₹4000 ಕೋಟಿ ಸಾಲ ಮಾಡಿ ನೌಕರರ ಡಿಎ ನೀಡಿದ ದೀದಿ!

Published : Jun 24, 2025, 06:48 AM IST
mamatha banerjee

ಸಾರಾಂಶ

ಮುಂದಿನ ವರ್ಷ ಚುನಾವಣೆ ಎದುರಿಸುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೀಡಾಗಿದೆ.

ಕೋಲ್ಕತಾ: ಮುಂದಿನ ವರ್ಷ ಚುನಾವಣೆ ಎದುರಿಸುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ತನ್ನ ನೌಕರರರಿಗೆ ತುಟ್ಟಿಭತ್ಯೆ (ಡಿಎ) ನೀಡಲು 4000 ಕೋಟಿ ರು. ಸಾಲ ಪಡೆಯಲು ನಿರ್ಧರಿಸಿದೆ. ಇದು ಈಗಾಗಲೇ 7 ಲಕ್ಷ ಕೋಟಿ ರು.ಗೆ ತಲುಪಿರುವ ರಾಜ್ಯದ ಸಂಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಲಿಲದೆ.

ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಉಳಿದಿರುವ ಡಿಎ ಪ್ರಮಾಣದಲ್ಲಿ ಜೂ.25ರಷ್ಟನ್ನು ಜೂ.27ರೊಳಗೆ ಪಾವತಿಸಬೇಕು. ಎಂದು ಮೇ 16ರಂದು ಸುಪ್ರೀಂಕೋರ್ಟ್‌ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಒಟ್ಟು 10425 ಕೋಟಿ ರು. ಬೇಕಿತ್ತು. ಆದರೆ ಕಾಲಮಿತಿಯಲ್ಲಿ ಅಷ್ಟು ಹಣ ಸಂಗ್ರಹ ಸಾಧ್ಯವಾಗದ ಹಿನ್ನೆಲೆಯಲ್ಲಿ 4000 ಕೋಟಿ ರು. ಸಾಲ ಮಾಡಿ ಡಿಎ ಪಾವತಿಗೆ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನ್ಯಾಯಾಂಗ ನಿಂದನೆಯಿಂದ ಪಾರಾಗಲು ಮುಂದಾಗಿದೆ.

ಸಾಲದ ಕೂಪಕ್ಕೆ ದೀದಿ ಸರ್ಕಾರ:

2011ರ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಅಧಿಕಾರವನ್ನು ಮಮತಾ ಬ್ಯಾನರ್ಜಿ ವಹಿಸಿಕೊಂಡಾಗ ರಾಜ್ಯ ಸರ್ಕಾರದ ಸಾಲವು 1.89 ಲಕ್ಷ ರು. ಇತ್ತು. ಅದಾದ ನಂತರದಲ್ಲಿ ಹಲವು ಜನಪ್ರಿಯ ಯೋಜನೆ ಘೋಷಣೆಗಳ ಪರಿಣಾಮ ಸರ್ಕಾರದ ಸಾಲದ ಮೊತ್ತ ಇದೀಗ 7 ಲಕ್ಷ ಕೋಟಿ ರು.ಗೆ ತಲುಪಿದೆ.

ಏಕೆ ಆರ್ಥಿಕ ಸಂಕಷ್ಟ?

- ಬಂಗಾಳ ಆರ್ಥಿಕ ಸಂಕಷ್ಟ: ಡಿಎ ನೀಡಲೂ ದುಡ್ಡಿಲ್ಲ

- ಮಮತಾ ಸರ್ಕಾರದ ಸಾಲ ₹7 ಲಕ್ಷ ಕೋಟಿಗೇರಿಕೆ

- 2011ರಲ್ಲಿ ಅಧಿಕಾರಕ್ಕೆ ಬಂದ ಮಮತಾರಿಂದ ಹಲವು ಪುಕ್ಕಟೆ ಯೋಜನೆ

- ರಾಜ್ಯಕ್ಕೆ ಆರ್ಥಿಕ ಸಂಕಷ್ಟ, ನೌಕರರಿಗೆ ಡಿಎ ನೀಡಲೂ ಆಗದ ಸ್ಥಿತಿ

- ಜೂ.27ರ ಕಾಲಮಿತಿಯಲ್ಲಿ ಡಿಎ ನೀಡಲು ₹10425 ಕೋಟಿ ಬೇಕಿತ್ತು

- ಸದ್ಯ ಇದ್ದಿದ್ದು ₹6000 ಕೋಟಿ ಮಾತ್ರ । ಹೀಗಾಗಿ ₹4000 ಕೋಟಿ ಸಾಲ

PREV
Read more Articles on

Recommended Stories

ಛಲವಾದಿಗೆ ಘೇರಾವ್‌ ಕೇಸ್‌ ಹಕ್ಕು ಬಾಧ್ಯತಾ ಸಮಿತಿಗೆ
ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಏನು ಚಿನ್ನದ್ದಾ? : ವಿಪಕ್ಷ ಕಿಡಿ