ಎಲ್ಪಿಜಿ ಬೆಲೆ ಏರಿಕೆ ಶಾಕ್‌ - ಪ್ರತಿ ಗೃಹಬಳಕೆ ಸಿಲಿಂಡರ್‌ಗೆ 29 ರು. ಹೆಚ್ಚಳ

Published : Jun 07, 2026, 11:28 AM IST
Cylinder

ಸಾರಾಂಶ

ಇರಾನ್‌ ಯುದ್ಧದ ಪರಿಣಾಮ, ದೇಶೀಯ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 29 ರು. ಹೆಚ್ಚಿಸಲಾಗಿದೆ. ಇದು 3 ತಿಂಗಳಲ್ಲಿ ಎರಡನೇ ಹೆಚ್ಚಳವಾಗಿದೆ.ಜೂ.7ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 913 ರು.ಗಳಿಂದ 942 ರು.ಗಳಿಗೆ ಏರಿಕೆಯಾಗಿದೆ.

ನವದೆಹಲಿ :  ಇರಾನ್‌ ಯುದ್ಧದ ಪರಿಣಾಮ, ದೇಶೀಯ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 29 ರು. ಹೆಚ್ಚಿಸಲಾಗಿದೆ. ಇದು 3 ತಿಂಗಳಲ್ಲಿ ಎರಡನೇ ಹೆಚ್ಚಳವಾಗಿದೆ.

ಜೂ.7ರಿಂದ ಜಾರಿಗೆ ಬರುವಂತೆ 942 ರು.ಗಳಿಗೆ ಏರಿಕೆ

ಜೂ.7ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 913 ರು.ಗಳಿಂದ 942 ರು.ಗಳಿಗೆ ಏರಿಕೆಯಾಗಿದೆ.

ಇರಾನ್‌ ಯುದ್ಧ ಆರಂಭದ ನಂತರ ಸಿಲಿಂಡರ್‌ ಬೆಲೆ ಮಾ.7ರಂದು 60 ರು. ಏರಿತ್ತು. ಇದಾದ ನಂತರ ಈಗಿನ ಏರಿಕೆಯೊಂದಿಗೆ ಒಟ್ಟಾರೆ 89 ರು. ಹೆಚ್ಚಳ ಆದಂತಾಗಿದೆ.

703 ರು. ನಷ್ಟ ಅನುಭವಿಸುತ್ತಿದ್ದವು

ಈಗಿನ ಪರಿಷ್ಕರಣೆಯ ಮೊದಲು ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 703 ರು. ನಷ್ಟ ಅನುಭವಿಸುತ್ತಿದ್ದವು. ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು ಕೂಡ ಕೆಲವೇ ದಿನಗಳಲ್ಲಿ 4 ಬಾರಿ ಏರಿಕೆ ಆಗಿ, ಸುಮಾರು 10 ರು.ನಷ್ಟು ಹೆಚ್ಚಳವಾಗಿದ್ದವು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸ್ವ ಕ್ಷೇತ್ರದ 20 ಗ್ರಾಪಂಗೆ ಇಂದು ಡಿಕೆ - ಸಿಎಂ ಕನಸು ನನಸು ಮಾಡಿದ ತವರಿಗೆ ಜನರಿಗೆ ಕೃತಜ್ಞತೆ
ಫಲಿಸಿದ ಸಂಧಾನ ರಾಜೀನಾಮೆ ಪಟ್ಟು ಬಿಟ್ಟ ಸಚಿವ ರಾಮಲಿಂಗಾ ರೆಡ್ಡಿ