;Resize=(412,232))
ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜೂ. 18ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತಾನು ಗೆಲ್ಲುವ ಸಾಧ್ಯತೆ ಹೊಂದಿರುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿದ್ದು, ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ. ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಅವರ ಹೆಸರು ಘೋಷಿಸಿದೆ.
ಈ ಪೈಕಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಬಿ.ಕೆ. ಹರಿಪ್ರಸಾದ್ ಹಾಗೂ ತಿಪ್ಪಣ್ಣಪ್ಪ ಅವರ ಮರು ಆಯ್ಕೆಗೆ ಅವಕಾಶ ನೀಡಿದ್ದರೆ, ಪಿ.ವಿ. ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಅವರಿಗೆ ಹೊಸದಾಗಿ ಅವಕಾಶ ನೀಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವ ಬೆನ್ನಲ್ಲೇ, ಹಿರಿಯ ನಾಯಕ ಹಾಗೂ ಈಡಿಗ ಸಮುದಾಯದ ಬಿ.ಕೆ. ಹರಿಪ್ರಸಾದ್ ಮತ್ತು ಕೋಲಿ ಸಮುದಾಯದ (ಗಂಗಾಮತಸ್ಥ) ತಿಪ್ಪಣ್ಣಪ್ಪ ಕಮಕನೂರು, ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯದ ಶಿವಣ್ಣ ಮಳವಳ್ಳಿ ಹಾಗೂ ಮೂಲತಃ ಮಂಗಳೂರಿನವರಾದ ಬಿಲ್ಲವ ಸಮುದಾಯದ ಪಿ.ವಿ.ಮೋಹನ್ ಅವರಿಗೆ ಅವಕಾಶ ನೀಡುವ ಮೂಲಕ ಪರಿಷತ್ ಸದಸ್ಯರ ಆಯ್ಕೆಯಲ್ಲಿ ಸಂಪೂರ್ಣವಾಗಿ ಒಬಿಸಿ ಸಮುದಾಯಗಳಿಗೆ ಮನ್ನಣೆ ನೀಡಿದೆ.
ಬಿ.ಕೆ. ಹರಿಪ್ರಸಾದ್- ಈಡಿಗ
ತಿಪ್ಪಣ್ಣಪ್ಪ ಕಮಕನೂರು- ಕೋಲಿ
ಶಿವಣ್ಣ ಮಳವಳ್ಳಿ- ಕುರುಬ
ಪಿ.ವಿ. ಮೋಹನ್- ಬಿಲ್ಲವ