ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಮಾಡಿದೆ. ರೈತರ ಪರವಾಗಿ ಉತ್ತಮ ಆಡಳಿತ ನೀಡಬೇಕು ಅಂತ ಇವರಿಗೆ ಅನಿಸಲೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಮಾಡಿದೆ. ರೈತರ ಪರವಾಗಿ ಉತ್ತಮ ಆಡಳಿತ ನೀಡಬೇಕು ಅಂತ ಇವರಿಗೆ ಅನಿಸಲೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಯ ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ಬೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು. ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದನ್ನು ನೆನಪಿಸಿದರು.
500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ: ಹಾಲಿಗೆ ಪ್ರೋತ್ಸಾಹಧನ, ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದು, ಬರದ ಸಂದರ್ಭದಲ್ಲಿ 7 ತಾಸು ವಿದ್ಯುತ್ ಕೊಟ್ಟದ್ದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ.
ಆದರೆ ಕಾಂಗ್ರೆಸ್ ಸರ್ಕಾರ 715 ಕೋಟಿ ರೂ. ಗೌರವಧನ ಉಳಿಸಿಕೊಂಡಿದೆ. ಮೊಸಳೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದ 500 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಕಂಬ ಅಳವಡಿಕೆ ಸಂಪರ್ಕಕ್ಕೆ 25-30 ಸಾವಿರ ರು. ಕೊಟ್ಟರೆ ಸಾಕಾಗಿತ್ತು. ಆದರೆ ಈ ಸರ್ಕಾರದಲ್ಲಿ ಎರಡೂವರೆಯಿಂದ 3 ಲಕ್ಷ ಆಗುತ್ತಿದೆ.
ಲಂಚ ಸೇರಿ 5 ಲಕ್ಷ ಆಗಲಿದೆ. ಇದು ಬಡವರ ಸರ್ಕಾರ ಅಲ್ಲ, ಶೇ 50 ಕಮಿಷನ್ ಪಡೆಯುವ ಭ್ರಷ್ಟಾಚಾರದ ಸರ್ಕಾರ ಇದೆ. ಇದು ರೈತ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ನ ಹಾಸನ ಜಿಲ್ಲೆಯ ಗಂಡಸಿ ಶಿವರಾಂ ಅವರೇ ಆರೋಪಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ವಿದ್ಯುತ್ ನೀಡಿದ್ದರೆ ರೈತ ಸಾಯುತ್ತಿರಲಿಲ್ಲ: 200 ಯುನಿಟ್ ಉಚಿತ ಎಂದ ಕಾಂಗ್ರೆಸ್ ರೈತರಿಗೆ ಸರಿಯಾಗಿ ವಿದ್ಯುತ್ ನೀಡಿದ್ದರೆ ಆತ್ಮಹತ್ಯೆ ನಡೆಯುತ್ತಿರಲಿಲ್ಲ. ಉಚಿತ ಬಸ್ ಎಂದು ಹೇಳಿ ಮಕ್ಕಳಿಗೆ ಬಸ್ ನೀಡಿಲ್ಲ.
ಸ್ಟಾಂಪ್ ಡ್ಯೂಟಿ ದರ ಹೆಚ್ಚಳವಾಗಿದೆ. ಕ್ಷೇತ್ರದ ಶಾಸಕ ಯಾವುದಾದರೂ ಯೋಜನೆ ತಂದಿದ್ದರಾ, ಈ ಸರ್ಕಾರ ಯಾವಾಗ ತೊಲಗುತ್ತೋ ಅಂತ ಜನ ಶಾಪ ಹಾಕ್ತಿದ್ದಾರೆ.
ಕೇವಲ 9 ತಿಂಗಳಲ್ಲೇ ಜನಪ್ರಿಯತೆ ಕಳೆದುಕೊಂಡಿರುವ ಏಕೈಕ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದರು.
ರಾಜ್ಯದಲ್ಲಿ 28 ಕ್ಷೇತ್ರಗಳಿವೆ ಜೆಡಿಎಸ್, ಬಿಜೆಪಿ ಒಂದಾಗಿ ಚುನಾವಣೆ ಎದುರಿಸಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. 1 ದಿನವೂ ವಿಶ್ರಾಂತಿ ಪಡೆಯದ ಪ್ರಧಾನಮಂತ್ರಿಗಳು ನಮ್ಮ ನರೇಂದ್ರ ಮೋದಿಯವರು.
ಅರ್ಟಿಕಲ್ 327 ತೆಗೆದು ಹಾಕಿ ಶಾಂತಿ ನೆಲಸುವ ಕೆಲಸ ಮಾಡಿದರು. ರಾಮಮಂದಿರ ನಿರ್ಮಾಣ ಮಾಡಿದ ಮಹಾನಾಯಕ ನರೇಂದ್ರ ಮೋದಿ.
ಮೈತ್ರಿ ಕೂಟದ ಅಭ್ಯರ್ಥಿ ಆದ್ರೂ ನರೇಂದ್ರ ಮೋದಿ ಅಭ್ಯರ್ಥಿ ಅಂತ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.ಬೂತ್ ಅಧ್ಯಕ್ಷರ ಮನೆಗೆ ಭೇಟಿ
ಇದೇ ವೇಳೆ ಮಾಜಿ ಸಚಿವ ಡಾ.ಕೆ.ಸುಧಾಕರ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಗ್ರಾಮದ ಬೂತ್ ಅಧ್ಯಕ್ಷ ಮಂಜುನಾಥ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಹಾರ, ಶಾಲು ಹಾಕಿ ಗೌರವಿಸಿದರು. ಬೂತ್ ಮಟ್ಟದಲ್ಲಿ ಜನರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.