ಗಾಂಧೀಜಿಯ ತತ್ವಗಳೇ ರೈತ ಸಂಘಟನೆಗೆ ಆದರ್ಶ

 ಮಹಾತ್ಮಗಾಂಧಿಜೀ ಅವರು ಶಾಂತಿ, ಅಹಿಂಸೆ, ಸತ್ಯದ ಮಾರ್ಗದಲ್ಲಿ ನಡೆದು ಬಿಟ್ರಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು, ಇಂತಹ ಮಹಾನ್ ನಾಯಕ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.

KannadaprabhaNewsNetwork | Published : Oct 3, 2023 12:35 PM IST / Updated: Oct 07 2023, 11:47 AM IST

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಮತ । ಗಾಂಧೀಜಿ, ಶಾಸ್ತ್ರಿ ಜಯಂತಿ ಕನ್ನಡಪ್ರಭ ವಾರ್ತೆ ಪಾಂಡವಪುರ ಮಹಾತ್ಮ ಗಾಂಧಿಜೀ ಅವರ ಶಾಂತಿ, ಅಹಿಂಸೆ ತತ್ವದಡಿಯಲ್ಲಿ ರೈತ ಸಂಘಟನೆ ಮುನ್ನಡೆಯುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್‌ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿಜೀ ಅವರು ಶಾಂತಿ, ಅಹಿಂಸೆ, ಸತ್ಯದ ಮಾರ್ಗದಲ್ಲಿ ನಡೆದು ಬಿಟ್ರಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು, ಇಂತಹ ಮಹಾನ್ ನಾಯಕ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.

 ರೈತ ಸಂಘಟನೆಯೂ ಕೂಡ ಮಹಾತ್ಮ ಗಾಂಧಿಜೀ ಅವರ ಸಿದ್ದಾಂತದಡಿಯಲ್ಲಿಯೇ ಕೆಲಸ ಮಾಡುತ್ತದೆ. ಗಾಂಧಿಜೀ ಅವರ ಶಾಂತಿ, ಅಹಿಂಸೆಯ ತತ್ವದಡಿಯಲ್ಲಿಯೇ ಹೋರಾಟ ನಡೆಸುತ್ತದೆ ಎಂದರು. ಬಿಇಓ ಚಂದ್ರಶೇಖರ್ ಮಾತನಾಡಿ, ಮಹಾತ್ಮಗಾಂಧಿಜೀ ಅವರ ಆದರ್ಶಗಳನ್ನು ಜಾಗತಿಕಮಟ್ಟದ ಹಲವಾರು ನಾಯಕರು ಅಳವಡಿಸಿಕೊಂಡು ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್, ತಾಪಂ ಇಓ ಲೋಕೇಶ್‌ಮೂರ್ತಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್, ಅಬಕಾರಿ ಅಧಿಕಾರಿ ರಮ್ಯ, ಪುರಸಭೆ ಮುಖ್ಯಾಧಿಕಾರಿ ವೀಣಾ, ಪಿ.ನಾಗರಾಜು, ದಲಿತ ಮುಖಂಡ ಅಂಕಯ್ಯ ಸೇರಿದಂತೆ ಹಲವರು ಇದ್ದರು. 

Share this article