ಕಾಂಗ್ರೆಸ್‌ಗೆ ಮತದಾರರು ತಕ್ಕಪಾಠ ಕಲಿಸುತ್ತಾರೆ : ಎಸ್.ಮುನಿಸ್ವಾಮಿ

KannadaprabhaNewsNetwork |  
Published : Apr 03, 2024, 01:38 AM ISTUpdated : Apr 03, 2024, 04:55 AM IST
೨ಕೆಎಲ್‌ಆರ್-೭ಮಾಲೂರಿನ ಹೊರವಲಯದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಜೆಡಿಎಸ್-ಬಿಜೆಪಿ ಸಮನ್ವಯ ಸಭೆ ನಡೆಯಿತು. ಸಂಸದ ಎಸ್.ಮುನಿಸ್ವಾಮಿ, ಲೋಕಸಭಾ ಅಭ್ಯರ್ಥಿ ಮಲ್ಲೇಶ್ ಬಾಬು ಇದ್ದರು. | Kannada Prabha

ಸಾರಾಂಶ

ದೇಶ ಇದೀಗ ಸದೃಢವಾಗಿದೆ ಇನ್ನಷ್ಟು ಬಲಿಷ್ಟವಾಗಬೇಕಾದರೆ ಮೋದಿ ಅವರು ಕೇಳಿದಂತೆ ೪೦೦ ಸ್ಥಾನಗಳು ಕೊಡೋಣ. ಆ ೪೦೦ ಸ್ಥಾನಗಳ ಪೈಕಿ ಮೊದಲ ಗೆಲುವಿನ ಸ್ಥಾನ ಕೋಲಾರ ಕ್ಷೇತ್ರದಿಂದಾಗಲಿ

 ಮಾಲೂರು:  ನಮ್ಮ ನಾಡಿನಲ್ಲಿ ನಮ್ಮ ಆರಾಧ್ಯ ದೇವರಾದ ಶ್ರೀರಾಮನ ಭಾವುಟ, ಫೋಟೋ ಕಟ್ಟಲು ಪೂಜೆ ಮಾಡಲು ಅವಕಾಶ ಕೊಡದ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಮಾಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.ಪಟ್ಟಣದ ಹೊರವಲಯದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಜೆಡಿಎಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಲೂರು ತಾಲೂಕಿನಲ್ಲಿ ತಮಗೆ 32 ಸಾವಿರ ಮತಗಳ ಲೀಡ್ ಕೊಡಿಸಿದ್ದೀರಿ. ಈ ಬಾರಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬುಗೆ 50  ಸಾವಿರ ಮತಗಳು ಕೊಡಿಸಬೇಕು ಎಂದು ಮನವಿ ಮಾಡಿದರು.

ನಿಮ್ಮ ಮತ ಮೋದಿಗೆ

ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಂಪೂರ್ಣವಾಗಿ ಒಂದಾಗಿದ್ದಾರೆ, ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎಲ್ಲಾ ನಾಯಕರು ಒಮ್ಮತದಿಂದ ಒಪ್ಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾನು ಆಗಿರಬಹುದು, ಆದರೆ ನಿಮ್ಮ ಮತ ಮೋದಿಯವರಿಗೆ ನೀಡಿದಂತೆ ಎಂದರು.

ದೇಶ ಇದೀಗ ಸದೃಢವಾಗಿದೆ ಇನ್ನಷ್ಟು ಬಲಿಷ್ಟವಾಗಬೇಕಾದರೆ ಮೋದಿ ಅವರು ಕೇಳಿದಂತೆ ೪೦೦ ಸ್ಥಾನಗಳು ಕೊಡೋಣ. ಆ ೪೦೦ ಸ್ಥಾನಗಳ ಪೈಕಿ ಮೊದಲ ಗೆಲುವಿನ ಸ್ಥಾನ ಕೋಲಾರ ಕ್ಷೇತ್ರದಿಂದಾಗಲಿ, ಎಲ್ಲರೂ ನಾನು ಹೆಚ್ಚಾಗಿ ಮಾತನಾಡಲ್ಲ ಅಂತಾರೆ. ಆದರೆ ಕೆಲಸ ಮಾಡುತ್ತೇನೆ. ಎಲ್ಲರೂ ನಿಮ್ಮ ಮನೆ ಮಗನಾಗಿ ನನ್ನನ್ನು ಹರಸಿ ಎಂದು ಮನವಿ ಮಾಡಿದರು.

ಮತದಾರರಲ್ಲಿ ಎರಡು ವರ್ಗ

ಮಾಜಿ ಶಾಸಕ ಮಂಜುನಾಥಗೌಡ ಮಾತನಾಡಿ, ದೇಶದಲ್ಲಿ ಮೋದಿ ಬಂದ ಮೇಲೆ ಎರಡೇ ವಿಭಾಗ ಉಳಿದುಕೊಂಡಿದೆ ಮೋದಿ ಪರ ಒಂದು ವಿಭಾಗ, ಮೋದಿ ವಿರುದ್ದ ಒಂದು ವರ್ಗದ ಮತದಾರರು ಮಾತ್ರ ಇರೋದು ಈ ಚುನಾವಣೆಯಲ್ಲಿ ಯಾವುದೇ ಜಾತಿ ಧರ್ಮ ಕೆಲಸ ಮಾಡಲ್ಲ, ಈ ಭಾರಿ ಮಾಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ೫೦ ಸಾವಿರಕ್ಕೂ ಹೆಚ್ಚಿನ ಮತಗಳು ಮಾಲೂರು ತಾಲೂಕಿನಿಂದ ಜೆಡಿಎಸ್ ಅಭ್ಯರ್ಥಿಗೆ ಚಲಾವಣೆಯಾಗುತ್ತದೆ ಎಂದರು.ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮೀರಾಮೇಗೌಡ, ಜೆಡಿಎಸ್ ಮುಖಂಡ ರಾಮೇಗೌಡ ಇದ್ದರು.

PREV