ಕೆಜಿಎಫ್ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆ

KannadaprabhaNewsNetwork |  
Published : Aug 23, 2024, 01:20 AM ISTUpdated : Aug 23, 2024, 04:16 AM IST
೨೨ಕೆಜಿಎಫ್೧ಕೆಜಿಎಫ್ ನಗರಸಭೆಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇಂದಿರಾಗಾಂಧಿ ದಯಾಶಂಕರ್ ಹಾಗೂ ಉಪಾಧ್ಯಕ್ಷರಾಗಿ ಜರ್ಮನ್ ಜ್ಯೂಲಿಯಸ್ ಹಾಗೂ ನಗರಸಭೆ ಸದಸ್ಯರು. | Kannada Prabha

ಸಾರಾಂಶ

ನಗರಸಭೆ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಇದ್ದ ಅಭ್ಯರ್ಥಿಗಳನ್ನು ಬಿಟ್ಟು ಅಚ್ಚರಿಯ ಅಭ್ಯರ್ಥಿ ಇಂದಿರಾಗಾಂಧಿ ದಯಾಶಂಕರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಶಾಸಕಿ ರೂಪಕಲಾ ಶಶಿಧರ್‌ ಸೂಚಿಸಿದ್ದರು. ಬಿ.ಫಾರಂ ಬೇಡಿಕೆ ಇಟ್ಟ ಜರ್ಮನ್‌ ಜೂಲಿಯಸ್‌

 ಕೆಜಿಎಫ್ : ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಚ್ಚರ್ಯಕರ ಅಭ್ಯರ್ಥಿಯಾದ ಇಂದಿರಾಗಾಂಧಿ ದಯಾಶಂಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜರ್ಮನ್ ಜ್ಯೂಲಿಯಸ್ ಆಯ್ಕೆಯಾಗಿದ್ದಾರೆ.೧೪ ಮಂದಿ ಕಾಂಗ್ರೆಸ್ ಸದಸ್ಯರು, 14 ಪಕ್ಷೇತರ ಸದಸ್ಯರು ಒಟ್ಟಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶಾಸಕರ ಜೊತೆ ನಗರಸಭೆ ಸಭಾಂಗಣಕ್ಕೆ ಬಂದ ನಂತರ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್‌ ಅಭಿಪ್ರಾಯ ಸಂಗ್ರಹಿಸಿ ರೇಸಿನಲ್ಲಿ ಇದ್ದ ಅಭ್ಯರ್ಥಿಗಳನ್ನು ಬಿಟ್ಟು ಅಚ್ಚರಿಯ ಅಭ್ಯರ್ಥಿ ಇಂದಿರಾಗಾಂಧಿ ದಯಾಶಂಕರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು.

ನಾಟಕೀಯ ಬೆಳವಣಿಗೆಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರು ತಸ್ಲೀಮಾ ಬಾನುರಿಗೆ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದಾಗ ಉಪಾಧ್ಯಕ್ಷ ಸ್ಥಾನದ ರೇಸಿನಲ್ಲಿದ್ದ ಜರ್ಮನ್ ಜ್ಯೂಲಿಯಸ್ ಅಸಮಾಧಾನ ಹೊರಹಾಕಿ ಪಕ್ಷದ ಬಿ.ಫಾರಂ ಅಡಿಯಲ್ಲಿ ನೀಡಬೇಕೆಂದು ಪಟ್ಟು ಹಿಡಿದರು, ಶಾಸಕರು ಬೇರೆ ದಾರಿಯಿಲ್ಲದೆ ಜರ್ಮನ್ ಜ್ಯೂಲಿಯಸ್‌ರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದರು ನಾನು ಕನಸಿನನಲ್ಲಿಯೂ ಕೂಡ ನಗರಸಭೆ ಅಧ್ಯಕ್ಷರಾಗುತ್ತೇನೆಂದು ಅಂದುಕೊಂಡಿರಲಿಲ್ಲ, ಅಧ್ಯಕ್ಷರಾಗಿ ಆಯ್ಕೆಯಾಗಲು ಶಾಸಕಿ ರೂಪಕಲಾಶಶಿಧರ್ ಸಹಕಾರ ಹಾಗೂ ಎಲ್ಲ ನಗರಸಭೆ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಜರ್ಮನ್ ಜ್ಯೂಲಿಯಸ್ ಮಾತನಾಡಿ, ನಿಷ್ಟಾವಂತ ಕಾರ್‍ಯಕರ್ತನಿಗೆ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ, ಶಾಸಕಿ ರೂಪಕಲಾಶಶಿಧರ್ ಹಾಗೂ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಅಬಾರಿಯಾಗಿದ್ದೇನೆ ಎಂದರು. ಕಣ್ಣೀರು ಹಾಕಿದ ಶಾಲಿನಿ

ಕಳೆದ ಒಂದು ವಾರದಿಂದ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಇದ್ದ ಶಾಲಿನಿ ನಂದಕುಮಾರ್ ಬಹುತೇಕ ಅಧ್ಯಕ್ಷರಾಗುತ್ತಾರೆಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದರು, ಆದರೆ ಕೊನೆಗಳಿಗೆಯಲ್ಲಿ ಅಧ್ಯಕ್ಷ ಸ್ಥಾನ ತಪ್ಪಿದಕ್ಕೆ ಶಾಲಿನಿ ನಂದಕುಮಾರ್ ಕಣ್ಣೀರು ಹಾಕಿದನ್ನು ಕಂಡು ಶಾಸಕರು ಸಮಾಧಾನಪಡಿಸಿ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ