;Resize=(412,232))
ಬೆಂಗಳೂರು : ನಾನು ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ. ಯಾರೊಂದಿಗೂ ಮಾತನಾಡಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಕೇಳಿದರೆ ಉತ್ತರ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಆಡಿಯೋ ವೈರಲ್ ವಿಚಾರವಾಗಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಪ ಮಾಡುವವರು ಸಾವಿರ ಜನ ಇರುತ್ತಾರೆ. ಆರೋಪಗಳಿಗೆ ಉತ್ತರ ಕೊಡುತ್ತಾ ಸಾಯುವ ವ್ಯಕ್ತಿ ನಾನಲ್ಲ. ಏನೇನು ಆಗುವುದೋ ನೋಡೋಣ. ಈ ವಿಚಾರ ಸಂಬಂಧ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಜತೆಗೆ ಮಾತನಾಡುತ್ತೇನೆ ಎಂದರು.
ಇದು ಗಂಭೀರವಾದ ವಿಚಾರ. ಮಾಧ್ಯಮಗಳು ತನಿಖೆ ಮಾಡಿ ಇದರ ಮೂಲ ಅರಿಯಿರಿ. ಪಕ್ಷದ ಆಂತರಿಕ ವಿಚಾರಗಳು ಬಾಹ್ಯವಾಗಿ ಚರ್ಚೆಯಾಗುತ್ತಿವೆ. ನಮ್ಮ ಪಕ್ಷದಲ್ಲಿ ಇದು ಆಗಬಾರದು. ನಾನು ಆ ಕೆಲಸ ಮಾಡಲು ಹೋಗಲ್ಲ. ನನ್ನದಲ್ಲದ ಸ್ವತ್ತಿನ ಬಗ್ಗೆ ನಾನು ಮಾತನಾಡಲ್ಲ ಎಂದು ಸದಾನಂದಗೌಡ ಹೇಳಿದರು.