;Resize=(412,232))
ಬೆಳಗಾವಿ : ನಾಯಕತ್ವದ ಬದಲಾವಣೆಯ ಬಿಸಿ ಚರ್ಚೆ ಜೋರಾಗುತ್ತಿರುವ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದು, ಈ ಕೂಟದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿ ಸುಮಾರು 25 ಶಾಸಕರು ಪಾಲ್ಗೊಂಡಿದ್ದರು.
ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದ ಶಾಸಕರು ಇದ್ದರು.
ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ, ಶಾಸಕರಾದ ಎನ್.ಎ. ಹ್ಯಾರಿಸ್, ರಮೇಶ್ ಬಂಡಿ ಸಿದ್ದೇಗೌಡ, ಕೊತ್ತೂರು ಮಂಜುನಾಥ್, ಮಾಲೂರು ನಂಜೇಗೌಡ, ಮಾಗಡಿ ಬಾಲಕೃಷ್ಣ, ಕದಲೂರು ಉದಯ್, ಪುತ್ತೂರಿನ ಅಶೋಕ್ ಕುಮಾರ್ ರೈ, ಎನ್.ಟಿ.ಶ್ರೀನಿವಾಸ್, ಎ.ಸಿ.ಶ್ರೀನಿವಾಸ್, ಆನೇಕಲ್ ಶಿವಣ್ಣ, ಶೃಂಗೇರಿ ರಾಜೇಗೌಡ, ಇಕ್ಬಾಲ್ ಹುಸೇನ್, ಕುಣಿಗಲ್ ಡಾ.ರಂಗನಾಥ್, ರಾಜಾ ವೆಂಕಟಪ್ಪ ನಾಯಕ್, ಆನಂದ್, ಹರೀಶ್‌ಗೌಡ, ಲತಾ ಕುಮಾರಿ, ದರ್ಶನ್, ಮಂಥರ್ ಗೌಡ, ಗಣೇಶ್ ಹುಕ್ಕೇರಿ, ಸಿ.ಪಿ.ಯೋಗೇಶ್ವರ್ ಮತ್ತು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಸೇರಿ ಇನ್ನೂ ಕೆಲ ಶಾಸಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಅಹಿಂದ, ವಾಲ್ಮೀಕಿ ಸಮುದಾಯದ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ. ಶಿವಕುಮಾರ್ ಅವರು ಈ ಔತಣಕೂಟ ಆಯೋಜಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.