ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಶಾಸಕಿ ರೂಪಕಲಾಶಶಿಧರ್ ವಹಿಸಿಕೊಂಡು ನಗರಸಭೆ ಸದಸ್ಯರ ಹಕ್ಕನ್ನು ಕಸಿದುಕೊಂಡಿದ್ದಾರೆಂದು ಸಿಪಿಎಂ ಮುಖಂಡ ಜ್ಯೋತಿಬಸು ಶಾಸಕರ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ
ಕೆಜಿಎಫ್ : ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಶಾಸಕಿ ರೂಪಕಲಾಶಶಿಧರ್ ವಹಿಸಿಕೊಂಡು ನಗರಸಭೆ ಸದಸ್ಯರ ಹಕ್ಕನ್ನು ಕಸಿದುಕೊಂಡಿದ್ದಾರೆಂದು ಸಿಪಿಎಂ ಮುಖಂಡ ಜ್ಯೋತಿಬಸು ಶಾಸಕರ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸಿಪಿಐ ಪಕ್ಷ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿ ಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಅಧಿಕಾರ ದುರುಪಯೋಗ
೩೫ ವಾರ್ಡ್‌ಗಳ ಸದಸ್ಯರು ಜನರಿಂದ ಅಯ್ಕೆಯಾಗಿದ್ದಾರೆ, 35ಸದಸ್ಯರಿಗೆ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ, ವಾರ್ಡ್‌ಗಳ ಸಮಸ್ಯೆಗಳನ್ನು ನಗರಸಭೆ ಅಧ್ಯಕ್ಷರ ಸಮ್ಮಖದಲ್ಲಿ ಚರ್ಚೆ ಮಾಡಲು ಸಭೆ ಕರೆದು, ನಗರಸಭೆ ಅಧ್ಯಕ್ಷರ ಅಧಿಕಾರವನ್ನು ಶಾಸಕರು ಪಡೆದುಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ, ಹಲವು ಮಹಿಳಾ ಸದಸ್ಯರು ಶಾಸಕರನ್ನು ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ.
ಇದರಿಂದ ನಗರಸಭೆ ಸದಸ್ಯರ ಅಧಿಕಾರವನ್ನು ಚಲಾಯಿಸುವುದು ಸರಿಯಲ್ಲ ಎಂದರು. ನಗರಸಭೆ ಸಭೆಯಲ್ಲಿ ಶಾಸಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ಮಾತ್ರ ನೀಡಬಬಹುದು, ಆದರೆ ಶಾಸಕರು ಸಭೆಯ ಅಧ್ಯಕ್ಷತೆ ವಹಿಸಿ ಇಂದಿರಾಗಾಂಧಿ ಅವರ ಕೈಯಲ್ಲಿ ಇದ್ದ ಮೈಕ್ ಪಡೆದುಕೊಂಡು ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೇ ಸದಸ್ಯರನ್ನು ಹೆದರಿಸುವ ರೀತಿ ಶಾಸಕರ ನೋಟದಲ್ಲಿ ಕಂಡು ಬಂದಿದೆ, ಚುನಾಯಿತ ಸದಸ್ಯರ ಅಧಿಕಾರವನ್ನು ಯಾರು ಮೊಟಕುಗೊಳಿಸಲು ಸಂವಿಧಾನದಲ್ಲಿ ಜಾಗವಿಲ್ಲ, ಶಾಸಕರಾಗಿ ಅಯ್ಕೆಯಾದವರಿಗೆ ತಾಲೂಕಿನ ಸಮಸ್ಯೆಗಳ ಕುರಿತು ಮಾತನಾಡಲು ವಿಧಾನಸಭೆಯಲ್ಲಿ ಮಾತನಾಡಲಿ ಬೇಡ ಅನ್ನುವವರು ಯಾರು ಎಂದು ಜ್ಯೋತಿಬಸು ಪ್ರಶ್ನಿಸಿದರು.
ಶಾಸಕರಿಂದ ಹಿಟ್ಲರ್ ಆಡಳಿತ ಸದಸ್ಯರ ಧ್ವನಿಯನ್ನು ಆಡಗಿಸುವ ನಿಟ್ಟಿನಲ್ಲಿ ಸದಸ್ಯರ ಪ್ರಶ್ನೆಗಳಿಗೆಲ್ಲಾ ಶಾಸಕರು ಉತ್ತರ ನೀಡುತ್ತಾ ಸದಸ್ಯರು ಹೆಚ್ಚು ಮಾತನಾಡದಂತೆ ತಡೆದಿದ್ದು ಹಿಟ್ಲರ್ ಆಡಳಿತದಂತೆ ಆಗಿದೆ, ಕಾಂಗ್ರೆಸ್ ನಗರಸಭೆ ಸದಸ್ಯರಾದ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ರಮೇಶ್ ಜೈನ್ ಹಲವು ಕಾಮಗಾರಿ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಆರೋಪಕ್ಕೆ ಉತ್ತರ ನೀಡದೆ ಶಾಸಕರು ಸಭೆಯಿಂದ ಹೊರನೆಡೆದದ್ದು ಏಕೆ ಎಂದು ಅವರು ಪ್ರಶ್ನಿಸಿದರು.ಬಿಇಎಂಎಲ್ ದಿನಗೂಲಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಬಿಇಎಂಎಲ್ ಆಡಳಿತ ಮಂಡಳಿ ವಿರುದ್ಧ ಬೆಳಗಾಂನಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಶಾಸಕರು ಧ್ವನಿ ಎತ್ತಬೇಕೆಂದು ಸಿಪಿಐ ಮುಖಂಡ ವಕೀಲ ಜ್ಯೋತಿ ಬಸು ಒತ್ತಾಯಿಸಿದರು. ಮುಷ್ಕರ ವಾಪಸ್: ಖಂಡನೆ
ಬಿಇಎಂಎಲ್ ಕಾಂಟ್ಯಾಕ್ಟ್ ಕಾರ್ಮಿಕರು ಬಿಇಎಂಎಲ್ ಕಾರ್ಖಾನೆಯಲ್ಲಿ ೨೦-೩೦ ವರ್ಷದಿಂದ ದುಡಿಯುತ್ತಿದ್ದು ಸೇವೆ ಕಾಯಂಗೋಳಿಸುವಂತೆ ಹಾಗೂ , ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ೨೬ ದಿನಗಳ ಕಾಲ ನಿರಂತರವಾಗಿ ಪೈವ್‌ಲೈಟ್ಸ್ ವೃತ್ತದಲ್ಲಿ ಹೋರಾಟ ನಡೆಸಿದರು, ಆದರೆ ಸಿಐಟಿಯು ಮುಖಂಡರು ಬಿಇಎಂಎಲ್ ಕಾಂಟ್ರ್ಯಾಕ್ಟ್ ಕಾರ್ಮಿಕರ ಹೋರಾಟ ಸಮಿತಿ ಪದಾಧಿಕಾರಿಗಳ ಒಪ್ಪಿಗೆ ಪಡೆಯದೆ ಹೋರಾಟವನ್ನು ಹಿಂಪಡೆದಿದ್ದಾರೆಂದು ಅವರು ಖಂಡಿಸಿದರು.