)
- ನಮ್ಮ ವಿರುದ್ಧ ‘ಕೈ’ ಸೇಡಿನ ನಡೆ । ಸ್ವಲ್ಪ ಕಾಯಿರಿ ನಾವು ಯಾರೆಂದು ತೋರಿಸ್ತೇವೆ
==
ನನಗೆ ವಾರಕ್ಕೆ 3 ಬಾರಿಡಯಾಲಿಸಿಸ್: ದೇವೇಗೌಡಕನ್ನಡಪ್ರಭ ವಾರ್ತೆ ಹಾಸನ:‘ನನಗೆ 5 ತಿಂಗಳ ಹಿಂದೆ ಎರಡೂ ಕಿಡ್ನಿಗಳು ವಿಫಲವಾದವು. ಹಾಗಾಗಿ, ಈಗ ನಾನು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ನಿನ್ನೆಯಷ್ಟೇ ಡಯಾಲಿಸಿಸ್ ಮಾಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಆದರೂ, ರಾಜ್ಯದ ಜನರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ, ಹೋರಾಡುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾವುಕರಾಗಿ ನುಡಿದರು. ಆಗ ಜನರು ಕರತಾಡನಗೈದರು.-- ಕನ್ನಡಪ್ರಭ ವಾರ್ತೆ ಹಾಸನ
ಜೆಡಿಎಸ್ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್ ಜನತಾ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್‌ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.