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ. ಹೊಣೆಗಾರಿಕೆಯ ವಿಷಯ ಬಂದಾಗ ಮೌನಕ್ಕೆ ಜಾರಿಬಿಡುತ್ತಾರೆ. ಕಳೆದ 13 ವರ್ಷದಿಂದ ಅವರು ಹೀಗೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ತಿರುಗೇಟು ನೀಡಿ, ‘ಭಜನೆ ಮತ್ತು ಭಕ್ತಿಯ ಮೂಲಕ ವ್ಯಕ್ತವಾಗುವ ಭಾರತದ ಸಾಂಸ್ಕೃತಿಕ, ನಾಗರಿಕ ಪರಂಪರೆಯನ್ನು ಕಾಂಗ್ರೆಸ್ ಮತ್ತೊಮ್ಮೆ ಅಪಹಾಸ್ಯ ಮಾಡಿದೆ. ಸ್ವಹಿತಾಸಕ್ತಿಯಲ್ಲಿ ತೊಡಗಿರುವ ಕಾಂಗ್ರೆಸ್‌ನ ಪ್ರಥಮ ಕುಟುಂಬದ (ಗಾಂಧಿ ಪರಿವಾರ) ಗುಣಗಾನ ಮಾಡುವುದರಲ್ಲಿ ಮಾತ್ರ ಪರಿಣಿತರಾಗಿರುವ ಜೂನಿಯರ್‌ ಖರ್ಗೆಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಬೇರೆ ರಾಜ್ಯ ರೀತಿ ಕರ್ನಾಟಕಕ್ಕೂ ಕೇಂದ್ರ ಮುಂಗಡ ಬರ ಪರಿಹಾರ ಕೊಡಲಿ: ಸಿಎಂ
ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ