ನಾನೇನು ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕಲು ಹೇಳಿದ್ನಾ: ಕುಮಾರಸ್ವಾಮಿ

Published : Nov 03, 2026, 08:43 AM IST
hd kumaraswamy

ಸಾರಾಂಶ

‘ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರೇ, ನಮ್ಮ ಮೇಲೆ ಯಾವುದೇ ಆರೋಪ ಬಂದರೂ ನಮ್ಮನ್ನು ರಕ್ಷಿಸಿ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೇಳಿಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು : ‘ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರೇ, ನಮ್ಮ ಮೇಲೆ ಯಾವುದೇ ಆರೋಪ ಬಂದರೂ ನಮ್ಮನ್ನು ರಕ್ಷಿಸಿ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೇಳಿಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರೀ ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರೇ ಕೇಂದ್ರ ಸಚಿವರೊಬ್ಬರು ಮೋದಿ ಸರ್ಕಾರದ ಮೇಲೆ ಒತ್ತಡ ಹಾಕಿ ಇ.ಡಿ, ಐಟಿ ದಾಳಿ ಮಾಡಲು ಕೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದೀರಲ್ಲ. ನಾನೇನು ಕೆಪಿಎಸ್ಸಿ ತನಿಖೆ ಮರೆಮಾಚುತ್ತಿದ್ದೇನಾ? ನಿಮ್ಮ ಕರ್ಮಕಾಂಡಗಳನ್ನು ತನಿಖೆ ಮಾಡಲು ಹೈಕೋರ್ಟ್‌ನಲ್ಲಿ ತೀರ್ಪು ಬಂದಿದೆ. ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿ ರಕ್ಷಣೆ ಪಡೆದವರು ನೀವು ಎಂದು ವಾಗ್ದಾಳಿ ನಡೆಸಿದರು.

ಏನೆಲ್ಲ ಮಾಡಿದ್ದೀರಿ ಗೊತ್ತಿದೆ:

ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ, ಮಿಸ್ಟರ್‌ ಡಿ.ಕೆ.ಶಿವಕುಮಾರ್‌, ಇವತ್ತು ನನ್ನ ಸಹೋದರನ ಮಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಜೀವಾವಧಿ ಶಿಕ್ಷೆ ಅನುಭವಿಸಲು ಏನೆಲ್ಲ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ. ನಾವು ಯಾರ ಬಳಿಯೂ ರಕ್ಷಣೆ ಕೋರಿ ಹೋಗಿಲ್ಲ. ನಾನು ಮುಖ್ಯಮಂತ್ರಿ ಆದ ಎರಡೇ ತಿಂಗಳಿಗೆ 150 ಕೋಟಿ ರು. ಮೊತ್ತದ ಹಗರಣದ ಆರೋಪ ಬಂತು. ಆಗಲೂ ಏಕಾಂಗಿಯಾಗಿ ಎದುರಿಸಿದ್ದೇನೆ. ಸಂವಿಧಾನದ ಸ್ತಂಭಗಳ ಖರೀದಿ ಮಾಡಿ ರಕ್ಷಣೆ ಪಡೆಯುವ ಕೆಲಸವನ್ನು ನಮ್ಮ ಕುಟುಂಬ ಮಾಡಿಲ್ಲ ಎಂದು ಹೇಳಿದರು.

ನಮ್ಮನ್ನು ರಕ್ಷಣೆ ಮಾಡಿ ಎಂದು ಕೇಳಿಲ್ಲ

ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಬಳಿ ಹೋಗಿ ನಮ್ಮನ್ನು ರಕ್ಷಣೆ ಮಾಡಿ ಎಂದು ಕೇಳಿಲ್ಲ. ಈ ಕ್ಷಣದವರೆಗೂ ಅಧಿಕಾರ ದುರುಪಯೋಗಪಡಿಸಿಕೊಂಡು ರಕ್ಷಣೆ ಪಡೆದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಜ್ವಲ್‌ ಕೇಸಲ್ಲಿ ಸಿಕ್ಕಂತೆ ಸ್ಟಿಂಗ್‌ ತನಿಖೆಗೂ ಪ್ರಶಸ್ತಿ ಸಿಗುತ್ತೆ: ಖರ್ಗೆ
ರಾಹುಲ್‌ಗೆ ಮಾಜಿ ಸಿಎಂ ಮೊರೆ - ಸರ್ಕಾರದಿಂದ ತಪ್ಪಿತಸ್ಥರ ರಕ್ಷಣೆಯ ಶಂಕೆ : ಸಿದ್ದರಾಮಯ್ಯ