ಮಹಾನಾಯಕರ ಲೂಟಿ ತಡೆಗೆ ಮೋದಿ ಜತೆ ಎಚ್ಡಿಕೆ ಕಳ್ಸಿದ್ದೇನೆ:ಗೌಡ

Published : Apr 15, 2024, 09:52 AM IST
Devegowda

ಸಾರಾಂಶ

ಇಡೀ ವಿಶ್ವದಲ್ಲಿಯೇ ಈ ದೇಶಕ್ಕೆ ಕೀರ್ತಿ ತಂದುಕೊಟ್ಟ 120 ಕೋಟಿ ಜನತೆಯ ಪ್ರಧಾನಿಯನ್ನು, 6 ಕೋಟಿ ಜನರ ಮುಖ್ಯಮಂತ್ರಿ ಲಘುವಾಗಿ ಮಾತನಾಡುವುದು ಎಷ್ಟು ಸರಿ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಮೈಸೂರು :  ಇಡೀ ವಿಶ್ವದಲ್ಲಿಯೇ ಈ ದೇಶಕ್ಕೆ ಕೀರ್ತಿ ತಂದುಕೊಟ್ಟ 120 ಕೋಟಿ ಜನತೆಯ ಪ್ರಧಾನಿಯನ್ನು, 6 ಕೋಟಿ ಜನರ ಮುಖ್ಯಮಂತ್ರಿ ಲಘುವಾಗಿ ಮಾತನಾಡುವುದು ಎಷ್ಟು ಸರಿ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ- ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮ ಮಾಡಿದ ಬಳಿಕ ಉಚಿತ ಘೋಷಣೆ ಮಾಡಿ ಇಬ್ಬರು ಮಹಾನಾಯಕರು ಈಗ ಆಳುತ್ತಿರುವರು ಎಂದು ಛೇಡಿಸಿದರು.

ನೀರಾವರಿ, ಬಿಬಿಎಂಪಿ, ನಗರಾಭಿವೃದ್ಧಿ ಸೇರಿದಂತೆ ಅನೇಕ ಕಡೆಗಳಲ್ಲಿ ಬಾಚಿದ್ದೋ ಬಾಚಿದ್ದು. ನನ್ನ 64 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಲುಟಿ ನೋಡಿಲ್ಲ ಎಂದ ಅವರು, ಈ ದೇಶಕ್ಕೆ ಕೀರ್ತಿ ತಂದ ವ್ಯಕ್ತಿ ಇದ್ದರೆ ಅದು ಮೋದಿ ಮಾತ್ರ. ನನಗೆ ತಲೆಯಲ್ಲಿ ಬುದ್ಧಿ ಇಲ್ಲದೆ ಕುಮಾರಸ್ವಾಮಿಗೆ ಬಿಜೆಪಿಗೆ ಹೋಗು ಅಂತ ಹೇಳಲಿಲ್ಲ. ರಾಜ್ಯದಲ್ಲಿ ಸೂರೆ ಮಾಡುವುದು ತಪ್ಪಿಸಲು ಮೋದಿ ಅವರ ಜತೆ ಹೋಗು ಅಂದೆ. ಇಬ್ಬರು ಮಹಾನುಭಾವರು ಈ ರಾಜ್ಯ ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ ಎಂದು ವ್ಯಂಗ್ಯವಾಡಿದರು.

ಮೋದಿ ಅವರು ಬಂದಾಗ ಎದ್ದು ನಿಂತು ಗೌರವ ಸಲ್ಲಿಸಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಟೆರರಿಸ್ಟ್ ಪ್ರಣಾಳಿಕೆ. ಭಯೋತ್ಪಾದಕರ ಉತ್ಪಾಪಾದನೆಯ ಗ್ಯಾರಂಟಿಯಂತಿದೆ. ಆನೆ ಹೋಗುವಾಗ ನಾಯಿ ಬೊಗಳಿದಂತೆ ರಾಜ್ಯ ಸರ್ಕಾರದ ನಾಯಕರಿಗೆ ಮೋದಿ ಬೈಯ್ಯುವುದೇ ಒಂದು ಗ್ಯಾರಂಟಿ ಆಗಿದೆ. ಈ ದೇಶದಲ್ಲಿ ಮೋದಿ ಅವರಿಗೆ ಮಾತ್ರ ಪ್ರಧಾನಿ ಆಗುವ ಯೋಗ್ಯತೆ ಇದೆ. ಕಾಂಗ್ರೆಸ್‌ ಧೂಳಿಪಟವಾಗಲಿದೆ.

- ಜಿ.ಟಿ. ದೇವೇಗೌಡ, ರಾಜ್ಯ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷರು

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ