ಮುಡಾದಲ್ಲಿ 14 ನಿವೇಶನ ಸಿಎಂ ಸಿದ್ದರಾಮಯ್ಯರ ಪತ್ನಿಗೆ ನೀಡಿರುವುದು ಸೇರಿದಂತೆ ನಾನಾ ಆರೋಪಗಳಿಗೆ ತನಿಖೆಗೆ ಸ್ಪಂದಿಸದೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ, ಸಾರ್ವಜನಿಕವಾಗಿ, ವೈಯಕ್ತಿಕವಾಗಿ ನಿಂದನೆ ಖಂಡನೀಯ. ರಾಜ್ಯಪಾಲರ ಬಗ್ಗೆ ಕಾಂಗ್ರೆಸಿಗರು ಹಗುರವಾಗಿ ಮಾತನಾಡಬಾರದು
ಕೋಲಾರ : ರಾಜ್ಯಪಾಲರು ಕೂಲಂಕಶವಾಗಿ ಆರೋಪದ ಬಗ್ಗೆ ತನಿಖೆಗೆ ಆದೇಶ ನೀಡಿದ್ದು ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ಹೊರಡಿಸಿದ್ದರು. ಈಗಲೂ ಅದನ್ನೇ ಮಾಡಲಾಗಿದೆ, ತನಿಖೆಗೆ ಸಹಕರಿಸದೆ ಕಾಂಗ್ರೆಸ್ಸಿಗರು ಬೇಜವಾಬ್ದಾರಿತನದ ಮಾತುಗಳಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಹೇಳಿದರು.
ನಗರದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸಿಗ್ನಲ್ ಸರ್ಕಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಹಾಗೂ ರಾಜ್ಯಪಾಲರ ಬಗ್ಗೆ ಕಾಂಗ್ರೆಸಿಗರು ಹಗುರವಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿ ಖಂಡಿಸಿ ಜಿಲ್ಲಾ ಭಾರತಿ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ಜಾತಿ ನಿಂದನೆ ಪ್ರಕರಣ ದಾಖಲಿಸಿ
ಮುಡಾದಲ್ಲಿ 14 ನಿವೇಶನ ಸಿಎಂ ಸಿದ್ದರಾಮಯ್ಯರ ಪತ್ನಿಗೆ ನೀಡಿರುವುದು ಸೇರಿದಂತೆ ನಾನಾ ಆರೋಪಗಳಿಗೆ ತನಿಖೆಗೆ ಸ್ಪಂದಿಸದೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ, ಸಾರ್ವಜನಿಕವಾಗಿ, ವೈಯಕ್ತಿಕವಾಗಿ ನಿಂದನೆ ಖಂಡನೀಯ. ಪೊಲೀಸ್ ಇಲಾಖೆ ಇದ್ದರೂ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ, ಐವನ್ ಡಿಸೋಜ ಹೇಳಿಕೆ ಖಂಡನೀಯ. ರಾಜ್ಯಪಾಲರನ್ನು ಓಡಿಸುವುದಾಗಿ ಹೇಳಿದ್ದಾರೆ.
ಹಿಂಸೆ ಆದರೆ ರಾಜ್ಯಪಾಲರು ನೇರಹೊಣೆ ಎನ್ನುತ್ತಾರೆ. ಸಚಿವ ಕೃಷ್ಣಬೈರೇಗೌಡ, ಶಾಸಕ ನಂಜೇಗೌಡರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿರುವವನ್ನು ಈ ಕೂಡಲೇ ಜಾತಿ ನಿಂದನೆ ಪ್ರಕರಣ ದಾಖಲಿಸಿ ಗೂಂಡಾ ಕಾಯಿದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸಾರ್ವಜನಿಕರಿಗೆ ಹಗರಣಗಳ ಬಗ್ಗೆ ಅರಿವು ಮೂಡಿಸಬೇಕು, ಪಾದಯಾತ್ರೆ ಯಶಸ್ವಿ, ತನಿಖೆಗೆ ಅನುಮತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಗೂಂಡಾ ವರ್ತನೆ, ದಲಿತರು ಸಾಂವಿಧಾನಿಕ ಹುದ್ದೆಗಳಲ್ಲಿದ್ದಾಗ ಕಾಂಗ್ರೆಸ್ ದುರ್ವರ್ತನೆ ಎಂದು ನುಡಿದರು.ರಾಜ್ಯಪಾಲರಿಗೇ ಬೆದರಿಕೆ
ಮುಡಾ, ವಾಲ್ಮೀಕಿ ಹರಗರಣ, ಗ್ಯಾರಂಟಿಗಳಿಗೆ ಹಣ ಬಳಕೆ ವಿಚಾರವಾಗಿ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದನ್ನು ಬಿಟ್ಟು ದಲಿತ ಸಮುದಾಯದ ರಾಜ್ಯಪಾಲರಿಗೆ ಬೆದರಿಕೆ ರಾಜಸ್ಥಾನ, ಪಾಕಿಸ್ತಾನ ಹಾಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯಪಾಲರ ವಿರುದ್ಧ ಮಾತನಾಡಿರುವವರನ್ನು ಕೂಡಲೇ ಬಂಧಿಸಬೇಕು ಜಾತಿ ನಿಂದನೆ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.ಹೋರಾಟ ಇಲ್ಲಿಗೆ ನಿಲ್ಲಲ್ಲ ಸಿಎಂ ರಾಜೀನಾಮೆ ನೀಡಿ ಸರ್ಕಾರ ಬೀಳುವವರೆಗೂ ಮುಂದುವರೆಸುತ್ತೇವೆ, ಜಿಲ್ಲೆಯ ಬಿಜೆಪಿಯವರಿಗೆ ತೊಂದರೆ ಆದರೆ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಎಂದು ಹೇಳಿದರು.
ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಅರುಣಮ್ಮ, ಮಮತಮ್ಮ, ತಿಮ್ಮರಾಯಪ್ಪ, ಬಾಬು, ಸುರೇಶ್, ಪ್ರವೀಣ್ ಗೌಡ, ತಿಮ್ಮರಾಯಪ್ಪ, ಮಾಗೇರಿ ನಾರಾಯಣಸ್ವಾಮಿ, ಮು.ರಾಘವೇಂದ್ರ, ವಿಜಯ ಕುಮಾರ್, ಭಜರಂಗದಳ ಬಾಲಾಜಿ, ಗೋವರ್ಧನ್ ಇದ್ದರು.