ಡಿಕೆಶಿ ಸಿಎಂ ಆಗಿರೋದು ನಾನೇ ಮಂತ್ರಿಯಾದಷ್ಟು ಸಂತೋಷ: ಪಿ.ರವಿಕುಮಾರ್

KannadaprabhaNewsNetwork |  
Published : Jun 08, 2026, 01:30 AM ISTUpdated : Jun 08, 2026, 04:31 AM IST
ravi ganiga

ಸಾರಾಂಶ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಆಸೆಪಟ್ಟವರಲ್ಲಿ ನಾನೂ ಒಬ್ಬ. ನಾನು ಮೊದಲ ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಎಲ್ಲರಿಗೂ ನಾನು ಸಚಿವ ಆಗಬೇಕು ಅನ್ನೋದು ಆಸೆ ಇರುತ್ತೆ. ಆದರೆ, ಎಲ್ಲರಿಗೂ ಸಿಗಬೇಕಲ್ಲ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರೋದು ನಾನೇ ಮಂತ್ರಿಯಾದಂತೆ ಎಂದೆನಿಸುತ್ತಿದೆ.

 ಮಂಡ್ಯ :  ನಾನು ಮಂತ್ರಿ ಸ್ಥಾನಕ್ಕೆ ಆಸೆಪಟ್ಟವನಲ್ಲ. ನಾನು ಶಾಸಕನಾಗಿಯೇ ಕೆಲಸ ಮಾಡುವೆ. ನನ್ನ ಬದಲು ೫ ಜನ ಹೊಸಬರಿಗೆ ಮಂತ್ರಿ ಸ್ಥಾನ ಕೊಡಿ ಅಂತ ಕೇಳಿದ್ದೇವೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದು ನನಗೆ ಮಂತ್ರಿಯಾದಷ್ಟೇ ಸಂತೋಷವಾಗಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹೇಳಿದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಆಸೆಪಟ್ಟವರಲ್ಲಿ ನಾನೂ ಒಬ್ಬ. ನಾನು ಮೊದಲ ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಎಲ್ಲರಿಗೂ ನಾನು ಸಚಿವ ಆಗಬೇಕು ಅನ್ನೋದು ಆಸೆ ಇರುತ್ತೆ. ಆದರೆ, ಎಲ್ಲರಿಗೂ ಸಿಗಬೇಕಲ್ಲ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರೋದು ನಾನೇ ಮಂತ್ರಿಯಾದಂತೆ ಎಂದೆನಿಸುತ್ತಿದೆ. ಹೊಸಬರಿಗೆ ಮಂತ್ರಿ ಸ್ಥಾನ ಸಿಗಲಿ, ಅವರೂ ಅನುಭವ ಪಡೆದುಕೊಳ್ಳಲಿ. ನಾನು ಶಾಸಕನಾಗಿಯೇ ಕೆಲಸ ಮಾಡುತ್ತೇನೆ ಎಂದರು.

ಸಚಿವ ಸ್ಥಾನದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ

ಸಚಿವ ಸ್ಥಾನದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎರಡನೇ ಅವಧಿಯಲ್ಲೂ ಚಲುವರಾಯಸ್ವಾಮಿ ಮಂತ್ರಿಯಾಗುವ ನಿರೀಕ್ಷೆಯಂತೂ ಇದೆ. ಅವರೊಂದಿಗೆ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರೂ ಮಂತ್ರಿಗಿರಿ ಕೇಳುತ್ತಿದ್ದಾರೆ. ಅವರ ಕುಟುಂಬ ೫೦ ವರ್ಷದಿಂದ ರಾಜಕಾರಣದಲ್ಲಿದೆ. ಜೊತೆಗೆ ೩ ಬಾರಿ ಗೆದ್ದಿದ್ದಾರೆ. ಅವರಿಗೂ ಮಂತ್ರಿ ಸ್ಥಾನ ಕೊಟ್ಟರೆ ಸಂತೋಷ. ಮೊದಲ ಪಟ್ಟಿ, ಎರಡನೇ ಪಟ್ಟಿ ಆದರೇನು ಬದಲಾವಣೆ ಆಗುವುದಿಲ್ಲ. ಮಂಡ್ಯಕ್ಕೆ ಮಂತ್ರಿ ಸ್ಥಾನ ಸಿಕ್ಕರೆ ಸಾಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`10 ಸಾವಿರ ಯುವಕರ ಸಂಘ ಕಟ್ಟಿದರೆ 10 ಲಕ್ಷ ನೆರವು

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ `10 ಸಾವಿರ ಯುವಕರ ಸಂಘ ಕಟ್ಟಿದರೆ 10 ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಯುವಕರು ಆನ್‌ಲೈನ್ ಬೆಟ್ಟಿಂಗ್, ಚಾಟ್, ರೀಲ್ಸ್‌ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಯೋಜನೆ ಮೂಲಕ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ರಾಮ-ಲಕ್ಷ್ಮಣನಂತೆ ಇದ್ದಾರೆ. ಸುಮ್ಮನೆ ವಿರೋಧ ಪಕ್ಷದವರು ಇಬ್ಬರ ನಡುವೆ ಜಗಳ ತಂದಿಡುವುದಕ್ಕೆ ಕಾದುಕುಳಿತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅಂತ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ ಎಂದು ಕುಟುಕಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ?
ಮೋದಿಗಷ್ಟೇ ಅಲ್ಲ, ಸಿಎಂ ಡಿಕೆಶಿಗೂ ಜಿರಳೆ ಎಚ್ಚರಿಕೆ!