ಬ್ರಾಂಡ್‌ ಬೆಂಗ್ಳೂರಿನ 4 ಯೋಜನೆಗಳ ಉದ್ಘಾಟಿಸಿದ ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : May 02, 2026, 04:00 AM ISTUpdated : May 02, 2026, 04:36 AM IST
KR Market

ಸಾರಾಂಶ

ಡಬಲ್ ಡೆಕ್ಕರ್ ಮೇಲ್ಸೆತುವೆ, ಪಾರ್ಕಿಂಗ್ ಕಟ್ಟಡ, ಅಂಡರ್ ಪಾಸ್ ಎಲ್ಲವೂ ಬ್ರ್ಯಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿಯಾಗುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

 ಬೆಂಗಳೂರು : ಡಬಲ್ ಡೆಕ್ಕರ್ ಮೇಲ್ಸೆತುವೆ, ಪಾರ್ಕಿಂಗ್ ಕಟ್ಟಡ, ಅಂಡರ್ ಪಾಸ್ ಎಲ್ಲವೂ ಬ್ರ್ಯಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿಯಾಗುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಶುಕ್ರವಾರ ಎಂ.ಜಿ. ರಸ್ತೆಯಲ್ಲಿ ಮೆಟ್ರೊ ಮಾರ್ಗದ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ, ಕೆ.ಆರ್.ಮಾರುಕಟ್ಟೆಯಲ್ಲಿ ಆಧುನಿಕ ಪಾರ್ಕಿಂಗ್ ವ್ಯವಸ್ಥೆ, ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆ, ಸಿಲ್ಕ್‌ಬೋರ್ಡ್ ಜಂಕ್ಷನ್ ಫ್ಲೈಓವರ್ ಉದ್ಘಾಟನೆ, ಗಾಂಧಿ ಬಜಾರ್‌ನಲ್ಲಿ ವಾಣಿಜ್ಯ ಮಳಿಗೆ ಮತ್ತು ಪಾರ್ಕಿಂಗ್ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ (ಮೆಟ್ರೋ ಮಾರ್ಗ ಮತ್ತು ರಸ್ತೆ) ನಿರ್ಮಾಣಕ್ಕೆ ಯೋಜನೆ ಇದೆ. ಈ ಕುರಿತು ಹಿಂದೆಯೇ ಪ್ಲಾನ್ ಮಾಡಿದ್ದರೆ 336 ಕಿ.ಮೀ ಉದ್ದದ ಮೆಟ್ರೋ ಯೋಜನೆಯಲ್ಲಿ ಸುಮಾರು 200 ಕಿ.ಮೀ ಡಬಲ್ ಡೆಕ್ಕರ್ ಯೋಜನೆ ಮಾಡಬಹುದಿತ್ತು. ಆದರೂ ಈಗ ತಡವಾಗಿಲ್ಲ ಎಂದು ಹೇಳಿದರು‌.ಎಲಿವೇಟೆಡ್ ಕಾರಿಡಾರ್ ವಿಚಾರದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದಷ್ಟು ತೀರ್ಮಾನ ಮಾಡಲಾಗಿದೆ. 138 ಕಿ.ಮೀ. ಮೇಲ್ಸೆತುವೆ, ಅಂಡರ್ ಪಾಸ್ ನಿರ್ಮಾಣ ಯೋಜನೆಗಳನ್ನು ತೆಗೆದುಕೊಳ್ಳಲಾಗಿದೆ. ನಾಗ್ಪುರ, ಚೆನ್ನೈ ಸೇರಿದಂತೆ ಇತರೆ ಡಬಲ್ ಡೆಕ್ಕರ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಯೋಜನೆ ಬಗ್ಗೆ ತಿಳಿಸಿದ್ದರು ಎಂದು ಡಿ.ಕೆ.ಶಿವಕಮಾರ್ ತಿಳಿಸಿದರು .

ಜನರಿಗಾಗಿ ಕೋಟ್ಯಂತರ ರು.ಖರ್ಚು ಮಾಡಿ ಕಟ್ಟುವ ಕಟ್ಟಡವನ್ನು ಜನರು ಬಳಸಿಕೊಳ್ಳಬೇಕು. ವಾಹನ ಪಾರ್ಕಿಂಗ್ ವಿಚಾರದಲ್ಲಿ ಖಾಸಗಿಯವರಿಗೆ ಹೆಚ್ಚು ಉತ್ತೇಜನ ನೀಡಲು ಹೊಸ ನಿಯಮಗಳನ್ನು ಮಾಡುತ್ತಿದ್ದೇವೆ. ಸರ್ಕಾರದ ಪಾರ್ಕಿಂಗ್ ಜೊತೆಗೆ ಖಾಸಗಿ ಪಾರ್ಕಿಂಗ್ ಸಹ ಮಾಡಲಾಗುವುದು. 10/12 ಅಳತೆಯ ಜಾಗದಲ್ಲಿ 20 ವಾಹನಗಳನ್ನು ನಿಲ್ಲಿಸುವ ತಂತ್ರಜ್ಞಾನ ನೋಡಿದ್ದೇನೆ.‌ ಖಾಸಗಿಯವರಿಗೆ ಇಂತಹ ಪಾರ್ಕಿಂಗ್ ಮಾಡಲು ಉತ್ತೇಜಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮೆಟ್ರೋ ಪಿಲ್ಲರ್‌ಗಳಿಗೆ ಡೈನಾಮಿಕ್ ಲೈಟಿಂಗ್:

ನಗರದ ಸೌಂದರ್ಯ ಹೆಚ್ಚಿಸಲು ಎಂ.ಜಿ. ರಸ್ತೆ, ಟ್ರಿನಿಟಿ ಮತ್ತು ಅನಿಲ್ ಕುಂಬ್ಳೆ ಸರ್ಕಲ್ ಬಳಿಯ ಮೆಟ್ರೊ ರೈಲಿನ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.ರಾತ್ರಿ ವೇಳೆ ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಈ ಪ್ರದೇಶವನ್ನು ಆಕರ್ಷಕ ತಾಣವಾಗಿಸಲಿವೆ. ಒಟ್ಟು 160 ಕಂಬಗಳನ್ನು ಈ ಯೋಜನೆಯಡಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ಸರ್ಕಲ್, ಟ್ರಿನಿಟಿ, ಮೈಸೂರು ರಸ್ತೆ 11 ಕಂಬಗಳು, ಲಾಲ್‌ಬಾಗ್ 21 ಕಂಬಗಳು, ಜಯನಗರ 20, ಬನಶಂಕರಿ 15, ಗೊರಗುಂಟೇಪಾಳ್ಯ 8, ಬೆನ್ನಿಗಾನಹಳ್ಳಿ 15 ಮತ್ತು ನಾಗಸಂದ್ರದಲ್ಲಿ 20 ಕಂಬಗಳನ್ನು ಅಲಂಕರಿಸಲಾಗುತ್ತದೆ. 3.08 ಕೋಟಿ ರು. ವೆಚ್ಚದ ಈ ಯೋಜನೆ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೆ.ಆರ್‌ ಮಾರುಕಟ್ಟೆ ಪಾರ್ಕಿಂಗ್ ವ್ಯವಸ್ಥೆ

*10,000 ಚ.ಮೀ ವಿಸ್ತೀರ್ಣದ ಜಾಗದಲ್ಲಿ 200 ಕಾರು, 400 ಬೈಕ್ ನಿಲ್ಲಿಸಲು ಆಧುನಿಕ ಪಾರ್ಕಿಂಗ್ ವ್ಯವಸ್ಥೆ

*62 ಸಿಸಿ ಕ್ಯಾಮೆರಾ ಅಳವಡಿಕೆ, ಮಹಿಳೆಯರ ಸುರಕ್ಷತೆಗೆ 12 ಪ್ಯಾನಿಕ್ ಬಟನ್, ಎಸ್‌ಒಎಸ್ ವ್ಯವಸ್ಥೆ

*ಪ್ರತಿ ವರ್ಷ ಪಾಲಿಕೆಗೆ 41 ಲಕ್ಷ ರು. ಆದಾಯ ಸ್ವಯಂ ಚಾಲಿತ ನಂಬರ್‌ಪ್ಲೇಟ್ ಗುರುತಿಗೆ (ಎಎನ್‌ಪಿಆರ್) ಕ್ಯಾಮೆರಾ

*ಪಾರ್ಕಿಂಗ್ ಲಭ್ಯತೆ, ಅಲಭ್ಯತೆಯ ಮಾಹಿತಿ ಪ್ರವೇಶ ದ್ವಾರದಲ್ಲಿ ಡಿಜಿಟಲ್ ಪರದೆಯಲ್ಲಿ ಲಭ್ಯ

*ಗ್ರಾಹಕರಿಗೆ ವೆಬ್ ಪೋರ್ಟಲ್ ಮತ್ತು ಪಾರ್ಕಿಂಗ್ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆ

*ಇವಿ ಕಾರುಗಳು ಮತ್ತು ಬೈಕ್‌ಗಳಿಗೆ ಚಾರ್ಜಿಂಗ್ ಸೌಲಭ್ಯ, ಜನರಿಗೆ ಕುಡಿಯುವ ನೀರು, ಶೌಚಗೃಹ ಸೌಲಭ್ಯ

*ಕಾರುಗಳ ಮಾಸಿಕ ಪಾಸ್: 5,000 ರು.

ದ್ವಿಚಕ್ರ ವಾಹನಗಳ ಮಾಸಿಕ ಪಾಸ್: 1,500 ರು.

  ಟೇಬಲ್‌ ಪಾರ್ಕಿಂಗ್ ಶುಲ್ಕ 

ಸಮಯ(ಗಂಟೆ)ಬೈಕ್‌ಆಟೋ/ಕಾರು0-115 ರು.25 ರು.1 - 225 ರು.45 ರು.2 - 445 ರು.85 ರು.4 - 665 ರು.125 ರು.

 ಗಾಂಧಿ ಬಜಾರ್‌ನಲ್ಲಿ ವಾಣಿಜ್ಯ

ಸಂಕೀರ್ಣ, ವಾಹನ ನಿಲುಗಡೆ

22 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

6 ಮಹಡಿ ಕಟ್ಟಡದಲ್ಲಿ 51 ಮಳಿಗೆಗಳು

128 ವಾಹನಗಳಿಗೆ ಪಾರ್ಕಿಂಗ್

ಲಿಫ್ಟ್, ಶೌಚಗೃಹ ಸೌಲಭ್ಯ, ಕುಡಿಯುವ ನೀರು ಸೌಲಭ್ಯ

ಪ್ರತಿ ವರ್ಷ ಪಾಲಿಕೆಗೆ ಸುಮಾರು 15 ಲಕ್ಷ ರು. ಆದಾಯ

ಪಾರ್ಕಿಂಗ್ ಲಭ್ಯತೆ, ಅಲಭ್ಯತೆಯ ಮಾಹಿತಿ ಕೆಂಪು, ಹಸಿರು ಲೈಟ್‌ಗಳ ಮೂಲಕ ನಿರ್ವಹಣೆ

ಕಾರ್ ಪಾರ್ಕಿಂಗ್ ಮಾಸಿಕ 5,000 ರು

ಪಾರ್ಕಿಂಗ್ ಶುಲ್ಕ

ಸಮಯ (ಗಂಟೆಗಳಲ್ಲಿ)ಶುಲ್ಕ

0 -125 ರು.1-240 ರು.2 - 465 ರು.4 - 690 ರು.- 

ಬನಶಂಕರಿ ಜಂಕ್ಷನ್‌ನಲ್ಲಿ

ಸ್ಕೈವಾಕ್ ನಿರ್ಮಾಣಕ್ಕೆ ಶಂಕು

ಭಾರಿ ಜನ ಹಾಗೂ ವಾಹನ ದಟ್ಟಣೆ ಇರುವ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಬನಶಂಕರಿ ದೇವಸ್ಥಾನದ ನಡುವೆ ಸಂಚರಿಸಲು ಅನುಕೂಲವಾಗುವಂತೆ ಸ್ಕೈವಾಕ್‌ ಅನ್ನು ವಿನ್ಯಾಸಗೊಳಿಸಲಾಗಿದೆ. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕರ್ನಾಟಕದಲ್ಲಿ ಸದ್ಯ ಸಿಎಂ ಬದಲಾವಣೆ ಇಲ್ಲ: ಖರ್ಗೆ
ಇರಾನ್‌ ಮೇಲೆ ಭರ್ಜರಿ ಚುಟುಕು ದಾಳಿಗೆ ಅಮೆರಿಕ ಸಿದ್ಧತೆ?