ಗಣರಾಜ್ಯ ದಿನದಲ್ಲೂ ಸರ್ಕಾರ V/s ಗೌರ್ನರ್‌ ಸಂಘರ್ಷ?: ಕುತೂಹಲ

KannadaprabhaNewsNetwork |  
Published : Jan 25, 2026, 04:00 AM IST
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ | Kannada Prabha

ಸಾರಾಂಶ

ವಿಧಾನಮಂಡಲ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣ ವಿವಾದ ಘಟನೆ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಬಹುದೇ ಎಂಬ ಕುತೂಹಲ ನಿರ್ಮಾಣವಾಗಿದೆ.

- ಸರ್ಕಾರದ ಭಾಷಣ ಓದ್ತಾರಾ ಗೆಹಲೋತ್?

- ತಿದ್ದುಪಡಿಗೆ ಸಲಹೆ ನೀಡಬಹುದೆ?: ಪ್ರಶ್ನೆ

--

- ನಾಳಿನ ಗಣರಾಜ್ಯ ದಿನಕ್ಕೆ ರಾಜ್ಯ ಸರ್ಕಾರದ ಭಾಷಣ ಸಿದ್ಧ. ಓದಲು ಗೌರ್ನರ್‌ಗೆ ರವಾನೆ

- ಇದರಲ್ಲಿ ಕೂಡ ರಾಜ್ಯ ಸರ್ಕಾರದ ಬಗ್ಗೆ ಟೀಕೆ ಸಂಭವ. ಇದಕ್ಕೆ ಗೌರ್ನರ್‌ ಆಕ್ಷೇಪ ಸಂಭವ

- ಇದಕ್ಕೆ ಸರ್ಕಾರ ಒಪ್ಪದೇ ಹೋದರೆ ಯಾವ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ

- ಸದ್ಯ ಗೆಹಲೋತ್ ಬೆಂಗಳೂರಲ್ಲಿಲ್ಲ. ಇಂದು ಸಂಜೆ ವಾಪಸಾಗಿ ನಿಲುವು ಪ್ರಕಟ ನಿರೀಕ್ಷೆ

----ಗವರ್ನರ್ ಮೂಲಕ

ಕೇಂದ್ರದಿಂದ ತೊಂದರೆ

ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ತೊಂದರೆ ಕೊಡ್ತಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಅವರನ್ನು ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರದ ಭಾಷಣ ಮಾಡದಂತೆ ಪ್ರಧಾನಿ ಕಚೇರಿ, ಗೃಹ ಕಚೇರಿಯಿಂದಲೇ ಸೂಚನೆ ಬರುತ್ತಿದೆ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಮಂಡಲ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣ ವಿವಾದ ಘಟನೆ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಬಹುದೇ ಎಂಬ ಕುತೂಹಲ ನಿರ್ಮಾಣವಾಗಿದೆ.

ನಿಯಮಾನುಸಾರ ಗಣರಾಜ್ಯೋತ್ಸವ ಸಮಾರಂಭಕ್ಕೂ ರಾಜ್ಯ ಸರ್ಕಾರವೇ ರಾಜ್ಯಪಾಲರಿಗೆ ಭಾಷಣ ಸಿದ್ಧಪಡಿಸಿಕೊಡುತ್ತದೆ. ಆ ಪ್ರಕಾರ ಈ ವರ್ಷವೂ ಜ.26ರ ಸೋಮವಾರ ನಗರದ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಡಬೇಕಾದ ಭಾಷಣವನ್ನೂ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ.

ಮೂಲಗಳ ಪ್ರಕಾರ ಈ ಭಾಷಣದಲ್ಲೂ ರಾಜ್ಯ ಸರ್ಕಾರದ ಸಾಧನೆಗಳ ಜೊತೆಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನುದಾನ ಹಂಚಿಕೆ ತಾರತಮ್ಯ, ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನ ಕಡಿತ, ತೆರಿಗೆ ಕಡಿತ ಸೇರಿದಂತೆ ಇನ್ನಿತರೆ ನೀತಿಗಳನ್ನು ಟೀಕಿಸುವ ಅಂಶಗಳಿವೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣ ಓದುವ ವಿಚಾರವಾಗಿ ತಗಾದೆ ತೆಗೆಯಬಹುದೇ, ತಿದ್ದುಪಡಿಗೆ ಸಲಹೆ ನೀಡಬಹುದೇ? ನೀಡಿದ್ದೇ ಆದಲ್ಲಿ ಸರ್ಕಾರ ಯಾವ ಪ್ರತಿಕ್ರಿಯೆ ನೀಡಬಹುದು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ಆದರೆ, ಲೋಕಭವನದ ಮೂಲಗಳ ಪ್ರಕಾರ, ರಾಜ್ಯಪಾಲರು ಸದ್ಯ ರಾಜ್ಯದಲ್ಲಿ ಇಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮ ನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದಾರೆ. ಭಾನುವಾರ ಸಂಜೆ ವೇಳೆಗೆ ನಗರಕ್ಕೆ ವಾಪಸ್ಸಾಗಲಿದ್ದು ಬಳಿಕವಷ್ಟೇ ಸರ್ಕಾರದ ಭಾಷಣವನ್ನು ಪರಿಶೀಲಿಸಿ ತಮ್ಮ ನಿಲುವು ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರೇವಣ್ಣ ಬಂಧಿಸಿದ ಪೊಲೀಸರಿಗೆ ಇನಾಂ ನೀಡಿದ್ದಾರೆ, ನಮಗೂ ಕಾಲ ಬರುತ್ತೆ: ಗೌಡ
ತಿಮ್ಮಾಪುರ ರಾಜೀನಾಮೆಗೆ ವಿಪಕ್ಷ ಪಟ್ಟು, ಕಲಾಪ ಬಲಿ!