ಮಂಡ್ಯ : ಮುಂಬರುವ 2028 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿಂದೂ ಸರ್ಕಾರ ಜಾರಿಯಾಗಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ ಎಂದು ವಿಜಯನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರ ತುಷ್ಠೀಕರಣ ಹೆಚ್ಚಾಗಿದೆ. ಕೆಲವರು ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದರೆ, ಮತ್ತೆ ಕೆಲವರು ಮುಸ್ಲಿಂ ಕಾರ್ಯಕ್ರಮದಲ್ಲಿ ಅವರ ಟೋಪಿ ಧರಿಸುತ್ತಾರೆ. ಇದು ರಾಜ್ಯಸರ್ಕಾರದಿಂದ ಹಿಂದೂಗಳ ರಕ್ಷಣೆಯಾಗುತ್ತಿಲ್ಲವೆಂಬ ಸಂದೇಶ ರವಾನಿಸಿದೆ. ಕಾಂಗ್ರೆಸ್ ಕರ್ನಾಟಕವನ್ನು ಮುಸ್ಲಿಂ ಮಾಡಲು ಹೊರಟಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇದುವರೆಗೂ ಕಾಂಗ್ರೆಸ್ ಸರ್ಕಾರ ಹಿಂದೂಗಳ ಮೇಲಿನ ಒಂದೇ ಒಂದು ಪ್ರಕರಣವನ್ನು ವಾಪಸ್ ಪಡೆದಿಲ್ಲ. ಆದರೆ, ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದ ಆರೋಪಿಗಳ ಪ್ರಕರಣವನ್ನು ವಾಪಸ್ ಪಡೆಯುತ್ತದೆ. ಕರ್ನಾಟಕದಲ್ಲಿ ಮುಸ್ಲಿಮರ ಬೆಂಬಲದ ಸರ್ಕಾರ ಅಧಿಕಾರ ನಡೆಸುತ್ತಿದೆ. ಈ ಕಾರಣಕ್ಕೆ ಹಿಂದೂಗಳು ಜಾಗೃತರಾಗುತ್ತಿದ್ದಾರೆ ಎಂದು ಹೇಳಿದರು.
ಯುವಕರಿಗೆ ಡಿಜೆ ಹಾಕೋದು ಸಹಜ. ಸರ್ಕಾರ ನಿಷೇಧ ಮಾಡಿದೆ ಎಂದರೆ ವಿಚಿತ್ರ. ಒಂದು ಜಿಲ್ಲೆಗೆ ಅನುಮತಿ, ಮತ್ತೊಂದು ಜಿಲ್ಲೆಗೆ ತಾರತಮ್ಯ. ಮಸೀದಿಯ ಸೌಂಡ್‌ನಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ. ಇದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಯಾವುದೇ ಕ್ರಮವಿಲ್ಲ ಎಂದು ದೂಷಿಸಿದರು.
ನನ್ನನ್ನು ಬಿಜೆಪಿ ಉಚ್ಚಾಟನೆ ಮಾಡಿದೆ, ಜನರು ಮಾಡಿದ್ದಾರಾ?
ನನ್ನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಆದರೆ, ಜನರು ಉಚ್ಛಾಟನೆ ಮಾಡಿಲ್ಲ. ಬಿಜೆಪಿ ಉಚ್ಚಾಟನೆ ಮಾಡಿದ್ದರಿಂದ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಆದರೆ, ಹಿಂದೂ ಮತಗಳು ವಿಭಜನೆ ಆಗಬಾರದು ಎಂದು ವಿಜಯನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬಿಜೆಪಿಯಲ್ಲಿ ಯತ್ನಾಳ್ ಉಚ್ಚಾಟನೆ ಮಾಡಿರೋದು ತಪ್ಪು ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮಾತನಾಡಿಲ್ಲ. ನಾನಾಗೇ ಹೋಗಿ ಶರಣಾಗತಿ ಆಗುವುದಿಲ್ಲ. ವಿಧಾನಸಭೆಯಲ್ಲಿ ಗಟ್ಟಿಯಾಗಿ ಹಿಂದೂಗಳ ಬಗ್ಗೆ ಮಾತನಾಡುವ ನಾಯಕ ಇಲ್ಲ. ಅದಕ್ಕಾಗಿ ನಾನಿದ್ದೇನೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರನ್ನು ತೆಗೆದರೆ ಬಿಜೆಪಿ ಇರುವುದಿಲ್ಲ ಎಂಬುದೆಲ್ಲಾ ಸುಳ್ಳು. ಬಿಜೆಪಿ ಯಡಿಯೂರಪ್ಪ ಅವರ ಕುಟುಂಬದ ಮೇಲೆ ನಿಂತಿಲ್ಲ, ಯತ್ನಾಳ್ ಆ ಭ್ರಷ್ಟ ಕುಟುಂಬಕ್ಕೆ ಕೈ ಮುಗಿಯುವ ಅಗತ್ಯ ಇಲ್ಲ. ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹೊರಗೆ ಬರಬೇಕು ಎಂದು ಆಶಿಸಿದರು.
ಡಿಕೆಶಿ ಅಶೋಕ್, ವಿಜಯೇಂದ್ರ ಎಲ್ಲರ ಬಾಯಿ ಮುಚ್ಚಿಸುತ್ತಾರೆ. ಆದರೆ, ನನ್ನ ಬಾಯಿ ಮುಚ್ಚಿಸಲು ಆಗೋಲ್ಲ.್ಲ ಏ ಆಯೋಗ್ಯ ನಾನು ನಿಮ್ಮ ಪಕ್ಷಕ್ಕೆ ಬರೋಲ್ಲ. ಇಷ್ಟು ಗಟ್ಟಿಯಾದ ಕಾರ್ಯಕರ್ತರು ಮಂಡ್ಯದಲ್ಲಿ ಇದ್ದಾರೆ. ಆದರೂ ಇಷ್ಟು ವರ್ಷ ಯಾಕೆ ಮಂಡ್ಯದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದರೆಂಬುದು ಗೊತ್ತಿಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಒಬ್ಬ ಮಹಾ ಮೂರ್ಖ
ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚ, ನೆಹರು ಸೇರಿದಂತೆ ಯಾರಿಂದಲೂ ಆರ್‌ಎಸ್‌ಎಸ್ ನಿಷೇಧ ಮಾಡಲಾಗಿಲ್ಲ. ಇವನು ಮಾಡ್ತಾನಾ ಎಂದು ಏಕವಚನದಲ್ಲಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡಲು ಸಾದ್ಯವಿಲ್ಲ. ಮುಸ್ಲಿಂ ಒಲೈಕೆಗಾಗಿ ಈ ರೀತಿ ಹೇಳ್ತಾರೆ. ಆರ್‌ಎಸ್‌ಎಸ್ ಕಬ್ಜ ಮಾಡಿಲ್ಲ. ಭರತ ಭೂಮಿಗೆ ನಮಸ್ಕಾರ ಮಾಡಿ ಹೋಗುತ್ತಾರೆ. ಹಿಂದೂಗಳ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಿದ್ದಾರೆ.
ಮಸೀದಿ ವಶ ಮಾಡಿಕೊಂಡಿದ್ದಾರಾ ಎಂದು ಏರುದನಿಯಲ್ಲಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಇಳಿಸುವುದು ಸಾಧ್ಯವಿಲ್ಲ: ಯತ್ನಾಳ್
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದು ಅಷ್ಟು ಸುಲಭವಲ್ಲ. ನವೆಂಬರ್ ಕ್ರಾಂತಿ ಆಗೋಲ್ಲ. ಇವರದೇ ಸರ್ಕಾರ ಅಧಿಕಾರದಲ್ಲಿರುತ್ತೆ ಎಂದು ಯತ್ನಾಳ್ ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ. ಹಿಂದೆ ವಿಜಯೇಂದ್ರ ಈ ಪ್ಲಾನ್ ಮಾಡಿದ್ದರು. ಡಿಕೆಶಿ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಮಾಡಲು ಯೋಜನೆ ರೂಪುಗೊಂಡಿತ್ತು. ಯತ್ನಾಳ್ ಇದ್ದರೆ ವಿರೋಧ ಮಾಡುತ್ತಾನೆ ಎಂದೇಳಿ ಉಚ್ಛಾಟನೆ ಮಾಡಿದರು. ನನ್ನನ್ನು ಉಚ್ಚಾಟನೆ ಮಾಡಿದ ಬಳಿಕ ಈಗ ಕೈಬಿಟ್ಟಿದ್ದಾರೆ ಎಂದು ವಿವರಿಸಿದರು.
ನನ್ನ ಮೇಲೆ ಮಾಟ ಮಂತ್ರ ಮಾಡಲು ಹೊರಟಿದ್ದಾರೆ. ಕೇರಳಕ್ಕೆ ಹೋಗಿಯೂ ಬಂದಿದ್ದಾರೆ. ಆದರೆ, ನನ್ನ ಮೇಲೆ ಮಾಟ ಮಂತ್ರ ನಡೆಯೋದಿಲ್ಲ ಎಂದರು.
ನವೆಂಬರ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಕ್ರಾಂತಿ ಆಗಬಹುದು. ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲವೆಂಬ ಅಸಮಾಧಾನವಿದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯೇ ಕ್ರಾಂತಿ. ಮೂಲ ಬಿಜೆಪಿ ಇವರ ಕೈನಲ್ಲಿದ್ದಾರೆ ಎಂದು ದೂಷಿಸಿದರು.